Author: Nammur Express Admin

ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ! – ಮಧ್ಯಮಾವಧಿ, ಧೀರ್ಘಾವದಿ ಸಾಲದ ಮಿತಿಯನ್ನು 10 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿಗೆಏರಿಕೆ – ರೈತರು ಪಿಕ್ ಆಪ್ ಖರೀದಿಸಲು ಸಾಲ ವ್ಯವಸ್ಥೆ – ರೈತರಿಗೆ ಹಲವು ಯೋಜನೆ: ಕೃಷಿ ಯೋಜನೆಗೆ ಬಲ NAMMUR EXPRESS NEWS ಬೆಂಗಳೂರು: ರಾಜ್ಯದ ರೈತರಿಗೆ ಬಜೆಟ್ ಸಿಹಿ ಕೊಟ್ಟಿದೆ. ಸಾಲದ ಮಿತಿ ಹೆಚ್ಚಳದ ಜೊತೆಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿರುವ ಅಲ್ಪಾವದಿ ಸಾಲದ ಮಿತಿಯನ್ನು ಮೂರು ಲಕ್ಷ ರೂಪಾಯಿಯಿಂದ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಶೇ.3 ರ ಬಡ್ಡಿದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ಧೀರ್ಘಾವದಿ ಸಾಲದ ಮಿತಿಯನ್ನು 10 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25000 ಕೋಟಿ ರೂಪಾಯಿಗಳಷ್ಟು ಸಾಲ ವಿತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ. ಗೋದಾಮು ನಿರ್ಮಾಣಕ್ಕೆ ನೆರವು: ರೈತರು ತಮ್ಮ ಹಾಗೂ ನೆರೆಹೊರೆಯ…

Read More

ಬಡತನ ಹೋಗಲಾಡಿಸಲು “ಗ್ಯಾರಂಟಿ ಭಾಗ್ಯ”! – ಬಿಟ್ಟಿ ಎನ್ನುವವರಿಗೆ ಬಜೆಟ್‌ನಲ್ಲಿ ಚಾಟಿ ಬೀಸಿದ ಸಿಎಂ – ಮಹಿಳೆಯರ ಬದುಕು ಬಲ ನೀಡಲು “ಗೃಹ ಲಕ್ಷ್ಮಿ” – ದೇಶದ ದೊಡ್ಡ ಆರ್ಥಿಕ ಭದ್ರತಾ ಯೋಜನೆ! – ಪುನೀತ್ ಸ್ಮರಣಾರ್ಥ ಆಸ್ಪತ್ರೆಗಳಲ್ಲಿ ಹೈಟೆಕ್ ಯಂತ್ರ! – ಬಿಜೆಪಿ ಸರ್ಕಾರ ಜನ ವಿರೋಧಿ ಸರ್ಕಾರ ಎಂದ ಸಿಎಂ NAMMUR EXPRESS NEWS ಬೆಂಗಳೂರು: ಬಡತನ ಹೋಗಲಾಡಿಸಲು “ಗ್ಯಾರಂಟಿ ಭಾಗ್ಯ” ತಂದಿದ್ದೇವೆ. ಮಹಿಳೆಯರ ಬದುಕು ಬಲ ನೀಡಲು “ಗೃಹ ಲಕ್ಷ್ಮಿ” ತಂದಿದ್ದು ದೇಶದ ದೊಡ್ಡ ಆರ್ಥಿಕ ಭದ್ರತಾ ಯೋಜನೆ ಇದಾಗಿದೆ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಅನಾಹುತ ತಪ್ಪಿಸಲು ಎಇಡಿ ಹೈಟೆಕ್ ಯಂತ್ರ 6 ಕೋಟಿ ವೆಚ್ಚದಲ್ಲಿ ಆಳವಡಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಟ್ಟಿ ಎನ್ನುವವರಿಗೆ ಬಜೆಟ್‌ನಲ್ಲಿ ಚಾಟಿ ಬೀಸಿದ ಸಿಎಂ: ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಯೋಜನೆ ಎಂದು ಟೀಕೆ ಮಾಡುವವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಚಾಟಿ…

Read More

ಎಣ್ಣೆ ಇನ್ಮುಂದೆ ಕೈ ಸುಡುತ್ತೆ!: ಮದ್ಯ ತೆರಿಗೆ ಹೆಚ್ಚಳ! – ಅಬಕಾರಿ ತೆರಿಗೆ ಶೇ 20ರಷ್ಟು ಹೆಚ್ಚಳ, ಬಿಯರ್ ಮೇಲೆ ಶೇ 10ರಷ್ಟು ತೆರಿಗೆ ಹೆಚ್ಚಳ – ಅರೋಗ್ಯ ಕ್ಷೇತ್ರಕ್ಕೆ ಭರಪೂರ ಅನುದಾನ – ಶಾಲಾ ಮಕ್ಕಳಿಗೆ ಮೊಟ್ಟೆ, ತಿನ್ನದವರಿಗೆ ಬಾಳೆಹಣ್ಣು! NAMMUR EXPRESS NEWS ಬೆಂಗಳೂರು: ರಾಜ್ಯ ಬಜೆಟ್ ಅಲ್ಲಿ ಅಬಕಾರಿ ತೆರಿಗೆ ಶೇ 20ರಷ್ಟು ಹೆಚ್ಚಳ ಮಾಡಲಾಗಿದ್ದು ಬಿಯರ್ ಮೇಲೆ ಶೇ 10ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ತೆರಿಗೆ ಗುರಿ ಹೊಂದಲಾಗಿದೆ. ನಮ್ಮಮೆಟ್ರೊ, ಉಪನಗರ ರೈಲಿಗೆ 30ಸಾವಿರ ಕೋಟಿ ಅನುದಾನ ನೀಡಲಾಗಿದೆ. ಆಹಾರ ಇಲಾಖೆಗೆ 10 ಸಾವಿರ ಕೋಟಿ ಸಮಾಜ ಕಲ್ಯಾಣ ಇಲಾಖೆಗೆ 11 ಸಾವಿರ ಕೋಟಿ, ಲೋಕೋಪಯೋಗಿ ಇಲಾಖೆಗೆ 10 ಸಾವಿರ ಕೋಟಿ, ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡ್‌ಗೆ 710 ಕೋಟಿ, 100 ರೈತ ಉತ್ಪಾದನಾ ಕಂಪನಿಗಳಿಗೆ ಶೇ 4ರ ಬಡ್ಡಿದರದಲ್ಲಿ ಸಹಾಯಧನ ನೀಡಲಾಗುತ್ತದೆ. ಕೃಷಿ ಭಾಗ್ಯ ಯೋಜನೆಯಡಿ ನರೇಗಾ…

Read More

ಸಿದ್ದರಾಮಯ್ಯ ಬಜೆಟ್ ಯಾರಿಗೆ ಏನು ಸಿಗುತ್ತೆ? – ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ವರ್ಕ್ ಆಗುತ್ತೆ? – ಉದ್ಯೋಗ ಸೃಷ್ಟಿ, ಕೃಷಿ, ಉದ್ಯಮ ಬೆಳೆಸುತ್ತಾರಾ? – ಶಾಸಕಾಂಗ ಸಭೆ ಬಳಿಕ ಬಜೆಟ್ ಶುರು NAMMUR EXPRESS NEWS ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ರಾಜ್ಯ ಬಜೆಟ್‌ ಮಂಡನೆ ಮಾಡಲಿದ್ದು ಇಡಿ ರಾಜ್ಯದ ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ಹೊರಟಿದ್ದು, ಗ್ಯಾರಂಟಿ ಜೊತೆಗೆ ಯಾವೆಲ್ಲಾ ಯೋಜನೆ ಜಾರಿ ಮಾಡಲಿವೆ ಎಂಬ ಕುತೂಹಲ ಇದೆ. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್‌ ಬೊಮ್ಮಾಯಿ ಅವರು 3.09 ಲಕ್ಷ ಕೋಟಿ ರೂಪಾಯಿಗಳ ಪೂರಕ ಬಜೆಟ್‌ ಮಂಡಿಸಿದ್ದರು. ಈ ಬಾರಿ ಐದು ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂಪಾಯಿ ವೆಚ್ಚವಾಗುವುದರಿಂದ ಈ ಬಾರಿಯ ಬಜೆಟ್‌ ಗಾತ್ರವು 3.39 ಲಕ್ಷ ಕೋಟಿಗೆ ಏರಿಕೆ ಆಗಬಹುದು ಎನ್ನಲಾಗುತ್ತಿದೆ. ಗ್ಯಾರಂಟಿ ಹೇಗೆ ವರ್ಕ್ ಔಟ್ ಆಗುತ್ತೆ?: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈಗಾಗಲೇ ಗೃಹಲಕ್ಷ್ಮೀ…

Read More

ಕರಾವಳಿಯಲ್ಲಿ ಮಳೆಗೆ ಮತ್ತೆರಡು ಬಲಿ! – 3 ದಿನ ರಾಜ್ಯದಲ್ಲಿ ಭಾರೀ ಮಳೆ ಅಲರ್ಟ್! – ಕಾರ್ಕಳದಲ್ಲಿ ಆಲದ ಮರ ಬಿದ್ದು ಬೈಕ್ ಸವಾರ ಸಾವು – ದಕ್ಷಿಣ ಕನ್ನಡದ ನಂದಾವರದಲ್ಲಿ ಗುಡ್ಡ ಕುಸಿದು ಸಾವು NAMMUR EXPRESS NEWS ಮಂಗಳೂರು/ ಬೆಂಗಳೂರು: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಈ ನಡುವೆ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮತ್ತೆರಡು ಸಾವು ಸಂಭವಿಸಿದೆ. ಗುಡ್ಡ ಕುಸಿದು ಸಾವು: ಮನೆ ಮೇಲೆ ಗುಡ್ಡ ಕುಸಿದು ತಾಯಿ ಸಾವನ್ನು ಕಂಡಿದ್ದು ಮಗಳ ರಕ್ಷಣೆ ಮಾಡಲಾಗಿದೆ. ಬಂಟ್ವಳ ತಾಲೂಕಿನ ಸಜೀಪಮುನ್ನೂರು ಸಮೀಪದ ನಂದಾವರದಲ್ಲಿ ನಡೆದಿದೆ.ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ನಂದಾವರ ನಿವಾಸಿ ಮುಹಮ್ಮದ್ ರವರ ಪತ್ನಿ ಝರೀನಾ (47) ಎಂದು ಗುರುತಿಸಲಾಗಿದೆ. ಕಳೆದ ಒಂದು ವಾರಗಳಿಂದ ಜಿಲ್ಲೆಯಲ್ಲಿ ಬೀಸುತ್ತಿರುವ ಭೀಕರ ಮಳೆಗೆ ಮನೆಯ ಹಿಂಬದಿಯ ಗುಡ್ಡ ಜರಿದು ಝರೀನಾ ರವರ…

Read More

ಸಿದ್ದು ಸರ್ಕಾರದ ಬಜೆಟ್ ಸಸ್ಪೆನ್ಸ್! – ಜು.7ಕ್ಕೆ ರಾಜ್ಯ ಬಜೆಟ್: ಕ್ಷಣಗಣನೆ ಶುರು – 14ನೇ ದಾಖಲೆ ಬಜೆಟ್ ಮಂಡಿಸಲಿದ್ದಾರೆ ಸಿದ್ದರಾಮಯ್ಯ! NAMMUR EXPRESS NEWS ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಶುಕ್ರವಾರ ಮಂಡನೆಯಾಗಲಿದೆ. ರಾಜ್ಯದಲ್ಲಿ 2ನೇ ಬಾರಿಗೆ ಸಿಎಂ ಆಗಿರುವ ಸಿದ್ದರಾಮಯ್ಯ 14ನೇ ಬಜೆಟ್ ಮಂಡಿಸಲಿದ್ದು, ರಾಜ್ಯದ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆಯಾಗಲಿದೆ. ಈ ಹಿಂದೆ ಸಿಎಂ ಆಗಿದ್ದ ರಾಮಕೃಷ್ಣಹೆಗಡೆಯವರು 13 ಬಜೆಟ್ ಮಂಡಿಸಿದ್ದರು. ಗ್ಯಾರಂಟಿಗೆ ಹೆಚ್ಚು ಹಣ?: ಬಜೆಟ್ ಅಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಹೇಗೆ ಎಂಬ ಪ್ರಶ್ನೆಗೆ ಬಜೆಟ್ ಉತ್ತರ ನೀಡಲಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಜಾಣ್ಮೆಯ ಬಜೆಟ್ ಮಾಡಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು? HOW TO APPLY : NEET-UG COUNSELLING 2023

Read More

ಕರಾವಳಿ ಶಾಲೆ ಕಾಲೇಜುಗಳಿಗೆ ಜು.7ಕ್ಕೆ ರಜೆ! – ಭಾರೀ ಮಳೆ: ಹಲವೆಡೆ ಅನಾಹುತ – ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ರಜೆ – ಕರಾವಳಿಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಉಡುಪಿ/ಮಂಗಳೂರು/ಕಾರವಾರ!: ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಹಲವು ಅವಾಂತರ ಸೃಷ್ಟಿ ಮಾಡಿದೆ. ಕಟ್ಟಡಗಳು, ರಸ್ತೆ, ಧರೆ ಕುಸಿತ ಸಂಭವಿಸಿದೆ. ನದಿ, ಹಳ್ಳ ಕೊಳ್ಳಗಳು ತುಂಬಿ ಅಪಾಯದ ಹಂತದಲ್ಲಿವೆ. ಅತಿಯಾದ ಮಳೆ ಹಿನ್ನೆಲೆ ಉಡುಪಿ ಹಾಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ7 ರಂದು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರಕಾರಿ, ಅನುದಾನಿತ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಉಡುಪಿ, ಮಂಗಳೂರು ನಗರದಲ್ಲಿ ಮಳೆ ಹಲವು ಅನಾಹುತ ಸೃಷ್ಟಿ ಮಾಡಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಉಡುಪಿ ನಗರ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶ ಸಂಪೂರ್ಣವಾಗಿ ಜಲಾವೃತವಾಗಿದೆ. ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ದಾಖಲೆಯ…

Read More

ತೀರ್ಥಹಳ್ಳಿಯ ಹಲವು ಹಳ್ಳಿಗಳಿಗೆ ಸರ್ಕಾರಿ ಬಸ್! – ಸಾರಿಗೆ ಸಚಿವರಿಗೆ ಮಂಜುನಾಥ ಗೌಡ ಪತ್ರ – ಎಲ್ಲೆಲ್ಲಿಗೆ ಬಸ್ ಬಿಡಲು ಮನವಿ… ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಕೆಲವು ಭಾಗಗಳಿಗೆ ಸರ್ಕಾರಿ ಬಸ್ ಕಲ್ಪಿಸುವಂತೆ ಸಾರಿಗೆ ಸಚಿವರಿಗೆ ಸಹಕಾರಿ ನಾಯಕ, ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ್ ಗೌಡ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಬಹುತೇಕ ಕಡೆ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಅನುಕೂಲ ಆಗುತ್ತಿದೆ. ಆದ್ದರಿಂದ ತೀರ್ಥಹಳ್ಳಿ ಭಾಗದವರಿಗೂ ಅನುಕೂಲ ಆಗುವಂತೆ ಅನೇಕ ಮಾರ್ಗದಲ್ಲಿ ಸರ್ಕಾರಿ ಬಸ್ ಬಿಡುವಂತೆ ಮನವಿ ಮಾಡಲಾಗಿದೆ. ಈ ಭಾಗಗಳಲ್ಲಿ ಸರ್ಕಾರಿ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ರೈತರಿಗೆ, ಮಹಿಳೆಯರಿಗೆ, ಕೆಲಸ ನಿರ್ವಹಿಸುವ,ಯುವಕ ಯುವತಿಯರಿಗೆ ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ತಕ್ಷಣ ಈ ಮಾರ್ಗಗಳಿಗೆ ಸರ್ಕಾರಿ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು, ಈ ಮಾರ್ಗಗಳಲ್ಲಿ ಖಾಸಗಿ ಬಸ್ಸಿನ ವ್ಯವಸ್ಥೆಯು ಸಹ ಇರುವುದಿಲ್ಲ ಈ ಬಗ್ಗೆ ತಕ್ಷಣ ಗಮನ…

Read More

ಮಲೆನಾಡ ಕೆಲವು ಕಡೆ ರಜೆ ಘೋಷಣೆ! – ಚಿಕ್ಕಮಗಳೂರು ತಾಲೂಕಿನ ಆಯ್ದ ಭಾಗದ ಶಾಲೆಗಳಿಗೆ ರಜೆ ಘೋಷಣೆ – ಮಲೆನಾಡಲ್ಲಿ ಮುಂದುವರಿದ ಮಳೆ ಅಬ್ಬರ – ತುಂಬಿ ಹರಿಯುತ್ತಿರುವ ನದಿಗಳು!:ಎಚ್ಚರ ಎಚ್ಚರ NAMMUR EXPRESS NEWS ಚಿಕ್ಕಮಗಳೂರು; ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾರಿ ಮಳೆಯಾಗುತ್ತಿದೆ. ಚಿಕ್ಕಮಗಳೂರು, ಕಳಸ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲೆಲ್ಲಿ ರಜೆ?: ಚಿಕ್ಕಮಗಳೂರು ತಾಲೂಕಿನ ಜಾಗರ, ವಸ್ತಾರೆ, ಖಾಂಡ್ಯ, ಆಲ್ಲೂರು ಹಾಗೂ ಆವತಿ ಹೋಬಳಿಗಳಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವುದರಿಂದ ಶಾಲಾ ಮಕ್ಕಳಿಗೆ ಹೋಗಲು ತೊಂದರೆಯಾಗುತ್ತಿದ್ದು ಹಾಗೂ ಹಲವು ಶಾಲೆಯ ಕಟ್ಟಡಗಳು, ಹಳೆಯದಾಗಿದ್ದು, ದುರಸ್ತಿ ಅಗತ್ಯವಿರುತ್ತದೆ. ಈ ಸಂಬಂಧ ಮುಂಜಾಗ್ರತ ಕ್ರಮವಾಗಿ ಶುಕ್ರವಾರ ಮೇಲ್ಕಂಡ ಶಾಲೆಗಳಿಗೆ ರಜೆ ಘೋಷಿಸಿ ಬಿಇಓ ಆದೇಶ ಹೊರಡಿಸಿದ್ದಾರೆ. ತುಂಬಿ ಹರಿಯುತ್ತಿರುವ ನದಿಗಳು!: ಭದ್ರಾನದಿಯಲ್ಲಿ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭದ್ರಾನದಿ ಸೇರಿದಂತೆ…

Read More

ತೀರ್ಥಹಳ್ಳಿಯ ಸಾನ್ವಿ ರಾಷ್ಟ್ರಮಟ್ಟದ ಕರಾಟೆಯಲ್ಲಿ ರನ್ನರ್! – ದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ – ಸಾಧಕ ಕ್ರೀಡಾಪಟುಗೆ ತೀರ್ಥಹಳ್ಳಿಗರ ಅಭಿನಂದನೆ NAMMUR EXPRESS NEWS ತೀರ್ಥಹಳ್ಳಿ: ಜೂನ್ 21 ರಿಂದ ಜೂನ್ 23ರವರೆಗೆ ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಕರಾಟೆ ಫೆಡರೇಶನ್ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡದ ಸಾನ್ವಿ ಜೋಯಿಸ್ ಭಾಗವಹಿಸಿ ಸಬ್ ಜೂನಿಯರ್ ಬಾಲಕಿಯರ ಕುಮಿಟೆ ಮೈನಸ್ 40 ಕೆಜಿ ತೂಕದ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ತೀರ್ಥಹಳ್ಳಿಯ ಎಂಜೆ ಸ್ಕೂಲ್ ಆಫ್ ಮಾರ್ಷಿಯಲ್ ಆರ್ಟ್ಸ್ ಮಾಸ್ಟರ್ ಮಹಾಬಲ ಜೋಯ್ಸ್ ಮತ್ತು ಅರ್ಚನಾ ಜೋಯ್ಸ್ ಅವರ ಪುತ್ರಿ ಸಾನ್ವಿ ಜೋಯ್ಸ್ ಅವರು ತೀರ್ಥಹಳ್ಳಿಯ ವಾಗ್ದೆವಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು? HOW TO APPLY : NEET-UG COUNSELLING 2023

Read More