ಬಸ್ ಪ್ರಯಾಣಿಕರಿಗೆ ಮತ್ತೊಂದು ಶಾಕ್!
– ಖಾಸಗಿ ಬಸ್ ಟಿಕೆಟ್ ದರ ಏರಿಕೆ!
– ದರ ಏರಿಸದಿದ್ದರೆ ಖಾಸಗಿ ಬಸ್ ಉದ್ಯಮ ಸ್ಥಗಿತ ಸಾಧ್ಯತೆ
– ಆದ್ದರಿಂದ ದರ ಏರಿಸುವುದು ಅನಿವಾರ್ಯ: ಬಸ್ ಸಂಘದ ಪ್ರಮುಖರು!
NAMMUR EXPRESS NEWS
ಬೆಂಗಳೂರು: ಕರ್ನಾಟಕದಾದ್ಯಂತ ಖಾಸಗಿ ಬಸ್ ಟಿಕೆಟ್ ದರ ಏರಿಕೆಯಾಗಲು ಖಾಸಗಿ ಬಸ್ಗಳ ಒಕ್ಕೂಟ ತೀರ್ಮಾನಿಸಿದೆ.
ಇತ್ತೀಚೆಗಷ್ಟೇ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದೆ. ಇದೀಗ ಖಾಸಗಿ ಬಸ್ ಸರದಿ. ರಾಜ್ಯದಾದ್ಯಂತ ಖಾಸಗಿ ಬಸ್ಸುಗಳ ಟಿಕೆಟ್ ದರವನ್ನು ಹೆಚ್ಚು ಮಾಡಲು ಖಾಸಗಿ ಬಸ್ಸು ಒಕ್ಕೂಟ ನಿರ್ಧರಿಸಿದೆ. ಈ ಬಗ್ಗೆ ಮುಂದಿನ ವಾರವೇ ಅಧಿಕೃತ ಪ್ರಕಟಣೆ ಪ್ರಕಟವಾಗುವ ಸಾಧ್ಯತೆ ಇದೆ.
ಲೀಟರ್ ಪ್ರತಿ ಡೀಸೆಲ್ ದರ ಸುಮಾರು ಐದು ರೂಪಾಯಿ ಏರಿಕೆಯಾಗಿದೆ. ಟೋಲ್ ದರ ಕೂಡ ಹೆಚ್ಚಾಗುತ್ತದೆ. ದರ ಏರಿಸದಿದ್ದರೆ ಖಾಸಗಿ ಬಸ್ ಉದ್ಯಮ ಸ್ಥಗಿತಗೊಳ್ಳುತ್ತದೆ. ಪ್ರತಿ ಬಸ್ ನಿರ್ವಹಣೆಗೆ ಸದ್ಯ 18 ರಿಂದ 20 ಸಾವಿರ ರೂಪಾಯಿ ಹೆಚ್ಚುವರಿ ಖರ್ಚು ಬರುತ್ತಿದೆ. ಆದ್ದರಿಂದ ದರ ಏರಿಸುವುದು ಅನಿವಾರ್ಯ ಎಂದು ಬಸ್ನ ಸಂಘದ ಪ್ರಮುಖರು ಹೇಳಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಹೇಳಿದ್ದಾರೆ.







