ಮಲೆನಾಡಲ್ಲಿ ಸಂಘಟನೆ ಮರೆತ ಕಾಂಗ್ರೆಸ್ ಮುಖಂಡರು, ನಾಯಕರು.!?
– ಶಿವಮೊಗ್ಗ, ಉಡುಪಿ ಚಿಕ್ಕಮಗಳೂರು 2 ಜಿಲ್ಲೆಗಳಲ್ಲೂ ಕಾಂಗ್ರೆಸ್ ಹೀನಾಯ ಸೋಲು
– ಪರಿಷತ್ ಚುನಾವಣೆಯಲ್ಲೂ ಕೂಡ ನೀರಸ ವಿಫಲ
– ದೇಶದಲ್ಲಿ ಸಕ್ಸಸ್ ಆದ್ರು ಮಲೆನಾಡಿನಲ್ಲಿ ಸಂಘಟನೆ ಕುಗ್ಗಿತೇ?
– ಮಧು ಬಂಗಾರಪ್ಪ, ಕಾಂಗ್ರೆಸ್ ಶಾಸಕರು, ನಾಯಕರ ಪ್ಲಾನ್ ಫೇಲ್
NAMMUR EXPRESS NEWS
ಶಿವಮೊಗ್ಗ/ಚಿಕ್ಕಮಗಳೂರು: ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಮಲೆನಾಡಲ್ಲಿ ಕಾಂಗ್ರೆಸ್ ಹೀನಾಯ ಕಂಡಿದೆ.
ಕಾಂಗ್ರೆಸ್ ನಾಯಕರಾದ ಮಧು ಬಂಗಾರಪ್ಪ ಇದ್ದು ಕೂಡ ಹಾಗೂ ಮೂರು ಮಂದಿ ಶಾಸಕರು ಇದ್ದರೂ ಕೂಡ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆಲುವು ಪಡೆದುಕೊಂಡಿದೆ. ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಅಲ್ಲಿ ಕಾಂಗ್ರೆಸ್ ನೆಲಕಚ್ಚಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಕೂಡ ಎರಡು ಸ್ಥಾನ ಬಿಜೆಪಿ ಮೈತ್ರಿ ಪಡೆದುಕೊಂಡಿದೆ.
ಬಿವೈ ರಾಘವೇಂದ್ರ 4ನೇ ಬಾರಿಗೆ ಬಾರಿ ಬಹುಮತದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದೀಗ ಎಲ್ಲೆಡೆ ಎದ್ದಿರುವಂತಹ ಪ್ರಶ್ನೆ ಕಾಂಗ್ರೆಸ್ ನಾಯಕರು, ಮುಖಂಡರ ನಡುವೆ ಸಂಘಟನೆ ಕೊರತೆ!.
ಹೌದು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ನಡುವೆಯೂ ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆಯಲ್ಲಿ ಗೆಲ್ಲುವಲ್ಲಿ ವಿಫಲವಾಗಿದೆ. ಜೊತೆಗೆ ತನ್ನ ಸಹೋದರಿಯನ್ನು ಗೆಲ್ಲಿಸಿಕೊಂಡು ಬರಲು ಮಧು ಬಂಗಾರಪ್ಪ ವಿಫಲರಾಗಿದ್ದಾರೆ. ಸಂಘಟನೆಯ ಕೊರತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜನರ ನಡುವೆ ಸಂಪರ್ಕ ಸಾಧಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಈ ಹೊಣೆಯನ್ನು ಎಲ್ಲಾ ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಮುಖಂಡರು, ನಾಯಕರು ಹೊರಬೇಕಿದೆ.
ಶಾಸಕರ ಊರಲ್ಲೂ ಬಿಜೆಪಿ ಲೀಡ್
ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ, ಸೊರಬದಲ್ಲಿ ಮಧು ಬಂಗಾರಪ್ಪ, ಭದ್ರಾವತಿಯಲ್ಲಿ ಸಂಗಮೇಶ್ ಸೇರಿದಂತೆ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಪ್ರಮುಖ ನಾಯಕರಿದ್ದಾರೆ. ಇನ್ನು ಸಹಕಾರಿ ಕ್ಷೇತ್ರದ ನಾಯಕರಾದ ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಹೀಗೆ ಅನೇಕ ನಾಯಕರ ದಂಡೆ ಇದ್ದರೂ, ಕಾಂಗ್ರೆಸ್ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ಪಡೆಯಲು ಸಾಧ್ಯವಾಗಿಲ್ಲ. ಈ ಪ್ರಶ್ನೆ ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ.
ಇತ್ತ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಫೇಲ್!
ಚಿಕ್ಕಮಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದರೂ ಕೂಡ ಇಲ್ಲಿ ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಬರಲಿಲ್ಲ, ಎಲ್ಲಾ ಕಡೆ ಕೋಟ ಶ್ರೀನಿವಾಸ್ ಪೂಜಾರಿಯವರು ಲೀಡ್ ಪಡೆದುಕೊಂಡಿದ್ದು, ಅದ್ಭುತವಾಗಿ ಗೆಲುವು ಸಾಧಿಸಿದ್ದಾರೆ. ಇವರು ಕೂಡ ಸುಮಾರು 2,59,175 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಜೊತೆಗೆ ಎಲ್ಲಾ ತಾಲೂಕು ಕ್ಷೇತ್ರಗಳಲ್ಲೂ ಮುನ್ನಡೆ ಪಡೆದುಕೊಂಡಿದ್ದಾರೆ. ಇಲ್ಲಿ ಕೂಡ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಪ್ರಮುಖ ನಾಯಕರು ಇದ್ದಾರೆ. ಆದರೆ ಸಂಘಟನೆ ಫೇಲ್ ಆಗಿದೆ.
ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ!
ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅನೇಕ ಅವಕಾಶಗಳಿದ್ದರೂ ಪಕ್ಷ ಬಲವರ್ಧನೆ ಆಗುತ್ತಿಲ್ಲ. ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ನಡುವೆ ಗೊಂದಲವಿದೆ. ಜೊತೆಗೆ ಎರಡನೇ ಹಂತ ಹಾಗೂ ಮೊದಲನೇ ಹಂತದ ನಾಯಕರ ನಡುವೆ ಅಂತರ ಕಾಯ್ದುಕೊಳ್ಳಲು ಎರಡು ಪ್ರಮುಖ ನಾಯಕರು ಪ್ಲಾನ್ ಮಾಡುತ್ತಿದ್ದಾರೆ. ಇದರಿಂದಾಗಿ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ ಎಂಬ ಕಾರ್ಯಕರ್ತರ ಅಳಲು ಈಗ ಕೇಳಿಬಂದಿದೆ. ಕಾರ್ಯಕರ್ತರು ತಮ್ಮ ಕೆಲಸ ಮಾಡುತ್ತಿದ್ದರು, ನಾಯಕರ ಆಜ್ಞೆಯನ್ನು ಕಾಯಬೇಕಿದೆ ಹೀಗಾಗಿ ಮಲೆನಾಡಿನಲ್ಲಿ ಕಾಂಗ್ರೆಸ್ ಬ್ರೇಕ್ ಫೇಲ್ ಆಗಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಷ್ಟು ಲೀಡ್?
ಚಿಕ್ಕಮಗಳೂರು: ವಿಧಾನಸಭಾ ಕ್ಷೇತ್ರದಲ್ಲಿ ಕೋಟ
ಶ್ರೀನಿವಾಸ ಪೂಜಾರಿ ಅವರು 92,788 ಮತಗಳನ್ನು ಪಡೆದರೆ
ಕೆ. ಜಯಪ್ರಕಾಶ್ ಹೆಗ್ಡೆಯವರು 68,995 ಮತಗಳನ್ನು ಗಳಿಸಿದ್ದು, ಪೂಜಾರಿಯವರು 23,793 ಮತಗಳ ಅಂತರ ಸಾಧಿಸಿದ್ದಾರೆ.
ತರೀಕೆರೆ: ಕೋಟ ಶ್ರೀನಿವಾಸ ಪೂಜಾರಿಯವರು 80,995 ಮತಗಳನ್ನು ಗಳಿಸಿದರೆ ಕೆ. ಜಯಪ್ರಕಾಶ್ ಹೆಗ್ಡೆ ಅವರು 60,314 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಲೀಡ್ 20,681 ಮತಗಳು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲೆಲ್ಲಿ ಲೀಡ್?
ಶಿವಮೊಗ್ಗದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ರಾಘವೇಂದ್ರ ಅವರು 7,78,721, ಗೀತಾ ಶಿವರಾಜ್ ಕುಮಾರ್ 5,35,006, ಈಶ್ವರಪ್ಪ 30,050 ಮತ ಗಳಿಸಿದ್ದು, ರಾಘವೇಂದ್ರ 2,43,715 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ : ಬಿ ವೈ ರಾಘವೇಂದ್ರ ಅವರು 106243 ಮತಗಳನ್ನು ಗಳಿಸಿದ್ದರೆ, ಗೀತಾ ಶಿವರಾಜ್ ಕುಮಾರ್ ಅವರು 66575 ಮತಗಳನ್ನು ಗಳಿಸಿದ್ದಾರೆ, ಕೆಎಸ್ ಈಶ್ವರಪ್ಪ ಅವರು 555 ಮತಗಳನ್ನು ಗಳಿಸಿದ್ದು ಇಲ್ಲಿ ಬಿ ವೈ ರಾಘವೇಂದ್ರ ಅವರ ಲೀಡ್ 39668 ಆಗಿದೆ.
ಭದ್ರಾವತಿ : ಭದ್ರಾವತಿಯಲ್ಲಿ ಬಿ ವೈ ರಾಘವೇಂದ್ರ ಅವರು 84208 ಮತಗಳನ್ನು ಗಳಿಸಿದ್ದು ಗೀತಾ ಶಿವರಾಜ್ ಕುಮಾರ್ ಅವರು 65105 ಮತಗಳಿದ್ದಾರೆ, ಕೆಎಸ್ ಈಶ್ವರಪ್ಪನವರು 3267 ಮತ ಗಳಿಸಿದ್ದಾರೆ. ಬಿ ವೈ ರಾಘವೇಂದ್ರ ಅವರ ಲೀಡ್ 19103 ಆಗಿದೆ.
ತೀರ್ಥಹಳ್ಳಿ: ಬಿ ವೈ ರಾಘವೇಂದ್ರ ಅವರು 92993 ಮತಗಳಿಸಿದು ಗೀತಾ ಶಿವರಾಜ್ ಕುಮಾರ್ ಅವರು 57444 ಮತಗಳಿಸಿದ್ದು ಕೆ ಎಸ್ ಈಶ್ವರಪ್ಪನವರು 2529 ಮತಗಳಿಸಿದ್ದಾರೆ. ಇಲ್ಲಿಗೆ ಬಿ ವೈ ರಾಘವೇಂದ್ರ ಅವರ ಲೀಡ್ 35549 ಆಗಿದೆ.
ಶಿಕಾರಿಪುರ: ಬಿ ವೈ ರಾಘವೇಂದ್ರ ಅವರು 87153 ಮತಗಳಿಸಿದು ಗೀತಾ ಶಿವರಾಜ್ ಕುಮಾರ್ ಅವರು 75672 ಮತ ಗಳಿಸಿದ್ದು, ಕೆಎಸ್ ಈಶ್ವರಪ್ಪನವರು 1969 ಮತಗಳಿಸಿದ್ದಾರೆ. ಬಿ ವೈ ರಾಘವೇಂದ್ರ ಅವರ ಲೀಡ್ 11483 ಆಗಿದೆ.
ಸೊರಬ : ಬಿವೈ ರಾಘವೇಂದ್ರ ಅವರು 88170 ಮತಗಳಿಸಿದು ಗೀತಾ ಶಿವರಾಜ್ ಕುಮಾರ್ ಅವರು 70233 ಮತಗಳಿಸಿದ್ದು ಕೆ ಎಸ್ ಈಶ್ವರಪ್ಪನವರು 415 ಮತಗಳಿಸಿದ್ದಾರೆ.ಇಲ್ಲಿಗೆ ಬಿ ವೈ ರಾಘವೇಂದ್ರ ಅವರ ಲೀಡ್ 17937 ಆಗಿದೆ.
ಸಾಗರ : ಬಿ ವೈ ರಾಘವೇಂದ್ರ ಅವರು 95209 ಮತಗಳಿಸಿದ್ದು ಗೀತಾ ಶಿವರಾಜ್ ಕುಮಾರ್ ಅವರು 68690 ಮತಗಳಿಸಿದ್ದು ಕೆ ಎಸ್ ಈಶ್ವರಪ್ಪನವರು 778 ಮತಗಳಿಸಿದ್ದಾರೆ. ಇಲ್ಲಿಗೆ ಬಿ ವೈ ರಾಘವೇಂದ್ರ ಅವರ ಲೀಡ್ 26519 ಆಗಿದೆ.
ಬೈಂದೂರು : ಬಿ ವೈ ರಾಘವೇಂದ್ರ ಅವರು 115486 ಮತ ಗಳಿಸಿದ್ದು, ಗೀತಾ ಶಿವರಾಜಕುಮಾರ್ ಅವರು 58724 ಮತಗಳಿಸಿದ್ದು ಕೆ ಎಸ್ ಈಶ್ವರಪ್ಪನವರು 3292 ಮತಗಳಿದ್ದಾರೆ, ಇಲ್ಲಿಗೆ ಬಿ ವೈ ರಾಘವೇಂದ್ರ ಅವರ ಲೀಡ್ 56762 ಆಗಿದೆ.