Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿ ಟಾಪ್ 3 ನ್ಯೂಸ್

ತೀರ್ಥಹಳ್ಳಿ ಟಾಪ್ 3 ನ್ಯೂಸ್

ತೀರ್ಥಹಳ್ಳಿ ವ್ಯಾಪ್ತಿಯ ಹೊಂಡ ಬಿದ್ದ ರಸ್ತೆಗಳಿಗೆ ಟಾರು ಭಾಗ್ಯ!

– ತೀರ್ಥಹಳ್ಳಿಯಲ್ಲಿ ನಾಳೆ ಸಾಂಬಾರು ಬೆಳೆಗಳ ವೈವಿಧ್ಯತೆ, ಸುಸ್ಥಿರ ಅಭಿವೃದ್ಧಿ ಹಾಗೂ ನರ್ಸರಿ ನಿರ್ವಹಣೆ ಕಾರ್ಯಕ್ರಮ

– ಕುಡುಮಲ್ಲಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪದ್ಮ ಅನಂದ ಆಯ್ಕೆ

ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬಿದ್ದಿದ್ದ ಹೊಂಡಗಳಿಗೆ ಮುಕ್ತಿ ಸಿಕ್ಕಿದೆ.
ಪಟ್ಟಣದ ಸಾರ್ವಜನಿಕರಿಂದ ಪಟ್ಟಣ ಪಂಚಾಯಿತಿಗೆ ದೂರು ಬಂದಿದ್ದು ಇದನ್ನ ಏಪ್ರಿಲ್ ನಲ್ಲಿ ಟೆಂಡರ್ ಆಗಿದ್ದು ಮಳೆಯ ಕಾರಣ ಟೆಂಡರ್ ಪ್ರಕ್ರಿಯೆಯನ್ನ ಸ್ಥಗಿತಗೊಳಿಸಲಾಗಿತ್ತು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಅಂದಾಜು 5ಲಕ್ಷ ವೆಚ್ಚದಲ್ಲಿ ಮಾಡಲಾಗುತ್ತಿದೆ. ಇದರ ಜೊತೆ ಜೊತೆಗೆ ಗಾಂಧಿನಗರದ ಚರಂಡಿ ಕಾಮಗಾರಿ, ಕೋದಂಡರಾಮ ದೇವಸ್ಥಾನದ ರಸ್ತೆ ಕಾಮಗಾರಿ, ವಾಲಿಬಾಲ್ ಕೋರ್ಟಿನ ಫೆನ್ಸಿಂಗ್ ಕಾಮಗಾರಿಗಳು ನಡೆಯುತ್ತಿದ್ದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪಂಚಾಯಿತಿ ಅಧ್ಯಕ್ಷ ರೆಹಮತ್ ಉಲ್ಲ ಅಸಾದಿ ವೀಕ್ಷಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಸುಶೀಲಾ ಶೆಟ್ಟಿ ಮುಖ್ಯಧಿಕಾರಿ ನಾಗರಾಜ್, ಅಭಿಯಂತಕರಾದ ಸತೀಶ್, ಗುತ್ತಿಗೆದಾರರಾದ ನಾಗರಾಜ್, ವಿಜೇತ್‌ ಮತ್ತು ಅಜಗರ್‌ ಉಪಸ್ಥಿತರಿದ್ದರು.

ತೀರ್ಥಹಳ್ಳಿಯಲ್ಲಿ ನಾಳೆ ಸಾಂಬಾರು ಬೆಳೆಗಳ ವೈವಿಧ್ಯತೆ, ಸುಸ್ಥಿರ ಅಭಿವೃದ್ಧಿ ಹಾಗೂ ನರ್ಸರಿ ನಿರ್ವಹಣೆ ಕಾರ್ಯಕ್ರಮ

ತೀರ್ಥಹಳ್ಳಿ: ಭಾರತೀಯ ಸಾಂಬಾರು ಮಂಡಳಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ತಾಲ್ಲೂಕು ಪಂಚಾಯತ್, ತೀರ್ಥಹಳ್ಳಿ ಮಲ್ನಾಡ್ ಕ್ಲಬ್ (ರಿ.), ತೀರ್ಥಹಳ್ಳಿ ವಿಹಂಗಮ ಪರಿಸರ ಅಧ್ಯಯನ ಕೇಂದ್ರ ಸಹಯೋಗದಲ್ಲಿ ಸಾಂಬಾರು ಬೆಳೆಗಳ ವೈವಿಧ್ಯತೆ, ಸುಸ್ಥಿರ ಅಭಿವೃದ್ಧಿ ಹಾಗೂ ನರ್ಸರಿ ನಿರ್ವಹಣೆ ಕುರಿತು ಕಾರ್ಯಾಗಾರ ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮ 19-11-2025 ರ ಬುಧವಾರ ಸಮಯ : ಬೆಳಿಗ್ಗೆ ಗಂಟೆ 10-00 ರಿಂದ ಸ್ಥಳ : ಗ್ರಾಮೀಣಾಭಿವೃದ್ಧಿ ಭವನದ ತಾಲ್ಲೂಕು ಪಂಚಾಯತ್ ಸಭಾಂಗಣ, ತೀರ್ಥಹಳ್ಳಿ ಇಲ್ಲಿ ನಡೆಯಲಿದೆ.
ಅಧ್ಯಕ್ಷತೆ :ಶ್ರೀ ವಡ್ನಾಳ್ ಜಗದೀಶ್ ಮಾನ್ಯ ಅಧ್ಯಕ್ಷರು, ಕರ್ನಾಟಕ ಜೀವ ವೈವಿಧ್ಯ ಮಂಡಳಿ (ಜೀವಿ ಪರಿಸ್ಥಿತಿ & ಪರಿಸರ) ಅರಣ್ಯ ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಉಪಸ್ಥಿತಿ :ಶ್ರೀ ಜಗತ್ ರಾಮ್, ಭಾ.ಆ.ಸೇ.ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು & ಸದಸ್ಯ ಕಾರ್ಯದರ್ಶಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ (ಜೀವಿ ಪರಿಸ್ಥಿತಿ & ಪರಿಸರ) ಅರಣ್ಯ ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಶ್ರೀಮತಿ ಶೈಲಾ ಎನ್., ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ತೀರ್ಥಹಳ್ಳಿ ಡಾ. ಎಚ್.ಎಸ್. ಶ್ರೀನಿವಾಸ್, ನಿವೃತ್ತ ನಿರ್ದೇಶಕರು, ಭಾರತೀಯ ಸಾಂಬಾರು ಮಂಡಳಿ, ಶ್ರೀ ಬಿಳುವೆ ಪ್ರವೀಣ್, ಅಧ್ಯಕ್ಷರು, ಮಲ್ನಾಡ್ ಕ್ಲಬ್ (ರಿ.), ತೀರ್ಥಹಳ್ಳಿ ಶ್ರೀ ಕಡಿದಾಳ್‌ ದಯಾನಂದ್, ವಿಹಂಗಮ ಪರಿಸರ ಅಧ್ಯಯನ ಕೇಂದ್ರ,
ಸಂಪನ್ಮೂಲ ವ್ಯಕ್ತಿಗಳು : ಶ್ರೀ ಸುನೀಲ್‌ಕುಮಾರ್ ಜಿ. ವ್ಯವಸ್ಥಾಪಕರು, ಇಲಾಖಾ ನರ್ಸರಿ, ಬೆಳಗೊಳ. ಬೆಳಿಗ್ಗೆ 10.00- 1.30 : ಮಾಹಿತಿ ಕಾರ್ಯಾಗಾರ, ಮಧ್ಯಾಹ್ನ 1.30- 2.30 ರವರೆಗೆ : ಭೋಜನ ವಿರಾಮ ಮಧ್ಯಾಹ್ನ 2.30 ಗಂಟೆಗೆ ಹೊರಟು ಹೊಸನಗರ ತಾಲ್ಲೂಕು ರಿಪ್ಪನ್‌ ಪೇಟೆಯ ಶ್ರೀ ಜೋಸೆಫ್ ಚಾಕೋ ರವರ ನರ್ಸರಿ ಹಾಗೂ ತೋಟ ವೀಕ್ಷಣೆ. ತಾಲ್ಲೂಕಿನ ಸಮಸ್ತ ಆಸಕ್ತ ರೈತರು ಭಾಗವಹಿಸಿ, ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಕೋರಿದೆ.
ರೈತರು ತಮ್ಮ ಹೆಸರು ನೊಂದಾಯಿಸಲು ಸಂಪರ್ಕಿಸಿ : 1. ರಾಜೇಶ್, ತಾಲ್ಲೂಕು ಪಂಚಾಯತ್ : 9480395073, ಶರತ್ ಮಲ್ನಾಡ್ ಕ್ಲಬ್ – 8296316835. ಸರ್ವರನ್ನು ಸ್ವಾಗತಿಸಲಾಗಿದೆ.

ಕುಡುಮಲ್ಲಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪದ್ಮ ಅನಂದ ಆಯ್ಕೆ

ಕುಡುಮಲ್ಲಿಗೆ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪದ್ಮ ಆನಂದ್ ಸೋಮವಾರ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಕೇವಲ ಎರಡು ತಿಂಗಳು ಮಾತ್ರ ಉಳಿದಿದ್ದು ಕಡಿಮೆ ಸಮಯವಿರುವಾಗ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಚುನಾವಣಾಧಿಕಾರಿಯಾಗಿ ಕೃಷಿ ಅಧಿಕಾರಿ ಕೌಶಿಕ್ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟು 10 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಅವಧಿಯಲ್ಲಿ ಒಟ್ಟು 6 ಬಿಜೆಪಿ, 4 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಈಗಾಗಲೇ ಸರತಿಯಾಗಿ ಸುಮಂಗಲಾ ನಾಗಭೂಷಣ, ಮಮತಾ ಮೋಹನ್, ರಾಜೇಶ ಬಿ.ಎಂ, ಮಂಜುನಾಥ ಶೆಟ್ಟಿ, ಹರೀಶ ಹೆಚ್.ಎಂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪದ್ಮಾ ಆನಂದ್ 6ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷ. 7-8 ತಿಂಗಳುಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.