ಕಾಫಿನಾಡು ಜನತೆಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೇ ಇಲಾಖೆ
* ಚಿಕ್ಕಮಗಳೂರಿನಿಂದ ತಿರುಪತಿ ರೈಲು ಸಂಚಾರಕ್ಕೆ ಕೇಂದ್ರ ಅಸ್ತು
* ಹೊಸ ರೈಲಿಗಾಗಿ ಸಂಸದ ಕೋಟಾ ನಿರಂತರ ಪ್ರಯತ್ನ,ಎಲ್ಲರ ಅಭಿನಂದನೆ
* ರೈಲಿನ ಮಾರ್ಗ, ಸಮಯ,ಎಲ್ಲೆಲ್ಲಿ ನಿಲುಗಡೆ ಇಲ್ಲಿದೆ ಮಾಹಿತಿ
NAMMMUR EXPRESS NEWS
ಬೆಂಗಳೂರು: ತಿರುಪತಿಗೆ ಹೋಗುವ ಭಕ್ತರಿಗೆ ಕೇಂದ್ರ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದೆ. ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ. ಚಿಕ್ಕಮಗಳೂರಿನಿಂದ ತಿರುಪತಿ ನೂತನ ರೈಲಿನ ಸಂಪೂರ್ಣ ವಿವರ ಇಲ್ಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ವಿ. ಸೋಮಣ್ಣ, ತಿರುಪತಿಯ ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ಪ್ರಯಾಣಿಸುವ ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ವಾರದ ರೈಲಿನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ಗುರುವಾರ ತಿರುಪತಿಯಿಂದ ಹಾಗೂ ಪ್ರತಿ ಶುಕ್ರವಾರ ಚಿಕ್ಕಮಗಳೂರಿನಿಂದ ಈ ರೈಲು ಹೊರಡಲಿದೆ. ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಜನತೆ ಈ ವಾರದ ರೈಲಿನ ಸೌಲಭ್ಯ ಪಡೆದುಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು – ತಿರುಪತಿ ನೂತನ ರೈಲು ಸೇವೆಗಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ನಿರಂತರ ಪ್ರಯತ್ನ ಮಾಡುತ್ತಿದ್ದರು. ಸಚಿವ ವಿ.ಸೋಮಣ್ಣ ಸೇರಿದಂತೆ ಕೇಂದ್ರ ರೈಲ್ವೆ ಅಧಿಕಾರಿಗಳು,ಇಲಾಖೆಯ ಅಧಿಕಾರಿಗಳೊಡನೆ ನಿರಂತರ ಸಭೆಗಳನ್ನು ನಡೆಸಿ ಕೊನೆಗೆ ನೂತನ ರೈಲ್ವೇ ಸಂಪರ್ಕವನ್ನು ಜಿಲ್ಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸಂಸದರಿಗೆ ಎಲ್ಲೆಡೆಯಿಂದ ಅಭಿನಂದನೆಗಳು ಹರಿದುಬರುತ್ತಿದೆ.
* ನೂತನ ರೈಲಿನ ವಿವರ ಹೀಗಿದೆ
ತಿರುಪತಿ to ಚಿಕ್ಕಮಗಳೂರು (ರೈಲು ಸಂಖ್ಯೆ 17423): ಈ ರೈಲು ಪ್ರತಿ ಗುರುವಾರ ರಾತ್ರಿ 09 ಗಂಟೆಗೆ ತಿರುಪತಿಯಿಂದ ಹೊರಡಲಿದ್ದು, ಮರುದಿನ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಚಿಕ್ಕಮಗಳೂರು ತಲುಪಲಿದೆ.
ಚಿಕ್ಕಮಗಳೂರು-ತಿರುಪತಿ (ರೈಲು ಸಂಖ್ಯೆ 17424): ಈ ರೈಲು ಪ್ರತಿ ಶುಕ್ರವಾರ ಸಂಜೆ 05:30 ಚಿಕ್ಕಮಗಳೂರಿನಿಂದ ಹೊರಡಲಿದ್ದು, ಶನಿವಾರ ಬೆಳಿಗ್ಗೆ 07:40ಕ್ಕೆ ತಿರುಪತಿ ತಲುಪಲಿದೆ.
* ನಿಲ್ದಾಣಗಳು ಹೀಗಿವೆ
ಚಿತ್ತೂರು, ಕಟ್ಟಾಡಿ, ಕುಪ್ಪಂ, ಬಂಗಾರಪೇಟೆ, ವೈಟ್ಫೀಲ್ಡ್, ಕೆ ಆರ್ ಪುರಂ, ಎಸ್ಎಂವಿಬಿ ಬೆಂಗಳೂರು, ಚಿಕ್ಕ ಬಾಣಾವರ, ತುಮಕೂರು, ತಿಪಟೂರು, ಅರಸೀಕೆರೆ, ದೇವನೂರು, ಬಿರೂರು, ಕಡೂರು, ಬಿಸಲೇಹಳ್ಳಿ, ಸಕರಾಯಪಟ್ಟಣ.








