ಅಡಿಕೆ, ಚಿನ್ನ ಕಳ್ಳರ ಬಗ್ಗೆ ಎಚ್ಚರ!
– ಅಡಿಕೆಗೆ ಚಿನ್ನದ ಬೆಲೆ: ಚಿನ್ನಕ್ಕೂ ಹೆಚ್ಚಿದ ದರ
– ಹೆಚ್ಚಿದ ಕಳ್ಳತನ: ಜನರೇ ಹುಷಾರ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಲೆನಾಡು: ಅಡಿಕೆ ಕೊಯ್ಲು ಒಂದು ಹಂತ ಮುಗಿದಿದೆ. ಮಲೆನಾಡು ಮಲೆನಾಡು ಭಾಗದಲ್ಲಿ ಅಡಿಕೆಗೆ ಈಗ ಚಿನ್ನದ ದರ ಬಂದಿದೆ. ಈ ವೇಳೆ ಕಳ್ಳರ ಕಾಟ ಹೆಚ್ಚಾಗುವ ಸಾಧ್ಯತೆ ಇದೆ. ರೈತರು ಕೂಡ ಅಡಿಕೆ ಬೆಳೆ ಹಾಗೂ ತಮ್ಮ ಮನೆಯ ಸುರಕ್ಷಿತ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ರೈತರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು, ನಾಯಿಗಳನ್ನು ಸಾಕುವುದು ಒಳ್ಳೆಯದು. ಅಪರಿಚಿತರನ್ನು ಮನೆಯಲ್ಲಿ ಬಿಟ್ಟುಕೊಳ್ಳುವುದು ಅಪಾಯ. ಚಿನ್ನದ ದರ ಕೂಡ ಗಗನಕ್ಕೆ ಏರಿದೆ. ಹಾಗಾಗಿ ಕಳ್ಳತನ ಹೆಚ್ಚಳ ಆಗುವ ಸಾಧ್ಯತೆಗಳಿವೆ.
ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಅನೇಕ ಭಾಗದಲ್ಲಿ ಕಳೆದ ತಿಂಗಳಿಂದ ಅನೇಕ ಕಳ್ಳತನ ಪ್ರಕರಣಗಳು ನಡೆದಿದ್ದು, ಪೊಲೀಸರು ಅನೇಕ ಪ್ರಕರಣಗಳಲ್ಲಿ ಕಳ್ಳರನ್ನು ಸೇರಿ ಹಿಡಿದಿದ್ದಾರೆ. ಒಂಟಿ ಮನೆಗಳು ಮತ್ತು ಕೆಲವು ಮನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನಲಾಗಿದೆ. ಅನಾಮಿಕರು, ಅಪರಿಚಿತರು ಅನುಮಾನ ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕಿದೆ. ಯಾವುದೇ ರೀತಿಯ ಅನುಮಾನ ಬಂದಲ್ಲಿ ಕಳ್ಳತನ ಪ್ರಕರಣ ಆಗುತ್ತಿರುವ ಸಂದರ್ಭಗಳಲ್ಲಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.








