Author: NammurEXP

ಸ್ಸುಳ್ಯ: ಕಂಟೈನರ್ ಲಾರಿ ಮತ್ತು ಸ್ಕೂಟರ್ ನಡುವೆ ರಸ್ತೆ ಅಪಘಾತ ಸಂಭವಿಸಿದ ಘಟನೆ, ಬೊಳುಬೈಲ್ ಬಳಿ ನಡೆದಿದೆ. ಪರಿಣಾಮವಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ಆಲಂಕಲ್ಯ ರಾಮಕೃಷ್ಣ ಎಂದು ಗುರುತಿಸಲಾಗಿದೆ. ರಾಮಕೃಷ್ಣ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. •ಕುಂದಾಪುರ: ಲೋಕಾಯುಕ್ತ ದಾಳಿ ಕುಂದಾಪುರ: ಲೋಕಾಯುಕ್ತರು ಗ್ರಾಮ ಪಂಚಾಯಿತಿ ಕಛೇರಿಯ ಮೇಲೆ ದಿಢೀರ್ ದಾಳಿ ನಡೆಸಿದ ಘಟನೆ, ಬೇಳೂರಿನಲ್ಲಿ ನಡೆದಿದೆ. ಕಟ್ಟಡ ಪರವಾನಿಗೆಗಳನ್ನು ನೀಡುವಲ್ಲಿ ವಿಳಂಬ ಮಾಡಿರುವುದು ಸೇರಿದಂತೆ ಹಲವಾರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಈ ಕ್ರಮವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಡಿವೈಎಸ್ ಪಿ ಹಾಲಮೂರ್ತಿ ರಾವ್ ಮತ್ತು ಇನ್ಸ್ಪೆಕ್ಟರ್ ಮಂಜುನಾಥ್ ಅವರ ನೇತೃತ್ವದ ತಂಡವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿಗಳನ್ನು ಕಲೆಹಾಕಿದರು ಎನ್ನುವ ಸಂಗತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸರ್ಕಾರಿ ಸೌಲಭ್ಯ…

Read More

ಕೋಲಾರ/ಶಿವಮೊಗ್ಗ: ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುವಂತಹ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಕೃತಕ ಅಡಿಕೆಗಳನ್ನು ವಶಪಡಿಸಿಕೊಂಡ ಘಟನೆ, ಮುಳಬಾಗಿಲು ತಾಲ್ಲೂಕಿನ ಗಡಿಭಾಗದಲ್ಲಿ ನಡೆದಿದೆ. ಇದೀಗ ಚೀನಾ ಅಡಿಕೆಯು ಅಡಿಕೆಯ ಮಾನ ತೆಗೆಯುತ್ತಿದೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಹತ್ತು ಟನ್ ನಷ್ಟು ಕೃತಕ ಅಡಿಕೆಗಳನ್ನು ಸಾಗಿಸುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ಯಾಂಟರ್ ಅನ್ನು ಅಡ್ಡಗಟ್ಟಿ ಪರಿಶೀಲನೆಯನ್ನು ನಡೆಸಿದಾಗ, ಸುಮಾರು 96 ಮೂಟೆಗಳಷ್ಟು ನಕಲಿ ಅಡಿಕೆ ಕಂಡುಬಂದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕ್ಯಾಂಟರ್ ನ ಚಾಲಕ ಮತ್ತು ಕ್ಲೀನರ್ ಅನ್ನು ಬಂಧಿಸಿದ್ದು, ಈ ಸಂದರ್ಭದಲ್ಲಿ ನಕಲಿ ಅಡಿಕೆಗಳ ಮೂಟೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕ್ಯಾಂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕಲಿ ಅಡಿಕೆಯಿಂದ ಶುದ್ಧ ಅಡಿಕೆ ಮರ್ಯಾದೆ ಹೋಯ್ತು! ಸಾಮಾನ್ಯ ಅಡಿಕೆಗಳನ್ನು ಕೊಯ್ದು, ಹಂಡೆಯಲ್ಲಿ ಬೇಯಿಸಿ ನೈಸರ್ಗಿಕವಾಗಿ ತಯಾರಿಸಲಾಗುತ್ತದೆ. ಆದರೆ ನಕಲಿ ಅಡಿಕೆಗಳನ್ನು ತಾಳೆ ಬೀಜಗಳು, ಮರದ ರೆಂಬೆ ಅಥವಾ ಕಾಂಡದ ತಿರುಳುಗಳು ಮತ್ತು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ…

Read More

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಡಿಕೆಶಿ ಅವರ ಓಡಾಟ ಇಡೀ ಜಿಲ್ಲೆಯಲ್ಲಿ ಮಿಂಚಿನ ಸಂಚಲನ ಮೂಡಿಸಿದೆ. ಮಂಗಳೂರಿಂದ ತೀರ್ಥಹಳ್ಳಿಗೆ ಬಂದಿಳಿದ ಸಿಎಂ ಅವರನ್ನು ಸ್ಥಳೀಯ ನಾಯಕರು ಮತ್ತು ಅಧಿಕಾರಿಗಳು ಸ್ವಾಗತಿಸಿದರು. ಹೆಲಿಪ್ಯಾಡ್ ಅಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು. ಬೃಹತ್ ವೇದಿಕೆ… 10 ಸಾವಿರಕ್ಕೂ ಹೆಚ್ಚು ಜನ… ಮಳೆ..!! ತೀರ್ಥಹಳ್ಳಿ: ಕಸ್ತೂರಿ ರಂಗನ್‌ ವರದಿ ಕುರಿತ ಸಂವಾದ ಕಾರ್ಯಕ್ರಮಕ್ಕೆ ತೀರ್ಥಹಳ್ಳಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಶನಿವಾರ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸ್ವಾಗತಿಸಿದರು. ನಂತರ ಹೆಲಿಪ್ಯಾಡ್‌ನಲ್ಲಿ ತಮ್ಮನ್ನು ಸ್ವಾಗತಿಸಿದ ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿದರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ ಜೊತೆಗಿದ್ದರು. ತೀರ್ಥಹಳ್ಳಿಯಲ್ಲಿಂದು ‘ಕಸ್ತೂರಿ ರಂಗನ್ ವರದಿ’ ವಿಚಾರವಾಗಿ ಸಾರ್ವಜನಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಲವು ಮಹತ್ವದ ವಿಷಯಗಳ…

Read More

ಕಾಪು: ಇನ್ನೋವಾ ಕಾರೊಂದು ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ, ಬುಧವಾರದಂದು ಪೈಯ್ಯಾರು ಮಲೆ ಜುಮಾದಿ ಸಾನದ ಬಳಿ ನಡೆದಿದೆ. ಅಲ್ಲದೆ ಇನ್ನೋವಾ ಕಾರಿನ ಎಡ ಮತ್ತು ಬಲಭಾಗಗಳು ನುಜ್ಜುಗುಜ್ಜಾಗಿದ್ದು, ಕಾರಿನ ಗಾಜುಗಳು ಕೂಡ ಒಡೆದು ಹೋಗಿರುವುದು ಹಾಗೂ ಕಾರಿನ ಮುಂಭಾಗ ಮತ್ತು ಹಿಂಭಾಗದ ನಂಬರ್ ಪ್ಲೇಟ್ ಗಳನ್ನು ಕಳಚಿಡಲಾಗಿದ್ದು, ಢಿಕ್ಕಿಯಲ್ಲಿ ಹೊನ್ನಾವರ ಹಾಗೂ ಮಧ್ಯಭಾಗದ ಸೀಟಿನಲ್ಲಿ ಸಾಗರದ ನೋಂದಣಿಯನ್ನು ಹೊಂದಿರುವಂತಹ ನಂಬರ್ ಪ್ಲೇಟ್ ಗಳು ದೊರಕಿರುವುದು ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ದನಗಳ್ಳತನಕ್ಕೆ ಸಂಬಂಧಿಸಿದಂತೆ ಸುಳಿವು ಬಂದ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಟೋಲ್ ಬಳಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಅವರನ್ನು ತಪ್ಪಿಸಿಕೊಂಡು ಇನ್ನೋವಾ ಕಾರೊಂದು ಮಂಗಳವಾರ ತಡರಾತ್ರಿ ಪರಾರಿಯಾಗಿತ್ತು. ನಿನ್ನೆ ದೊರೆತಿರುವ ಇನ್ನೋವಾ ಕಾರು ಇದೇ ಆಗಿದೆ. ಅಂದರೆ ದನಗಳ್ಳತನ ಮಾಡುತ್ತಿರುವ ಆರೋಪಿಗಳು ಪೈಯ್ಯಾರು, ಬೆಳಪು ಗ್ರಾಮದವರಾಗಿದ್ದಾರೆ. ಆದರೆ, ಶಿರೂರಿನಿಂದ 100 ಕಿಲೋಮೀಟರ್ ಇರುವ ಪೈಯ್ಯಾರಿಗೆ ಹೋಗಲು ಈ ಮಾರ್ಗವನ್ನು ಸೂಚಿಸಿದವರು ಯಾರು ಎನ್ನುವ ಪ್ರಶ್ನೆ ಎದುರಾಗಿದ್ದು, ಸ್ಥಳೀಯರ ಸಹಕಾರವಿಲ್ಲದೆ ಈ ಜಾಗದಲ್ಲಿ ಕಾರನ್ನು…

Read More

ಬೆಂಗಳೂರು: ಸೌಮ್ಯ ನಟನೆ, ಹಾಸ್ಯದೊಂದಿಗೆ ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ್ದು, ಕನ್ನಡಕ್ಕೆ ಇದು ದೊಡ್ಡ ಮನ್ನಣೆಯಾಗಿದೆ. ಸೆಪ್ಟೆಂಬರ್ 16ರ ಬುಧವಾರದಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲೇ ಚಿತ್ರರಂಗದ ಅನುಭವ, ವಿಭಿನ್ನ ಶೈಲಿಯ ಅಭಿನಯ ಮತ್ತು ಅವರ ಕಲಾಸೇವೆಯನ್ನು ಗುರುತಿಸಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಬೇಕೆಂಬ ಆಗ್ರಹ ಹಲವಾರು ಕಡೆಯಿಂದ ಕೇಳಿಬಂದಿತ್ತು. ಇದಕ್ಕೆ ಪ್ರತಿಫಲವಾಗಿ ಇತ್ತೀಚೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಒಲಿದಿತ್ತು.‌ ಇದೀಗ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಕೂಡ ಅನಂತನಾಗ್ ಅವರಿಗೆ ಸಂದಿರುವುದು ಅವರ ಅಭಿಮಾನಗಳಿಗೆ, ಚಿತ್ರರಸಿಕರಿಗೆ ಅದರಲ್ಲೂ ಕನ್ನಡಿಗರಿಗೆ ಸಂತೋಷವನ್ನುಂಟು ಮಾಡಿದೆ. 1995ರಲ್ಲಿ ವರನಟ, ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ನಟ ಎನ್ನುವ ಹೆಗ್ಗಳಿಕೆಗೆ…

Read More

ಬೆಂಗಳೂರು: ಕಳೆದ 10 ವರ್ಷಗಳಿಂದ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸಣ್ಣ ಉದ್ಯಮಗಳು ಸಾಯುತ್ತಿವೆ. ಸ್ಟಾರ್ಟ್ ಅಪ್ ಮಾಡಲು ಯುವ ಜನ ಹಿಂದೇಟು ಹಾಕುತ್ತಿದ್ದಾರೆ. ಕಾರಣ ಸರ್ಕಾರಗಳ ಎಡ ಬಿಡಂಗಿ ನಿಯಮಗಳು. ಯಾರನ್ನೋ ಕಟ್ಟಿ ಹಾಕಲು ಯಾವುದೊ ರಾಜಕೀಯ ತೆವಲಿಗೆ ಸಾವಿರಾರು ಉದ್ಯಮಗಳು ಇದೀಗ ಮುಚ್ಚುವ ಹಂತದಲ್ಲಿವೆ. ಮೊದಲಿಗೆ 10 ಲಕ್ಷದವರೆಗಿನ ಔದ್ಯಮಿಕ ಸಾಲಕ್ಕೆ CGTMSE ಫೀ ಹಾಕಲಾಯಿತು. ವ್ಯಾಪಾರಸ್ಥರಿಗೆ ಪ್ರತಿ ವರ್ಷ ಹೊರೆ ಅನಿಸಿದರೂ ಗತಿಯಿಲ್ಲದೆ ಸುಧಾರಿಸಿಕೊಂಡರು. ಆಮೇಲೆ GST ಜಾರಿಗೆ ತಂದು ಮತ್ತೊಮ್ಮೆ ಉಸಿರು ನಿಲ್ಲಿಸಲಾಯಿತು. ನ್ಯಾಯಯುತವಾಗಿ ಉದ್ಯಮ ಮಾಡಲು ದಾಖಲಾತಿ ಮಾಡಿ ಮಾಡಿ ಸಾಕಾಗಿ ಹೋಯಿತು. ಹೊಟ್ಟೆಪಾಡಿಗಾಗಿ ಒಂದಷ್ಟು ವ್ಯಾಪಾರಿಗಳು ಉಸಿರಾಟಕ್ಕೂ ತೆರಿಗೆ ಕಟ್ಟತೊಡಗಿದರು. ಉಸಿರಾಡದೆ ಇರಲಾಗುವುದಿಲ್ಲ ಎನ್ನುವವರು ಅಂಗಡಿ ಬಾಗಿಲು ಮುಚ್ಚಿ ಮತ್ತೇನೋ ಕೆಲಸ ಮಾಡಲು ತೊಡಗಿದರು. ನೋಟ್ ಬ್ಯಾನ್ ಒಂದಷ್ಟು ಆರ್ಥಿಕತೆ ಹಿನ್ನಡೆ ಸಾಧಿಸಿತು. ಕರೋನಾ ಲಕ್ಷ ಲಕ್ಷ ಉದ್ಯಮಿಗಳ ಅಂಗಡಿಗಳ ಬಾಗಿಲು ಹಾಕಿಸಿತು. ಸಾವಿರಾರು ಜನರ ಜೀವ, ಜೀವನ ತೆಗೆಯಿತು. ಆದರೂ ಸರ್ಕಾರಗಳು ಕಣ್ಣು…

Read More

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ಕೊರತೆ ಎದುರಾಗಿದ್ದು ಭರದ ಛಾಯೆ ಆವರಿಸಿದೆ. ಮಳೆಗಾಲದಲ್ಲೇ ಎದುರಾದ ಬಿಸಿಲ ಬೇಗೆ ಕಾರಣ ಮಳೆ ಕೊರತೆಯಿಂದ ನೀರು ಮೂಲ ಸಂಪೂರ್ಣ ಇಳಿಮುಖವಾಗಿದೆ. ರೈತರಿಗೆ ಮಳೆ ಇಲ್ಲದೆ ಸಾಕಷ್ಟು ಸಂಕಷ್ಟ ಎದುರಾಗಿದ್ದು ಜೀವನ ಅಯೋಮಯವಾಗಿದೆ. ಮಳೆಗಾಲದಲ್ಲಿ ಈಗ ಬೇಸಿಗೆಯ ಅನುಭವ. ಮಳೆಗಾಲ ಮುಗಿಯುವ ಮುನ್ನವೆ ಚಳಿಗಾಲ ಆರಂಭಕ್ಕೆ ಮೊದಲೇ ಬೇಸಿಗೆ ಎದುರಾಗಿದೆ. ಬರಗಾಲದಲ್ಲಿ ಕೆಂಡದಂತಹ ಬಿಸಿಲು ವಾತಾವರಣದ ಬಿಸಿ ಏರಿಸಿದೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ದೀಪಾವಳಿವರೆಗೆ ಜೋರು ಮಳೆ ಸುರಿಯುತ್ತದೆ. ದೀಪಾವಳಿ ಬಳಿಕ ಆರಂಭವಾಗುವ ಅಡಿಕೆ ಕೊಯ್ಲಿಗೂ ಅವಕಾಶ ನೀಡದೆ ಮಳೆ ಸುರಿದ ಉದಾಹರಣೆಗಳಿವೆ. ಹಳ್ಳ ಮತ್ತು ನದಿಗಳಲ್ಲಿ ಡಿಸೆಂಬರ್‌ ವರೆಗೆ ಅಧಿಕ ಹರಿವು ಇರುವುದರಿಂದ ನೀರಿನಮಟ್ಟ ಸ್ಥಿರವಾಗಿರುತ್ತದೆ. ಆದರೆ, ಈ ವರ್ಷ ಗಣೇಶ ಹಬ್ಬಕೂ ಮುನ್ನವೆ ಮಳೆ ಮಾಯವಾಗಿ ನೆಲ ಬಿರಿಯಲಾರಂಭಿಸಿದೆ. ಇನ್ನು ಕರಾವಳಿ, ಮಧ್ಯ ಕರ್ನಾಟಕದಲ್ಲೂ ಇದೆ ವಾತಾವರಣ ಇದೆ. ರೈತರ ಬದುಕು ಬಿಸಿಲಲ್ಲಿ ಸುಟ್ಟು ಹೋಗುತ್ತಿದೆ… ಮಳೆಯನ್ನೇ ನಂಬಿ ಭತ್ತ ನಾಟಿ ಮಾಡಿದವರ ಬದುಕು…

Read More

ತೀರ್ಥಹಳ್ಳಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 19ರಂದು ತೀರ್ಥಹಳ್ಳಿಗೆ ಆಗಮಿಸುತ್ತಿದ್ದು ಕಸ್ತೂರಿ ರಂಗನ್ ವರದಿ ಬಗ್ಗೆ ರೈತರ ಜತೆ ಸಭೆ ನಡೆಸಲಿದ್ದಾರೆ. ಈ ಸಭೆಗಾಗಿ ಈಗಾಗಲೇ ಭಾರೀ ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಆದ ಬಳಿಕ ಮೊದಲ ಭೇಟಿ ಇದಾಗಿದ್ದು ಜಿಲ್ಲಾ ಆಡಳಿತದ ವತಿಯಿಂದ ಯು.ಆರ್.ಅನಂತಮೂರ್ತಿ ಶಾಲಾ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಗೆ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಸ್ತೂರಿ ರಂಗನ್ ವರದಿ ಸೇರಿದಂತೆ ಮಲೆನಾಡಿನ ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳು ಸಂವಾದ ನಡೆಸಲಿದ್ದಾರೆ. ಈಗಾಗಲೇ ಸರ್ಕಾರಿ ಡಿಗ್ರಿ ಕಾಲೇಜು ಮೈದಾನದಲ್ಲಿ ಹೆಲಿ ಪ್ಯಾಡ್ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಡಿಗ್ರಿ ಕಾಲೇಜು, ಸರ್ಕಾರಿ ಪಿಯು, ಅನಂತಮೂರ್ತಿ ಪ್ರೌಢ ಶಾಲೆಗೆ ರಜೆ ನೀಡಲಾಗಿದೆ. ತಯಾರಿಯಲ್ಲಿ ಆರಗ, ಕಿಮ್ಮನೆ, ಮಂಜುನಾಥ ಗೌಡರ ರೇಸ್ ಕಾರ್ಯಕ್ರಮದ ಸಿದ್ಧತೆಗಳು, ಸಾರ್ವಜನಿಕರ ಆಸನ ವ್ಯವಸ್ಥೆ, ಮುಖ್ಯಮಂತ್ರಿಗಳ ಭೇಟಿ ಹಾಗೂ ಸಭೆಯ ರೂಪುರೇಷೆಗಳ ಕುರಿತು ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್,…

Read More

ಶಿವಮೊಗ್ಗ: ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಶಾಸಕರನ್ನೇ ಹೊತ್ತು ಕುಣಿದ ಪೊಲೀಸ್ ಸಿಬ್ಬಂದಿಯನ್ನ ಶಿಸ್ತುಕ್ರಮದ ಭಾಗವಾಗಿ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಈ‌ ಆದೇಶ ಹೊರಡಿಸಿದ್ದಾರೆ. ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದ ಬಳಿ ಸಾಗುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕ ಚನ್ನಬಸಪ್ಪ ಅವರು ಭಾಗಿಯಾಗಿದ್ದರು. ಈ ವೇಳೆ ಶಾಸಕರನ್ನ ಹೊತ್ತು ಕುಣಿದ ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಗಣೇಶ್ ಹಾಗೂ ಪ್ರಕಾಶ್.ಎ.ಕೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಗಣೇಶ್ ರನ್ನ ತೀರ್ಥಹಳ್ಳಿಯ ಆಗುಂಬೆ ಪೊಲೀಸ್ ಠಾಣೆಗೆ, ಪ್ರಕಾಶ್.ಎ.ಕೆ ರನ್ನ ಸೊರಬದ ಆನವಟ್ಟಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲು ಎಸ್ಪಿ ಬಿ.ನಿಖಿಲ್ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗಣಪತಿಯನ್ನ ಪ್ರತಿಷ್ಟಾಪಿಸಲಾಗಿತ್ತು. ಪೂಜೆಯ ಬಳಿಕ ಅದೇ ದಿನ ಸಂಜೆ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆಗೆ ಮೆರವಣಿಗೆ ನಡೆಸಲಾಗಿತ್ತು. •ಕಡೂರು: ಅಕ್ರಮ ಮದ್ಯ ಮಾರಾಟ;…

Read More

ಚಿಕ್ಕಮಗಳೂರು: ಶಾಂತಿಯುತವಾಗಿ ನಡೆಯಬೇಕಿದ್ದ ಸಭೆಯಲ್ಲಿ ಇದ್ದಕ್ಕಿದ್ದ ಹಾಗೆ ಕಲಹ ಏರ್ಪಟ್ಟ ಘಟನೆ, ಹಂಗರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಸಭೆಯಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಂತಿಮವಾಗಿ ಅದು ಕೈ ಕೈ ಮಿಲಾಯಿಸುವ ಹಂತವನ್ನು ತಲುಪಿದೆ. ಕಣತಿ ಸಮೀಪದಲ್ಲಿರುವ ಸರ್ಕಾರಿ ಜಾಗದ ಬಳಕೆಯ ವಿಚಾರವೇ ಇಬ್ಬರ ನಡುವಿನ ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ. ಸರ್ಕಾರದಿಂದ ಸಂಘದ ಹೆಸರಿನಲ್ಲಿ ಜಾಗವನ್ನು ಮಂಜೂರು ಮಾಡಿಸಿಕೊಂಡಿದ್ದು, ಇದೀಗ ಆ ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳನ್ನು ಮತ್ತು ಪೆಟ್ರೋಲ್ ಬಂಕ್ ಗಳನ್ನು ನಿರ್ಮಿಸಲು ಸಂಘದ ಅಧ್ಯಕ್ಷರಾದ ಅರುಣ್ ಮತ್ತು ನಿರ್ದೇಶಕರಾದ ದಿಲೀಪ್ ಅವರು ಮುಂದಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಮತ್ತೋರ್ವ ನಿರ್ದೇಶಕರಾದ ಬೈಗೂರು ನಾಗೇಶ್ ಅವರು ಆ ಜಾಗದಲ್ಲಿ ಬಡ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಮುಖಂಡರು ಕೂಡ ರಂಪಾಟಕ್ಕೆ ಇಳಿದಿದ್ದು, ಕೆಲಕಾಲ ಸಭೆಯಲ್ಲಿ…

Read More