ಮಲೆನಾಡು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ನೂತನ ಸಾರಥಿಗಳು!
– ನೂತನ ಅಧ್ಯಕ್ಷರಾಗಿ ಕೆ.ಎಲ್.ಪ್ರಸಾದ್ ಸಂಕದಹೊಳೆ, ಉಪಾಧ್ಯಕ್ಷರಾಗಿ ವಿಷ್ಣುಮೂರ್ತಿ.ಕೆ.ಎನ್.ಹನಸ
– ನೂತನ ಆಡಳಿತ ಮಂಡಳಿಗೆ ಶುಭಾಶಯಗಳು
ಬೆಂಗಳೂರು: ಮಲೆನಾಡು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕೆ.ಎಲ್.ಪ್ರಸಾದ್ ಸಂಕದಹೊಳೆ ಹಾಗೂ ಉಪಾಧ್ಯಕ್ಷರಾಗಿ ವಿಷ್ಣು ಮೂರ್ತಿ.ಕೆ.ಎನ್.ಹನಸ ಆಯ್ಕೆ ಆಗಿದ್ದಾರೆ.
ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ಸದಸ್ಯರಿಗೆ ನಿಷ್ಠೆಯಿಂದ,ಪಾರದರ್ಶಕವಾಗಿ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಸೊಸೈಟಿ ಇದಾಗಿದೆ. ವಿಕಾಸ ಸೌಧದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕೆ.ಎಲ್.ಪ್ರಸಾದ್ ಇದೀಗ ನಿವೃತ್ತರಾಗಿದ್ದಾರೆ. ಇನ್ನು ಉದ್ಯಮಿಯಾಗಿ ಅನೇಕ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಲೆನಾಡ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಹಿಂದಿನ ಅವಧಿಯ ಅಧ್ಯಕ್ಷರಾದ ಜೆ.ಕೆ. ಲೋಕೇಶ್, ಉಪಾಧ್ಯಕ್ಷರಾದ ಎಸ್. ರವಿ, ನಿರ್ದೇಶಕರಾದ ಜಯಪ್ರಕಾಶ್ ಎಚ್. ಸಿ, ಬಿ.ಸಿ. ಡಾಕಪ್ಪ, ಹೆಚ್.ಆರ್. ಬಿಷ್ಣಪ್ಪ, ಭಾಗ್ಯ ಠಾಗೂರ್, ಎ.ಜಿ. ನಂದೀಶ್ ದೋರಗಲ್, ಸಿ.ಹೆಚ್. ಪುಂಡರೀಕ, ಜೆ.ಪಿ. ವೀರೇಶ್, ಎಂ.ಎಂ. ಆಶಾ ಬಾಲರಾಜ್, ಎಂ.ಆರ್. ಪೂರ್ಣೇಶ್, ಸತ್ಯಾನಂದ್ ಸೇರಿ ಅನೇಕರು ಇದ್ದರು. ಮಲೆನಾಡು ಸಂಘಟನೆ ಪ್ರಮುಖರಾದ ಶಶಿಕಾಂತ್ ಅತ್ತಿಕೊಡಿಗೆ, ಅಜಿತ್ ಕಲ್ಕೂಳಿ ಇತರರು ಇದ್ದರು.
ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಲ್.ಪ್ರಸಾದ್ ಸಂಕದಹೊಳೆ ಹಾಗೂ ಉಪಾಧ್ಯಕ್ಷರಾಗಿ ವಿಷ್ಣು ಮೂರ್ತಿ.ಕೆ.ಎನ್.ಹನಸ ಹಾಗೂ ಹೊಸ ನಿರ್ವಹಣಾ ಸಮಿತಿಯ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು.








