ಯುವತಿ,ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಕಾಂಗ್ರೆಸ್ ಮುಖಂಡನ ಬಂಧನ
* ಮಹಿಳೆಯರ ವೈಯಕ್ತಿಕ ಫೋಟೋ ಪಡೆದು ಎಡಿಟ್ ಮಾಡಿ ಶೇರ್ ಮಾಡ್ತಿದ್ದ
* ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಮನೆಗೆ ನುಗ್ಗಿ ಥಳಿತ,ವೀಡಿಯೋ ವೈರಲ್
NAMMMUR EXPRESS NEWS
ಚಿಕ್ಕಮಗಳೂರು: ಅಪರಿಚಿತ ಮಹಿಳೆಯರು ಹಾಗೂ ಯುವತಿಯರಿಗೆ ಮೆಸೇಜ್ ಮಾಡುವುದು ಮತ್ತು ಮಹಿಳೆಯೊಬ್ಬರ ವೈಯಕ್ತಿಕ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿ, ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕಾಂಗ್ರೆಸ್ ಮುಖಂಡನೊಬ್ಬನನ್ನು ಚಿಕ್ಕಮಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸನಗರದ ಆದಿತ್ಯ(40) ಬಂಧಿತ ಆರೋಪಿಯಾಗಿದ್ದು, ಮಹಿಳೆಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ನಂತರ ವೈಯಕ್ತಿಕ ಫೋಟೋಗಳನ್ನು ಪಡೆದು ಅವುಗಳನ್ನು ಎಡಿಟ್ ಮಾಡಿ ಸ್ನೇಹಿತರಿಗೆ ತೋರಿಸುತ್ತಿದ್ದ, ಅಲ್ಲದೇ ಜೀವ ಬೆದರಿಕೆ ಹಾಕಿದ್ದ ಎಂದು ಪೊಲೀರಿಗೆ ಮಹಿಳೆ ದೂರು ನೀಡಿದ್ದಾರೆ.ದೂರಿನನ್ವಯ ಪ್ರಕರಣ ದಾಖಲಿಸಿರುವ ನಗರ ಠಾಣೆ ಪೊಲೀಸರು, ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ.
ಆದಿತ್ಯ ಈ ಹಿಂದೆ ಆಲ್ದೂರಿನ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷನಾಗಿದ್ದನು. ಬಂಧನಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರೇ ಆದಿತ್ಯ ಮನೆಗೆ ಹೋಗಿ ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.







