ಪೆಂಕ್ ಸಿಲಾತ್ನಲ್ಲಿ ಬೆಳ್ಳಿ ಪದಕ ಗೆದ್ದ ಕಾಫಿನಾಡ ಪೊಲೀಸ್
* ಶ್ರೀನಗರದಲ್ಲಿ ನಡೆದ ಅಖಿಲ ಭಾರತೀಯ ಪೊಲೀಸ್ ಜುಡೋ ಕ್ಲಸ್ಟರ್ – 2025
* ಸತತ ಮೂರನೇ ಬಾರಿಗೆ ಕ್ರೀಡಾಕೂಟದಲ್ಲಿ ಪದಕ ಗೆದ್ದ ಪೊಲೀಸ್ ಪೇದೆ
NAMMMUR EXPRESS NEWS
ಚಿಕ್ಕಮಗಳೂರು: ಜಮ್ಮೂ ಕಾಶ್ಮೀರದ ಶ್ರೀನಗರದಲ್ಲಿ ನಡೆದ 10 ನೇ ಅಖಿಲ ಭಾರತೀಯ ಪೊಲೀಸ್ ಜೂಡೋ ಕ್ಲಸ್ಟರ್ -2025 ರಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಪೊಲೀಸ್ ಪೇದೆ ಬೆಳ್ಳಿ ಪದಕ ಗೆದ್ದು ರಾಜ್ಯ ಪೋಲೀಸ್ ಇಲಾಖೆಗೆ ಗೌರವ ತಂದಿದ್ದಾರೆ.
ಶ್ರೀನಗರದ ಶೇರ್ ಐ ಕಾಶ್ಮೀರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ “ಪೆಂಕ್ ಸಿಲಾತ್” ಕ್ರೀಡೆಯಲ್ಲಿ ಗಿರೀಶ್ ಟಿ ಎಸ್ ಹೆಡ್ ಕಾನ್ಸ್ಟೇಬಲ್ DCRE ಚಿಕ್ಕಮಗಳೂರು ಜಿಲ್ಲೆ ಇವರು ಭಾಗವಹಿಸಿ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ಸತತವಾಗಿ ಮೂರನೇ ಬಾರಿ ಅಖಿಲ ಭಾರತೀಯ ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೂರು ಬಾರಿಯೂ ಪದಕ ಗೆದ್ದಿದ್ದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಇದು ಹೆಮ್ಮೆಯಾಗಿದ್ದು, ಈ ಅದ್ಬುತ ಕ್ರೀಡಾಪಟುವಿಗೆ ಇಲಾಖೆಯ ಎಲ್ಲಾ ಸಹೋದ್ಯೋಗಿಗಳು,ಅಧಿಕಾರಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.








