ತೀರ್ಥಹಳ್ಳಿ ಟಾಪ್ 3 ನ್ಯೂಸ್
ಆಗುಂಬೆ ಲಯನ್ಸ್ ಕ್ಲಬ್ ಸೇವಾ ಸಾಧನೆ..!
– ಆಗುಂಬೆ ಪೊಲೀಸ್ ಠಾಣೆ ಹಾಗೂ ಟೀಮ್ ಈಶ್ವರ ಮಲ್ಪೆ ಸಹಯೋಗದಲ್ಲಿ ಉಚಿತ ಕಿವಿ ಶ್ರವಣ ತಪಾಸಣೆ
– ರಾಜಧಾನಿಯಲ್ಲಿ ಬಿಎಸ್ ವಿಶ್ವನಾಥನ್ ಪುತ್ತಳಿ ಅನಾವರಣ
– ಬಿಹಾರ ಗೆದ್ದ ಬಿಜೆಪಿ: ತೀರ್ಥಹಳ್ಳಿಯಲ್ಲಿ ಸಂಭ್ರಮಾಚರಣೆ
ಆಗುಂಬೆ: ಆಗುಂಬೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಪಕ್ಕದ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್ ಆಗುಂಬೆ ನೇತೃತ್ವದಲ್ಲಿ ಆಗುಂಬೆ ಪೊಲೀಸ್ ಠಾಣೆ ಹಾಗೂ ಟೀಮ್ ಈಶ್ವರ ಮಲ್ಪೆ ಸಹಯೋಗದಲ್ಲಿ ಉಚಿತ ಕಿವಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 37 ಉಚಿತ ತಪಾಸಣೆಯ ನಂತರ ಅವಶ್ಯಕತೆ ಇದ್ದ 11 ಜನಕ್ಕೆ 40 ಪರ್ಸೆಂಟ್ ಸಬ್ಸಿಡಿ ಯೊಂದಿಗೆ ಶ್ರವಣ ಯಂತ್ರವನ್ನು ನೀಡಲಾಯಿತು. ಉದ್ಘಾಟನೆಯನ್ನು ತೀರ್ಥಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಆದ ಇಮ್ರಾನ್ ಬೇಗ್ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸಮಾಜಸೇವಕ ಈಶ್ವರ ಮಲ್ಪೆ ಆಗುಂಬೆ ಲಯನ್ಸ್ ಕ್ಲಬ್ ಆಗುಂಬೆಯ ಸಮಾಜಮುಖಿ ಕಾರ್ಯಕ್ರಮಗಳಾದ ಮೆಚ್ಚಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಲಯನ್ಸ್ ಆಂಬುಲೆನ್ಸ್ ಚಾಲಕ ಪ್ರೀತಮ್ ಆಗುಂಬೆ ಅವರನ್ನು ಸನ್ಮಾನಿಸಿದರು. ಆಗುಂಬೆ ಪೊಲೀಸ್ ಠಾಣೆ ಮತ್ತು ಲಯನ್ ಕ್ಲಬ್ ಆಗುಂಬೆ ಇನ್ನೂ ಹೆಚ್ಚಿನ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಗುಂಬೆ ಪಿಎಸ್ಐ ಶಿವನಗೌಡ ಮನೆಮನೆ ಪೊಲೀಸ್ ಭೇಟಿ ವೇಳೆ ಕಂಡು ಬಂದ ಶ್ರವಣ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಈಶ್ವರ್ ಮಲ್ಪೆ ಸಂಯೋಜಕರಾದ ಲವ ಹಾಗೂ ಡಾ.ಅಂಕಿತ ಕಲ್ಯಾಡಿ ಅವರಿಗೆ ಸ್ಮರಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಹಾಗೂ ಆಗುಂಬೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಪ್ರಶಾಂತ್, ಸುಧೀಂದ್ರ ಮಲ್ಯ, ಮಯೂರ್ ಹೆಗಡೆ, ಮಂಜುನಾಥ್ ಆಚಾರ್ಯ, ಶಶಿಭೂಷಣ್ ಬಾಯರ್ ಮತ್ತು ಆಗುಂಬೆ ಪೊಲೀಸ್ ಠಾಣೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಆಗುಂಬೆ ಕಾರ್ಯದರ್ಶಿ ಅರುಣ್ ಗುಡ್ಡೇಕೇರಿ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜಿಸಿದ್ದಕ್ಕೆ ಅಭಿನಂದನೆಗಳು ಸಲ್ಲಿಸಿದರು.
ರಾಜಧಾನಿಯಲ್ಲಿ ಬಿಎಸ್ ವಿಶ್ವನಾಥನ್ ಪುತ್ತಳಿ
– ಪುತ್ತಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬಿ.ಎಸ್.ವಿಶ್ವನಾಥ್ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಹಕಾರಿ ಮುಖಂಡರಾಗಿ ಬೆಳೆದದ್ದು ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಸರ್ಕಾರ ಸಹಕಾರ ಸಪ್ತಾಹ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆವರಣದಲ್ಲಿ ಸಹಕಾರಿ ಧುರೀಣ ಬಿ.ಎಸ್.ವಿಶ್ವನಾಥ್ರವರ ಪುತ್ತಳಿಯನ್ನು ಅನಾವರಣಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ರಾಜ್ಯದ ವಿವಿಧ ಸಹಕಾರ ಸಂಘಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು ಎಂದು ಅವರ ಸೇವೆ ಬಗ್ಗೆ ಸಿದ್ದರಾಮಯ್ಯ ಮೆಚ್ಚುಗೆ ಮಾತನಾಡಿದರು. ಸಹಕಾರಿ ಧುರೀಣರಾದ ಜಿ.ಟಿ.ದೇವೇಗೌಡರು, ಸೋಮಶೇಖರ್, ಷಡಕ್ಷರಿ, ಹೆಚ್.ಎಂ.ರೇವಣ್ಣ ಸೇರಿ ಅನೇಕರು ಇದ್ದರು.
ಬಿಹಾರ ಗೆದ್ದ ಬಿಜೆಪಿ: ತೀರ್ಥಹಳ್ಳಿಯಲ್ಲಿ ಸಂಭ್ರಮಾಚರಣೆ
ತೀರ್ಥಹಳ್ಳಿ: ಬಿಹಾರ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಕೂಟ ಭಾರೀ ಅಂತರದಿಂದ ಗೆದ್ದ ಸಂತಸದಲ್ಲಿ ತೀರ್ಥಳ್ಳಿಯಲ್ಲಿ ಬಿಜೆಪಿ ಪಕ್ಷದ ಸಂಭ್ರಮಾಚರಣೆ ಮಾಡಲಾಯಿತು. ಬಿಜೆಪಿ ಅಧ್ಯಕ್ಷರಾದ ನವೀನ್ ಹೆದ್ದೂರು, ಚಂದವಳ್ಳಿ ಸೋಮಶೇಖರ್, ಮಧ್ವರಾಜ್ ಹೆಗಡೆ, ಕುರುವಳ್ಳಿ ಪೂರ್ಣೇಶ್, ಜ್ಯೋತಿ ಮೋಹನ್, ಬಸವರಾಜ್ ಹೊದಲ, ಹಾಗೂ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ವಿಜಯೋತ್ಸವದಲ್ಲಿ ಉಪಸ್ಥಿತರಿದ್ದರು








