ಗಾಂಧಿ ಮೈದಾನ ತೆರವು ವಿಷಯದಲ್ಲಿ ರಾಜಕೀಯ ಮಾಡಿಲ್ಲ – ಟಿಡಿಆರ್
* ನ್ಯಾಯಾಲಯದ ಆದೇಶದ ಮೇರೆಗೆ, ಅವರ ದೂರಿನ ಮೇರೆಗೆ ತೆರವು ಕಾರ್ಯ
* ಬಿಜೆಪಿ ಪ್ರತಿಭಟನೆ ಬೆನ್ನಲ್ಲೇ ಕಾಂಗ್ರೆಸ್ ಪ್ರೆಸ್ಮೀಟ್
NAMMMUR EXPRESS NEWS
ಶೃಂಗೇರಿ: ಪಟ್ಟಣದ ಗಾಂಧಿಮೈದಾನದ ಅಂಗಡಿ ತೆರವು ವಿಚಾರವಾಗಿ ಪ್ರತಿಕ್ರಿಸಿರುವ ಶಾಸಕ ಟಿ ಡಿ ರಾಜೇಗೌಡ ಈ ವಿಷಯದಲ್ಲಿ ರಾಜಕೀಯ ಮಾಡಿಲ್ಲ ಎಂದಿದ್ದಾರೆ.
ಇದು ಇಂದು ನಿನ್ನೆಯ ಸಮಸ್ಯೆಯಲ್ಲ ಸುಮಾರು ಇಪ್ಪತ್ತೈದು ವರ್ಷಗಳ ಸಮಸ್ಯೆ, ಹಿಂದೆ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅವರೇ ನಿರ್ಣಯ ಕೈಗೊಂಡು ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಗೆ ನಿರಂತರವಾಗಿ ತಡಯಾಜ್ಞೆ,ವಾದಗಳನ್ನು ಕೇಳುತ್ತಾ ಮುಂದುವರೆದು ತೆರವಿನ ಆದೇಶ ಮತ್ತೆ ತಡೆಯಾಜ್ಞೆ ಬಂದು ಇಲ್ಲಿಯವರೆಗೂ ಬಂದಿದ್ದು,ಈಗ ಕೋರ್ಟ್ನ ಆದೇಶದ ಮೇರೆಗೆ ತೆರವು ಕಾರ್ಯಾಚರಣೆ ನಡೆದಿದೆ,ಅನಿವಾರ್ಯವಾಗಿ ಅಧಿಕಾರಿಗಳು ತೆರವು ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ವರದಿಯನ್ವಯ ಆ ಜಾಗ ಹೊಳೆ ಕರಾಬು ಆಗಿದ್ದು ಪ್ರತಿವರ್ಷ ಮಳೆಗಾಲದಲ್ಲಿ ಸುಮಾರು 6-8 ಅಡಿ ಎತ್ತರ ಪ್ರವಾಹದ ನೀರು ಬರುತ್ತದೆ,ಹೀಗಿದ್ದಾಗ ಏನಾದರೂ ಅವಘಡಗಳು ಸಂಭಿಸಿದಾಗ ಜಿಲ್ಲಾಡಳಿತ ಹೊಣೆಯಾಗುತ್ತದೆ,ಜಿಲ್ಲಾಡಳಿತವನ್ನು ಪ್ರಶ್ನೆ ಮಾಡಲಾಗುತ್ತದೆ. ಇದನ್ನೆಲ್ಲ ಚರ್ಚಿಸಿ ನ್ಯಾಯಾಲಯ ತೀರ್ಪು ನೀಡಿದ್ದು ಇದರಲ್ಲಿ ನನಗೆ ಯಾವುದೇ ವೈಯಕ್ತಿ ದ್ವೇಷ ಇಲ್ಲ, ಈ ವಿಷಯದಲ್ಲಿ ದ್ವೇಷದ ರಾಜಕೀಯ ಮಾಡಿಲ್ಲ ಎಂದು ಶಾಸಕ ಟಿ ಡಿ ರಾಜೇಗೌಡ ಪ್ರತಿಕ್ರಿಸಿದ್ದಾರೆ.
* ಬಿಜೆಪಿ ಪ್ರತಿಭಟನೆ ಬೆನ್ನಲ್ಲೇ ಕಾಂಗ್ರೆಸ್ ಪ್ರೆಸ್ಮೀಟ್
ಕೊಪ್ಪ: ಗೂಂಡಾಗಿರಿ ಬಿಡಿ-ಅಭಿವೃದ್ಧಿ ಮಾಡಿ ಎಂಬ ಘೋಷ ವಾಕ್ಯದಡಿಯಲ್ಲಿ ಕೊಪ್ಪದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯ ಬೆನ್ನಲ್ಲೇ ಕೊಪ್ಪದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಧೀರ್ ಕುಮಾರ್ ಮುರೊಳ್ಳಿ ಪ್ರತಿಭಟನೆಯಲ್ಲಿ ಬಿಜೆಪಿ ಬಿಡುಗಡೆ ಮಾಡಿದ ದಾಖಲೆಗಳೆಲ್ಲವೂ ನೋಂದಾಯಿತ ದಾಖಲೆಗಳಾಗಿದ್ದು ಅದು ಯಾರಿಗೆ ಬೇಕಾದರೂ ಸಿಗುತ್ತದೆ ಎಂದಿದ್ದಾರೆ.
ಸುಧೀರ್ ಕುಮಾರ್ ಬಿಜೆಪಿ ಕಾರ್ಯಕರ್ತನಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಅವರೇ ಆರೋಪಿಸಿದಂತೆ 20ನಿಮಿಷಗಳ ಕಾಲ ಧಮ್ಕಿ ಹಾಕಿದ್ದಾರೆ ಅಂತಾದರೆ ನಾಗರೀಕರು,ಕಾನೂನಿನ ಮೇಲೆ ನಂಬಿಕೆ ಇರುವವರು ಮೊದಲು ಪ್ರಕರಣ ದಾಖಲಿಸಬೇಕು,ಪ್ರಕರಣ ದಾಖಲಿಸುವಾಗ ಪೊಲೀಸರು ದಾಖಲು ಮಾಡದೇ ಇದ್ದಲ್ಲಿ ಸಂಬಂಧಪಟ್ಟ ಇಲಾಖೆ ಎದುರು ಪ್ರತಿಭಟನೆ ಮಾಡಬಹುದಾಗಿದೆ. ಆದ್ದರಿಂದ ಈಗಲೂ ನಾನು ಬದ್ಧನಾಗಿ ಹೇಳುತ್ತಿದ್ದೇನೆ ಆ 20 ನಿಮಿಷಗಳ ಸಂಭಾಷಣೆಯೇನಿದೆ ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ ಹಾಗೂ ಯಾವುದೇ ಕಾರಣಕ್ಕೂ ಅದು ನನ್ನ ಧ್ವನಿಯಲ್ಲ ಎಂಬ ವಾದವನ್ನು ಮಾಡಲ್ಲ, ಆದರೆ ಬಿಜೆಪಿಯವರು ಕೇಸ್ ಮಾಡದೇ ಸುಮ್ಮನೇ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಿದ್ದಾರೆ ಹಾಗೆ ಆ ಸಭೆಯೂ ಕೂಡ ಯಶಸ್ವಿಯಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದಿದ್ದಾರೆ.








