ಟಾಪ್ 3 ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು: ಅಧಿಕಾರ ಸ್ವೀಕಾರ ಮಾಡಿದ ಸಿಟಿರವಿ, ದಿನೇಶ್
– ಜೀವರಾಜ್ ಸೇರಿ ಅನೇಕ ಗಣ್ಯರಿಂದ ಶುಭಾಶಯಗಳು
– ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಂಜೇಗೌಡ
– ಶ್ರೀಲಂಕಾದಲ್ಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಹಾಗೂ ಉಪಾಧ್ಯಕ್ಷರಾಗಿ ಕೊಪ್ಪ ಮಂಡಲ ಬಿಜೆಪಿ ಅಧ್ಯಕ್ಷರಾದ ದಿನೇಶ್ ಹೊಸೂರು ಅವರು ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ಇಲ್ಲಾ ನಿರ್ದೇಶಕರು, ಸಿಬ್ಬಂದಿ ಝೆಡ್ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪ್ರಮುಖರು ಇದ್ದರು. ಮಾಜಿ ಸಚಿವ ಜೀವರಾಜ್ ಕೂಡ ಇಬ್ಬರಿಗೂ ಶುಭ ಕೋರಿದರು.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಂಜೇಗೌಡ
ಚಿಕ್ಕಮಗಳೂರು: ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಪಿ.ಮಂಜೇಗೌಡ ಅವರನ್ನು ಸರ್ಕಾರವು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ ಪ್ರಕಟಿಸಿದೆ. ಈಗಾಗಲೇ ಅವರಿಗೆ ಅಭಿನಂದನೆಗಳ ಮಹಾಪುರವೇ ಹರಿದು ಬರುತ್ತಿದೆ. ಅವರ ಸೇವೆಗೆ ಫಲ ಸಿಕ್ಕಿದೆ.
ಶ್ರೀಲಂಕಾದಲ್ಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ
ಮೂಡಿಗೆರೆ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಬಂಗಾಳ ಕೊಲ್ಲಿಯ ಯುವ ನಾಯಕರ ಸಮ್ಮಿಟ್ ನಲ್ಲಿ (Bay Of Bengal Young Leaders Dialogue) ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಪಾಲ್ಗೊಂಡು ತಮ್ಮ ನಾಯಕತ್ವ ಕೌಶಲ್ಯ ಮೆರೆದಿದ್ದಾರೆ. ಶ್ರೀಲಂಕಾ ಸರ್ಕಾರದ ವಿರೋಧ ಪಕ್ಷದ ನಾಯಕರು ಮತ್ತು ಸಂಸದರಾದಸಾಜಿತ್ ಪ್ರೇಮದಾಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.








