ಚಿತ್ರದುರ್ಗ ಟಾಪ್ ನ್ಯೂಸ್
ಬೀದಿ ನಾಯಿಗಳ ಅಟ್ಟಹಾಸಕ್ಕೆ ಬಾಲಕ ಬಲಿ!
– ಬೈಕ್,ಸರ್ಕಾರಿ ಬಸ್ ನಡುವೆ ಅಪಘಾತ, ಬೈಕ್ ಸವಾರ ಸಾವು
– ಮನೆಯ ಗೋಡೆ ಕುಸಿದು, ವೃದ್ದೆ ದುರ್ಮರಣ
NAMMUR EXPRESS NEWS
ಚಿತ್ರದುರ್ಗ: ಬೀದಿ ನಾಯಿಗಳ ಅಟ್ಟಹಾಸಕ್ಕೆ ಬಾಲಕನೊಬ್ಬ ಬಲಿಯಾದ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದಿದ್ದು, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಚಿತ್ರದುರ್ಗದಲ್ಲಿ ಓರ್ವ ಬಾಲಕ ನಾಯಿ ಕಡಿತದಿಂದ ಮೃತಪಟ್ಟಿದ್ದಾನೆ. ಐದಾರು ಬೀದಿ ನಾಯಿಗಳು ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಎಳೆಯ ಹುಡುಗನ ಮೇಲೆ ಏಕಾಏಕಿ ಮುಗಿಬಿದ್ದಿದ್ದು, ನಾಯಿ ಕಡಿತದಿಂದ ಪುಟ್ಟ ಕಂದ ಕೊನೆಯುಸಿರೆಳೆದಿದ್ದಾನೆ.
ಕೋಚಿಂಗ್ ಸೆಂಟರ್ಗೆ ಹೋಗಿ ಸೈಕಲ್ನಲ್ಲಿ ಮನೆಗೆ ವಾಪಾಸು ಬರುವಾಗ ಬೀದಿ ನಾಯಿಗಳು ದಾಳಿ ಮಾಡಿವೆ. ತಕ್ಷಣ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಹೋದರೂ, ಚಿಕಿತ್ಸೆ ಫಲಿಸದೆ ಬಾಲಕ ಮಿಥುನ್ ಕಾಣಿಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ರಾಮ್ ಪೊಲೀಸ್ ಠಾಣೆ ಪಿಎಸ್ಐ ಮಹೇಶ್ ಹೊಸಕೋಟೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ.
– ಬೈಕ್ ಬಸ್ ನಡುವೆ ಅಪಘಾತ, ಬೈಕ್ ಸವಾರ ಸಾವು
ಹೊಸದುರ್ಗ: ಬೈಕ್ ಹಾಗೂ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹೊಸದುರ್ಗ ತಾಲೂಕಿನಲ್ಲಿ ನಡೆದಿದೆ. ಹೊಸದುರ್ಗ ತಾಲೂಕಿನ ಕಂಚಿಪುರ ಬಳಿ ತಿರುವಿನಲ್ಲಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ತಿರುವಿನಲ್ಲಿ ಎರಡೂ ವಾಹನಗಳು ವೇಗವಾಗಿ ಬಂದಿದ್ದು, ಬೈಕ್ ಬಸ್ ಬಸ್ಸಿನ ಚಕ್ರಕ್ಕೆ ಸಿಲುಕಿದೆ. ಘಟನೆಯಲ್ಲಿ ಹೊಸಗೊಲ್ಲರಹಟ್ಟಿ ಗ್ರಾಮದ ಚಿಕ್ಕಣ್ಣ (35) ಮೃತಪಟ್ಟಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮನೆಯ ಗೋಡೆ ಕುಸಿದು, ವೃದ್ದೆ ದುರ್ಮರಣ
ಚಿತ್ರದುರ್ಗ: ಸತತ ಮಳೆಯಿಂದ ತಂಡಿಯಾಗಿದ್ದ ಮನೆಯ ಗೋಡೆ ಕುಸಿದು ಬಿದ್ದು ವೃದ್ದೆ ಮೃತಪಟ್ಟಿರುವ ಘಟನೆ ನಡೆದಿದೆ.
ಚಿತ್ರದುರ್ಗ ತಾಲೂಕಿನ ಈಚಲನಾಗೇನಹಳ್ಳಿ ಗ್ರಾಮದ 63 ವರ್ಷದ ವೃದ್ಧೆ ರಂಗಮ್ಮನ ಮೇಲೆ ಒದ್ದೆಯಾಗಿದ್ದ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ, ಸರ್ಕಾರದಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ತಹಶೀಲ್ದಾರೆ ಸೂಚನೆ ನೀಡಿದ್ದಾರೆ.
ಕಳೆದ ಒಂದು ವಾರದಿಂದ ಬಿಟ್ಟು ಬಿಡುದಂತೆ ಸುರಿಯುತ್ತಿರುವ ಮಳೆಯಿಂದಾಗಿ ರಂಗಮ್ಮ ವಾಸಿಸುತ್ತಿದ್ದ ಮನೆಯ ಗೋಡೆ ಒದ್ದೆಯಾಗಿ ಕುಸಿದು ಬಿದ್ದಿದೆ.