ಉದ್ಯಮದ ಮಿನುಗುತಾರೆ ರತನ್ ಅಸ್ತಂಗತ: ಸದ್ಗುರು ಪ್ರದೀಪ್ ಕಣ್ಣೀರು
– ಹೊಸದುರ್ಗದಲ್ಲಿ ಸದ್ಗುರು ಆಯುರ್ವೇದ ಕಂಪನಿಯಲ್ಲಿ ಸಂತಾಪ ಸಭೆ
– ದೇಶದ ಅಪ್ರತಿಮ ಉದ್ಯಮಿಗೆ ಪ್ರದೀಪ್ ನುಡಿ ನಮನ
NAMMUR EXPRESS NEWS
ಹೊಸದುರ್ಗ: ಭಾರತದ ಬಲಿಷ್ಠ ಉದ್ಯಮ ಕ್ಷೇತ್ರವನ್ನು ಜಗತ್ತಿಗೆ ಪರಿಚಯಿಸಿದ ಧೀಮಂತ ಉದ್ಯಮಿ ರತನ್ ಟಾಟಾ ಅಗಲಿಕೆ ಭಾರತದ ಉದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ ತಂದಿದೆ. ರತನ್ ಟಾಟಾ ಭಾರತದ ಉದ್ಯಮಿಗಳಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ. ಜೇಮ್ ಶೆಟ್ ಜಿ ಟಾಟಾ ಕಟ್ಟಿದ ಟಾಟಾ ಉದ್ಯಮವನ್ನು ಬಾನೆತ್ತಕ್ಕೆ ಬೆಳೆಸಿ ತನ್ನ ಬದುಕಿನಲ್ಲಿ ಸರಳತೆಯನ್ನ ಮೈಗೂಡಿಸಿಕೊಂಡು ಬೆಳೆದವರು ಸರಕು ವಾಹನಗಳು ಇಲ್ಲದೆ ಬರದಾಡುತ್ತಿರುವ ಗ್ರಾಮೀಣ ಭಾಗದ ರೈತ ಕುಟುಂಬಗಳಿಗೆ ತಾವು ಬೆಳೆದ ಧಾನ್ಯಗಳನ್ನು ಮಾರುಕಟ್ಟೆಗೆ ತರಲು ಟಾಟಾ ಏಸ್ ಪರಿಚಯಿಸಿದ ಕೀರ್ತಿ ಭಾರತದ ಹೆಸರಾಂತ ಉದ್ದಿಮೆ ಜೆ ಎನ್ ರತನ್ ಟಾಟಾ ರವರಿಗೆ ಸಲ್ಲುತ್ತದೆ ಎಂದು ಯುವ ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದ್ದಾರೆ.
ನಗರದ ಸದ್ಗುರು ಆಯುರ್ವೇದ ಕಂಪನಿಯಲ್ಲಿ ನಡೆದ ಜೇಮ್ ಶೇಟ್ ಜಿ ರತನ್ ಡಾಟಾರವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ದೇಶದ ಸಾಮಾನ್ಯ ಪ್ರಜೆಯು ಕಾರಿನಲ್ಲಿ ಓಡಾಡಬೇಕೆಂಬ ಕನಸು ಕಂಡು ಜನಸಾಮಾನ್ಯರಿಗಾಗಿ ಕಡಿಮೆ ವೆಚ್ಚದಲ್ಲಿ ನ್ಯಾನೊ ಕಾರ್ ಮಾರುಕಟ್ಟೆಗೆ ತಂದರು. ಬಡ ಕುಟುಂಬದ ಸಾಮಾನ್ಯ ವ್ಯಕ್ತಿಯು ತನ್ನ ಮಕ್ಕಳೊಂದಿಗೆ ನ್ಯಾನೋ ಕಾರ್ ನಲ್ಲಿ ಓಡಾಡುವಂತೆ ಮಾಡಿದರು.. ರತನ್ ಡಾಟರ್ ಅವರು ತಮಗೆ ಬರುತ್ತಿದ್ದ ಆದಾಯದಲ್ಲಿ ಬಹುಪಾಲು ಹಣವನ್ನು ಸಾರ್ವಜನಿಕವಾಗಿ ಶಿಕ್ಷಣ ಸಂಸ್ಥೆ, ಆರೋಗ್ಯ, ಕ್ಷೇತ್ರಕ್ಕೆ ವಿನಿಯೋಗಿಸುತ್ತಿದ್ದರು. ಪ್ರಪಂಚದ ಬೇರೆ ಬೇರೆ ಪ್ರತಿಷ್ಠಿತ ಕಂಪನಿಗಳನ್ನು ಖರೀದಿಸಿ ಭಾರತದ ಉದ್ಯಮಿಗಳೂ ಪ್ರಬಲರು ಎಂದು ವಿಶ್ವದ ಮಾರುಕಟ್ಟೆಗೆ ತಿಳಿಸಿದರು.. ನಮ್ಮ ದಿನ ನಿತ್ಯದ ಆಹಾರದಲ್ಲಿ ಬಳಸುವ ಒಪ್ಪಿನಿಂದಲೂ ಹಿಡಿದು ಬಾನೆತ್ತರದಲ್ಲಿ ಹಾರುವ ವಿಮಾನಗಳನ್ನು ಸಹ ಟಾಟಾ ಸಮಸ್ತ ಸಂಸ್ಥೆ ಮಾರುಕಟ್ಟೆಗೆ ತಂದಿದೆ.ರತನ್ ಟಾಟಾರವರು ಭಾರತದ ರಾಷ್ಟ್ರ ಭಕ್ತ ಉದ್ಯಮಿ ಯಾಗಿದ್ದರು ಎಂದರು..
ಶ್ರದ್ಧಾಂಜಲಿ ಸಭೆಯಲ್ಲಿ ಪುರಸಭಾ ಸದಸ್ಯರಾದ ಡಾ.ಸ್ವಾತಿ ಪ್ರದೀಪ್,ನಿವೃತ್ತ ಯೋಧ ಗೋವಿಂದ ಸ್ವಾಮಿ ,ಸಮಾಜ ಸೇವಕ ತುಂಬಿನಕೆರೆ ಬಸವರಾಜ್ ಅಣ್ಣಪ್ಪ, ತಿಪ್ಪೇಶ್ ಹಾಗೂ ಸದ್ಗುರು ಸಂಸ್ಥೆಯ ನೂರಾರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.