ಕಾಫಿನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮ
* ಶೃಂಗೇರಿ, ಹೊರನಾಡು,ಹರಿಹರಪುರ,ಬಾಳೆಹೊನ್ನೂರು ದೇವಾಲಯದಲ್ಲಿ ಪೂಜೆ
* ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ
NAMMMUR EXPRESS NEWS
ಚಿಕ್ಕಮಗಳೂರು: ದಸರಾ,ನವರಾತ್ರಿಯ ಒಂಭತ್ತನೇ ದಿನ ಮಹಾನವಿಯಂದು ಇಂದು ಎಲ್ಲೆಡೆ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಂಭ್ರಮದ ದಸರಾ,ನವರಾತ್ರಿ ಆಚರಣೆ ನಡೆದಿದ್ದು ಇಂದು ಎಲ್ಲೆಡೆ ಆಯುಧ ಪೂಜೆಯನ್ನು ಭಕ್ತಿ,ಸಡಗರ,ಸಂಭ್ರಮದಿಂದ ನೆರವೇರಿಸಲಾಯಿತು.
ಜಿಲ್ಲೆಯ ವಿಶ್ವಪ್ರಸಿದ್ಧ ದೇವಾಲಯವಾದ ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಆಯುಧಪೂಜೆ ನೆರವೇರಿಸಲಾಯಿತು. ಶ್ರೀಮಠದ ಗಜ,ಅಶ್ವ,ಗೋವು,ವಾಹನಗಳಿಗೆಪೂಜೆ ಸಲ್ಲಿಸಿದ ಉಭಯ ಜಗದ್ಗುರುಗಳು ನಂತರ ನಡೆದ ಶತಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಜಗದ್ಗುರು ಶ್ರೀವಿದುಶೇಖರ ಭಾರತೀ ಮಹಾಸ್ವಾಮಿಗಳು ಪಾಲ್ಗೊಂಡರು.ಇಂದು ತಾಯಿ ಶೃಂಗೇರಿ ಶ್ರೀಶಾರದೆಯು ಸಿಂಹವಾಹನಾಲಂಕಾರದಲ್ಲಿ ಚಾಮುಂಡಿಯಾಗಿ ದರ್ಶನ ನೀಡುತ್ತಿದ್ದಾಳೆ.
ಅಂತೆಯೇ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಾಲಯ ಸೇರಿದಂತೆ ಹರಿಹರ ಪುರ ಶ್ರೀಲಕ್ಷ್ಮೀನೃಸಿಂಹ ದೇವಾಲಯ,ಶಕಟಪುರ ದೇವಾಲಯ ಸೇರಿದಂತೆ ಬಾಳೆಹೊನ್ನೂರು,ಆಲ್ದೂರು,ಚಿಕ್ಕಮಗಳೂರು,ಮೂಡಿಗೆರೆ,ತರೀಕೆರೆ,ಕಡೂರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ದುರ್ಗಿ ಸನ್ನಿಧಿಯಲ್ಲಿ ವಿಶೇಷ ಪೂಜೆ,ಹೋಮ,ಆಯುಧ ಪೂಜೆ ನೆರವೇರಿಸಲಾಯಿತು.ಈ ಸಂಧರ್ಭದಲ್ಲಿ ಭಕ್ತರೂ ಕೂಡ ಭಕ್ತಿಯಿಂದ ಪಾಲ್ಗೊಂಡರು.
* ಜಿಲ್ಲೆಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಸಂಭ್ರಮದ ಆಯುಧ ಪೂಜೆ
ಎಲ್ಲೆಡೆ ಆಯುಧ ಪೂಜೆ ಸಂಭ್ರಮದಿಂದ ನೆರವೇರಿದರೆ,ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯನ್ನು ಪೊಲೀಸ್ ಸಿಬ್ಬಂದಿ ಸಡಗರದಿಂದ ಆಚರಿಸಿದರು. ಠಾಣೆಯನ್ನು ಸುಣ್ಣ ಬಣ್ಣ ಹೊಡೆಸಿ ಅಲಂಕರಿಸಿ,ಹೊಸ ಸಾಂಪ್ರದಾಯಿಕ ಉಡುಗೆ ತೊಟ್ಟು,ತಮ್ಮ ರೈಫಲ್ಗಳು,ವಾಹನಗಳಿಗೆ ಪೂಜೆ ಮಾಡಿ ಸಿಹಿಹಂಚಿ ಸಂಭ್ರಮಿಸಿದರು.








