ದಾವಣಗೆರೆ : ದಾವಣಗೆರೆ ಐಜಿಪಿಯಾಗಿ ಡಾ.ಬಿ.ಆರ್. ರವೀಕಾಂತೇ ಗೌಡ ವರ್ಗ
– ಚಿತ್ರದುರ್ಗ : ಜ. 18,19 ರಂದು ಚಿತ್ರದುರ್ಗದಲ್ಲಿ ಶರಣ ಸಾಹಿತ್ಯ ಪರಿಷತ್ ಸಮ್ಮೇಳನ
– ಸಿದ್ದರಾಮ ಬೆಲ್ದಾಳ ಶರಣರು ಸಮ್ಮೇಳನಾಧ್ಯಕ್ಷರು
NAMMUR EXPRESS NEWS
ದಾವಣಗೆರೆ : ಮೂವರು ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಧಿಕಾರಿಗಳನ್ನ ವರ್ಗಗೊಳಿಸಿ ಆದೇಶಿಸಲಾಗಿದೆ. ಡಾ.ಬಿ.ಆರ್ ರವಿಕಾಂತೇ ಗೌಡ, ಎನ್ ಸತೀಶ್ ಕುಮಾರ್ ಹಾಗೂ ಬಿ.ರಮೇಶ್ ರನ್ನ ವರ್ಗಗೊಳಿಸಿ ಆದೇಶಿಸಲಾಗಿದೆ. ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಎನ್.ಸತೀಶ್ ಕುಮಾರ್ ಅವರನ್ನು ಬೆಂಗಳೂರು ಕೇಂದ್ರ ಕಚೇರಿ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ಕಚೇರಿ ಐಜಿಪಿಯಾಗಿದ್ದ ಡಾ.ಬಿ.ಆರ್. ರವಿಕಾಂತೇಗೌಡ ಅವರನ್ನು ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ದಾವಣಗೆರೆ ಪೂರ್ವ ವಲಯ ಐಜಿಪಿ ಬಿ.ರಮೇಶ್ ಅವರನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಜಂಟಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
– ಚಿತ್ರದುರ್ಗ : ಜ. 18,19 ರಂದು ಚಿತ್ರದುರ್ಗದಲ್ಲಿ ಶರಣ ಸಾಹಿತ್ಯ ಪರಿಷತ್ ಸಮ್ಮೇಳನ ಸಿದ್ದರಾಮ ಬೆಲ್ದಾಳ ಶರಣರು ಸಮ್ಮೇಳನಾಧ್ಯಕ್ಷರು
ಚಿತ್ರದುರ್ಗ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ನ 13ನೇ ರಾಷ್ಟ್ರಮಟ್ಟದ ಸಮ್ಮೇಳನ ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪ ವೇದಿಕೆಯಲ್ಲಿ ಜ.18,19 ರಂದು ನಡೆಯುತ್ತಿದೆ, ಡಾ. ಸಿದ್ದರಾಮ ಬೆಲ್ದಾಳ ಶರಣರು ಸಮ್ಮೇಳನಾಧ್ಯಕ್ಷರಾಗಿದ್ದಾರೆ ಎಂದು ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದರು. ಸಮ್ಮೇಳನವನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸುತ್ತೂರು ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಗದಗಿನ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯವಿರಲಿದೆ. ‘ಅನುಭವ ಸಂಗಮ’ ಸ್ಮರಣ ಸಂಚಿಕೆಯನ್ನು ಸಚಿವ ಎಂ.ಬಿ.ಪಾಟೀಲ್ ಲೋಕಾರ್ಪಣೆ ಮಾಡಲಿದ್ದಾರೆ ಎಂದರು. ಎಂಟು ಚಿಂತನಾಗೋಷ್ಠಿ ಜರುಗಲಿದೆ. ಬಸವಣ್ಣ, ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇ ದನೆ, ಶರಣ ಸಾಹಿತ್ಯದತ್ತ ಯುವಜನತೆ, ಪ್ರಾತಃ ಸ್ಮರಣೀಯರು, ಶರಣರು ಪ್ರತಿ ಪಾದಿಸಿದ ಜೀವನ ಮೌಲ್ಯ, ಶರಣ ಸಾಹಿತ್ಯಾಧಾರಿತ ನಾಟಕ ಹಾಗೂ ಆಧುನಿಕ ವಚನಗೋಷ್ಠಿ ಹಾಗೂ ಸಮ್ಮೇಳನಾಧ್ಯಕ್ಷರ ಜೊತೆಗೆ ಸಂವಾದ ಗೋಷ್ಠಿಗಳಿರಲಿವೆ. ಸಮಾರೋಪ ಜ.19 ರಂದು ಸಂಜೆ 6ಕ್ಕೆ ನಡೆಯಲಿದ್ದು, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯ ರೈಲ್ವೇ ಸಚಿವ ವಿ.ಸೋಮಣ್ಣ, ಕೆಎಲ್ಇ ಶಿಕ್ಷಣ ಸಂಸ್ಥೆಯ ಡಾ.ಎಂ. ಪ್ರಭಾಕರ ಕೋರೆ ಪಾಲ್ಗೊಂಡು ‘ಬಸವಾಮೃತ’ ಕೃತಿ ಬಿಡುಗಡೆ ಮಾಡುವರು. ಸುಪ್ರೀಂ ನಿವೃತ್ತ ನ್ಯಾಯ ಮೂರ್ತಿ ಡಾ.ಶಿವರಾಜ ವಿ.ಪಾಟೀಲ್ ಸಮಾರೋಪದಲ್ಲಿ ಮಾತನಾಡುವರು ಎಂದರು.