ದೆಹಲಿಯಲ್ಲಿ ಉಗ್ರರ ಅಟ್ಟಹಾಸ: ಮೂವರು ಡಾಕ್ಟರ್ ಅರೆಸ್ಟ್!
– 13 ಮಂದಿ ಜನರ ಬಲಿ ಪಡೆದ ಕಾರು ಬಾಂಬ್ ಸ್ಫೋಟ
– ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ: ಎಲ್ಲೆಡೆ ಸಂತಾಪ
ಪ್ರಾಣ ತೆತ್ತ ಜೀವಗಳಿಗೆ ಭಾವಪೂರ್ಣ ಶ್ರದ್ದಾಂಜಲಿ
NAMMUR EXPRESS NEWS
ನವ ದೆಹಲಿ: ನವ ದೆಹಲಿಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಉಗ್ರರು ನಡೆಸಿದ ಕಾರ್ ಬಾಂಬ್ ಸ್ಪೋಟಿಸಿದ್ದು 13 ಜನ ಬಲಿ ಆಗಿದ್ದಾರೆ.
ನವ ದೆಹಲಿ ಮೆಟ್ರೋ ನಿಲ್ದಾಣದ ಒಳಭಾಗದ ಗಾಜುಗಳು ಸ್ಫೋಟದಿಂದಾಗಿ ಪುಡಿಪುಡಿಯಾಗಿವೆ. ಘಟನಾ ಸ್ಥಳದಲ್ಲಿ ಸುಮಾರು 22ಕ್ಕೂ ಹೆಚ್ಚು ವಾಹನಗಳು, ಬೈಕ್ಗಳು ಮತ್ತು ಸುತ್ತಮುತ್ತಲ ಅಂಗಡಿಗಳು ತೀವ್ರವಾಗಿ ಹಾನಿಗೊಳಗಾಗಿವೆ. ಈ ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಜೈಷೆ ಮಹಮದ್ ಸಂಘಟನೆ ಸೇರಿದ ಪುಲ್ವಾಮ ದಾಳಿ ಮಾಡಿದ ಕಾರು ಮಾದರಿ ದಾಳಿ ಇದಾಗಿದ್ದು, ಫಾರಿದಾಬಾದಿನ ಮೂವರು ವೈದ್ಯರಾದ
ಡಾ. ಅದೀಲ್ ಅಹ್ಮದ್, ಡಾ. ಮುಜಾಮಿಲ್ ಶಕೀಲ್, ಡಾ. ಶಾಹಿನ್ ಎಂಬ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸ್ಫೋಟದಲ್ಲಿ ವಾಹನ, ಆಟೋ ಸೇರಿದಂತೆ ಹಲವು ವಾಹನಗಳು ಧಗಧಗಿಸಿವೆ. ಕಾರ್ನಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ಸಂಭವಿಸಿರಬಹುದು ಎಂದು ದೆಹಲಿ ಪೊಲೀಸರು ಮೇಲ್ನೋಟಕ್ಕೆ ಶಂಕಿಸಿದ್ದಾರೆ.
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಾಯಾಳುಗಳನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಎನ್ಐಎ, ಎನ್ಎಸ್ಜಿ ಮತ್ತು ಬಾಂಬ್ ಸ್ಕ್ವಾಡ್ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿವೆ.
ಘಟನೆ ನಡೆದಿದ್ದು ಹೇಗೆ?
ದೆಹಲಿ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರಲ್ಲಿ ನಿಂತಿದ್ದ ಕಾರು ಏಕಾಏಕಿ ಸ್ಫೋಟವಾಗಿತ್ತು. ಸ್ಫೋಟದ ತೀವ್ರತೆಗೆ ಹಲವು ವಾಹನಗಳು ಹೊತ್ತಿ ಉರಿದಿವೆ. ಕಾರು, ಗೂಡ್ಸ್ ವಾಹನ, ಆಟೋ ಸೇರಿದಂತೆ ಹಲವು ವಾಹನಗಳು ಧಗಧಗಿಸಿವೆ. ಕಾರ್ನಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ಸಂಭವಿಸಿರಬಹುದು ಎಂದು ದೆಹಲಿ ಪೊಲೀಸರು ಮೇಲ್ನೋಟಕ್ಕೆ ಶಂಕಿಸಿದ್ದಾರೆ.
ದೆಹಲಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್ ಸ್ಫೋಟಗೊಂಡ ಕಾರಿನ (ಸಂಖ್ಯೆ HR 26, 7674) ಸುಳಿವು ಪತ್ತೆಯಾಗಿದ್ದು, ಹರಿಯಾಣ ಮೂಲದ ಸಲ್ಮಾನ್ ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ತಾನು ಮೊಹಮ್ಮದ್ ನದೀಮ್ ಅನ್ನೋರಿಗೆ ಕಾರು ಮಾರಾಟ ಮಾಡಿರುವುದಾಗಿ ಸಲ್ಮಾನ್ ಹೇಳಿದ್ದಾನೆ. ಸದ್ಯ ವಶಕ್ಕೆ ಪಡೆದಿರುವ ದೆಹಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.








