ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚು ತ್ತಿರುವ ಜ್ಞಾನೇಂದ್ರ
– ಬಸವರಾಜ ಬೊಮ್ಮಾಯಿ, ಆರಗ ಅವಧಿಯಲ್ಲಿ ವಕ್ಫ್ ಅತೀ ಹೆಚ್ಚು ಅನುದಾನ, ತೀರ್ಥಹಳ್ಳಿಯಲ್ಲಿ ಹಲವು ಕಡೆ ಭೂಮಿ ಮಂಜೂರು
– ಶಾಸಕ ಆಗರ ಜ್ಞಾನೇಂದ್ರ ವಿರುದ್ಧ ತುಪ್ಪದಮನೆ ವಿನಾಯಕ ಪತ್ರಿಕಾ ಹೇಳಿಕೆ
NAMMUR EXPRESS NEWS
ಶಾಸಕ ಆರಗ ಜ್ಞಾನೇಂದ್ರರ ರಾಜಕೀಯ ಕಾರಣಗಳಿಗಾಗಿ ಹಿಂದೂ ಮುಸ್ಲಿಮರ ನಡುವೆ ಕಂದಕ ಉಂಟು ಮಾಡುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಅನೇಕ ಬಾರಿ ಮುಸ್ಲಿಮರ ಪರವಾಗಿ ನಿಂತಿರುವ ಅವರು ಈಗ ವಕ್ಫ್ ವಿಚಾರದಲ್ಲಿ ಇಡೀ ಮುಸ್ಲಿಂ ಜನಾಂಗವನ್ನು ತಪ್ಪಿತಸ್ಥರು ಎನ್ನುವಂತೆ ನೋಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷ ತುಪ್ಪದಮನೆ ವಿನಾಯಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾಸ್ತವವಾಗಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹಾಗೂ ಆರಗ ಜ್ಞಾನೇಂದ್ರ ಗೃಹಮಂತ್ರಿಯಾಗಿದ್ದಾಗಲೇ ವಕ್ಫ್ ಮಂಡಳಿಯಲ್ಲಿ ಅತಿ ಹೆಚ್ಚಿನ ಅನುದಾನ ನೀಡಲಾಗಿದೆ ಅಲ್ಲದೇ ಸಂಬಂಧಿಸಿದ ಆಸ್ತಿಯನ್ನು ಕೂಡ ವಶಪಡಿಸಿಕೊಳ್ಳಲು ಸೂಚನೆಯನ್ನು ನೀಡಲಾಗಿದ್ದು ಇದೀಗ ಬಹಿರಂಗಗೊಂಡಿದೆ. ಜ್ಞಾನೇಂದ್ರರವರೇ ಶಾಸಕರಾಗಿದ್ದ ಅವಧಿಯಲ್ಲಿ ಮುಸ್ಲಿಂ ಸಮುದಾಯದ ಖಬರಸ್ತಾನ ಮತ್ತು ವಕ್ಫ್ ಬೋರ್ಡಿಗೆ ಅಗ್ರಹಾರ ಹೋಬಳಿಯ ಅಗಳಬಾಗಿಲಿನಲ್ಲಿ 4 ಎಕರೆ, ಆಗುಂಬೆ ಹೋಬಳಿಯ ಹೊಸೂರಿನಲ್ಲಿ 1 ಎಕರೆ, ಮಂಡಗದ್ದೆ ಹೋಬಳಿಯ ಕಣಗಲಕೊಪ್ಪದಲ್ಲಿ 2 ಎಕರೆ, ಮಂಡಗದ್ದೆ ಹೋಬಳಿಯ ತೂದೂರಿನಲ್ಲಿ 2 ಎಕರೆ ಮಂಜೂರಾಗಿದೆ. ಆದರೆ ಈಗ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ರೈತರು ಆಸ್ತಿಗಳನ್ನು ವಕ್ಫ್ ಬೋರ್ಡಿನ ವಶಕ್ಕೆ ನೀಡಲು ಹೊರಟಿದೆ ಎನ್ನಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ತಾಲ್ಲೂಕಿನ ಅನೇಕ ಖಬರಸ್ಥಾನ ಮತ್ತು ವಕ್ಫ್ ಬೋರ್ಡಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯುತ್ತಿದ್ದು, ಆನಂತರ ಅವುಗಳ ಬಗ್ಗೆ ಪ್ರಶ್ನೆ ಮಾಡುತ್ತೇನೆ. ಕಾಂಗ್ರೇಸ್ ಪಕ್ಷ ಯಾವಾಗಲೂ ಎಲ್ಲಾ ವರ್ಗದ ಧರ್ಮದ, ಬಡವರ, ಹಿಂದುಳಿದ ರೈತರ ಪರವಾಗಿ ಇದೆ ಹೊರತು ಯಾವುದೇ ಒಂದು ಧರ್ಮದ ಪರ ಇಲ್ಲವೆಂದು ನೆನಪಿಸುತ್ತಿದ್ದೇನೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಮುಸ್ಲಿಂರನ್ನು ವಿರೋಧಿಸಿದಂತೆ ನಾಟಕ ಮಾಡಿ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ನಾಯಕಿಯಾದ ಜೀನತ್ ಗೌಸರ್ರವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಆಗ ಅಧಿಕಾರಕ್ಕಾಗಿ ಮುಸ್ಲಿಮರು ಬೇಕಾಯಿತೇ? ಮತ್ತೊಂದು ಸಂದರ್ಭದಲ್ಲಿ ನನ್ನ ಗೆಳೆಯರು ಆಗಿರುವ ರಹಮತ್ ಉಲ್ಲಾ ಅಸಾದಿಯವರನ್ನು ಬಿಜೆಪಿಯಿಂದ ಅಧ್ಯಕ್ಷರನ್ನಾಗಿ ಮಾಡುತ್ತೀರಿ. ನಿಮಗೆ ಅವಶ್ಯಕತೆ ಇದ್ದಾಗ ಮುಸ್ಲಿಮರು ಹಿಂದುಗಳಾಗುತ್ತಾರೆಯೇ? ತೀರ್ಥಹಳ್ಳಿ ತಾಲೂಕಿನಲ್ಲಿ ಯುವಕರಿಗೆ ಸುಳ್ಳು ಹೇಳಿ ನೀವು ರಾಜಕೀಯದಲ್ಲಿ ಜಯ ಗಳಿಸಿದ್ದೀರಿ. ಸತ್ಯವನ್ನು ಜನರಿಗೆ ತಿಳಿ ಹೇಳುವುದರಲ್ಲಿ ನಮ್ಮ ನಾಯಕರುಗಳು ವಿಫಲರಾಗಿದ್ದಾರೆ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ರ ಮಧ್ಯೆ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಶಾಂತಿ ಕದಡುವ ಕೆಲಸ ತಮಗೆ ಶೋಭೆ ತರುತ್ತದೆಯೇ? ನಿಮ್ಮನ್ನು ಟೀಕಿಸುತ್ತಿಲ್ಲ ಹಾಗೆಯೇ ಮುಸ್ಲಿಮರನ್ನು ವಿರೋಧಿಸುತ್ತಿಲ್ಲ. ಇದಲ್ಲದೇ ಅಧಿಕಾರ ಹಿಡಿಯಬೇಕು ಎಂಬ ಒಂದೇ ಕಾರಣಕ್ಕಾಗಿ ಬಿಜೆಪಿ ಅಪ್ಪಟ ಹಿಂದುಗಳ ಪಕ್ಷ ಎನ್ನುವುದು ಜ್ಞಾನೇಂದ್ರ ಅವರಿಗೆ ನೆನಪಿರಲಿಲ್ಲವೇ ಎಂದು ಪ್ರಶ್ನಿಸಿರುವ ವಿನಾಯಕ್ ಆರಗ ಜ್ಞಾನೇಂದ್ರರ ಈ ಮುಖವಾಡ ರಾಜಕಾರಣದ ವಿರುದ್ಧ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ತಾಲ್ಲೂಕು ಕಚೇರಿ ಎದುರು ಸತ್ಯಾಗ್ರಹ ಹೂಡುವುದಾಗಿ ಎಚ್ಚರಿಸಿದ್ದಾರೆ.