16 ವರ್ಷದ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್!
– ಬಜೆಟ್ ಅಲ್ಲಿ ಏನೇನು? ಯಾವುದು ವಿಶೇಷ..?
– ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಸಾಲ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ರಾಜ್ಯದ 2026-27 ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17 ನೇ ಬಾರಿಗೆ 4.48 ಲಕ್ಷ ಕೋಟಿ ಗಾತ್ರದ ಆಯವ್ಯಯ ಮಂಡಿಸಿದ್ದಾರೆ.
ರಾಜ್ಯ ಬಜೆಟ್ ಮುಖ್ಯಾಂಶಗಳು:
1. 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್
2. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಇನ್ನು ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆ
3. ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಮೀಸಲು
4. ಕಾಲೇಜು ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಪುನರಾರಂಭ
5. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಸಾಲ
6. ರಾಜ್ಯದ 5 ಕಡೆ ರೇಷ್ಮೆ ಪಾರ್ಕ್
7. ಬೆಂಗಳೂರು ಮೆಟ್ರೋ ವಿಸ್ತರಣೆ
8. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2 ಸಾವಿರ ಹುದ್ದೆ ಭರ್ತಿ
9. ಶಾಲಾ ಕಾಲೇಜುಗಳಿಗೆ 15 ಸಾವಿರ ಶಿಕ್ಷಕರ ನೇಮಕಾತಿ
10. ಕಾರವಾರದಲ್ಲಿ 198 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
11. ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನ ಮಾತೃತ್ವ ರಜೆ
12. ಅಲ್ಪಸಂಖ್ಯಾತ, SC-ST ನಿಗಮಗಳ ಸಾಲಗಳಿಗೆ ಬಡ್ಡಿ ಮನ್ನಾ
13. ಮಾನವ ವನ್ಯ ಜೀವಿಗಳ ಸಂಘರ್ಷ ತಡೆಗೆ 1445 ಕೋಟಿ ಮೀಸಲು
14. ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಯಲ್ಲಿ ಬಿಸಿಯೂಟ
15. ರಾಜ್ಯದ 11 ಜಿಲ್ಲೆಗಳಲ್ಲಿ 12 ಪೋಲಿಸ್ ಠಾಣೆ ಸ್ಥಾಪನೆ
16. ಕುಕ್ಕೆ ಕೊಲ್ಲೂರು ದೇಗುಲ ಅಭಿವೃದ್ಧಿ
17. ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮವಸ್ತ್ರವಿತರಣೆ
18. ಉದ್ಯೋಗಸ್ಥ SC-ST ಮಹಿಳೆಯರಿಗೆ ಹೊಸ ಹಾಸ್ಟೆಲ್ ಘೋಷಣೆ
19. ಈ ವರ್ಷ 1.32 ಲಕ್ಷ ಕೋಟಿ ಸಾಲ ಮಾಡಿದ ಸರ್ಕಾರ
20. ಕರ್ನಾಟಕ ರಾಜ್ಯದ ಒಟ್ಟಾರೆ ಸಾಲ 8.24 ಲಕ್ಷ ಕೋಟಿ
21. ಬೆಂಗಳೂರಿನಲ್ಲಿ AI ಕೇಂದ್ರ
22. ಒಟ್ಟು 56,432 ಹುದ್ದೆಗಳಿಗೆ ನೇಮಕಾತಿ
23. ಮದ್ಯ ದರ ಹಂತ ಹಂತವಾಗಿ ಏರಿಕೆ
24. ಸವಿತಾ ಸಮಾಜದವರಿಗೆ ಸಲೂನ್ ತೆರೆಯಲು ಶೇ 4 ಬಡ್ಡಿ ದರದಲ್ಲಿ 10 ಲಕ್ಷ ಸಾಲ
25. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಜೊತೆಗೆ 300 ಹಾಸಿಗೆಯ ಆಸ್ಪತ್ರೆ
26. ಮಹಿಳಾ ವೃದ್ಧಾಶ್ರಮ ಸ್ಥಾಪನೆ
27. ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ
28. ಅಲ್ಪಸಂಖ್ಯಾತ ಮಹಿಳಾ ಸಹಕಾರಿ ಸಂಘ ಸ್ಥಾಪನೆ ಘೋಷಣೆ
29. ಮಲೆನಾಡು ಕರಾವಳಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಅನುದಾನ
30. ಮೀನುಗಾರರಿಗೆ ಪ್ರೋತ್ಸಾಹ ಧನ 20 ಸಾವಿರಕ್ಕೆ ಏರಿಕೆ
31. ಗ್ರಾಮ ಪಂಚಾಯತ್ ವಿದ್ಯುತ್ ಬಿಲ್ ಹೊರೆ ತಪ್ಪಿಸಲು ಸೋಲಾರ್ ಗ್ರಿಡ್ ಸ್ಥಾಪನೆ
800 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ
1.3900 ಕೋಟಿ ರೂಗಳ ವೆಚ್ಚದಲ್ಲಿ ಎಡಿಬಿ, ಕೆಕೆಆರ್ಡಿಬಿ ಮತ್ತು ಕೆಎಂಇಆರ್ಸಿ ನೆರವಿನೊಂದಿಗೆ 800 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ
2. ವಿಶ್ವವಿದ್ಯಾನಿಲಯಗಳಲ್ಲಿ 1,000 ಬೋಧಕ ಹುದ್ದೆಗಳ ಭರ್ತಿ
3. 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಪದವಿ ಕಾಲೇಜುಗಳ ಉನ್ನತಿಕರಣ
4. 500 ಕೋಟಿ ರೂಪಾಯಿ ವೆಚ್ಚದಲ್ಲಿ ಐಐಟಿ ಮಾದರಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ವಿಶ್ವವಿದ್ಯಾಲಯದ ಅಭಿವೃದ್ಧಿ
5. ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿನ ಮಹಿಳಾ ಅಧಿಕ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ
6. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಧಾರವಾಡ ಮತ್ತು ಬೆಂಗಳೂರಿನಲ್ಲಿ ಡಿಜಿಟಲ್ ಲೈಬ್ರರಿ ಹಾಗು ಅಧ್ಯಯನ ಕೇಂದ್ರ ಸ್ಥಾಪನೆ
7. NCC ಕೆಡಿತ್ ಕಾರ್ಯ ಬಲ ಹೆಚ್ಚಳ
8. ಬಸವಕಲ್ಯಾಣದಲ್ಲಿ ಖಾಸಗಿ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ 25 ಎಕರೆ ಜಮೀನು








