ಕ್ರೈಸ್ಟ್ ಕಿಂಗ್: ಈಜು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
– ದ್ವಿತೀಯ ವಾಣಿಜ್ಯ ವಿಭಾಗದ ಆರ್ಯನ್ ಕೋಟ್ಯಾನ್
– ೧೫೦೦ ಮತ್ತು ೪೦೦ ಮೀ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನ
NAMMUR EXPRESS NEWS
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ಸರಕಾರಿ ಪ.ಪೂ ಕಾಲೇಜು ಉಡುಪಿ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಈಜು ಸ್ಪರ್ಧೆಯಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆರ್ಯನ್ ಆರ್ ಕೋಟ್ಯಾನ್ ೧೫೦೦ ಮೀ ಫ್ರೀ ಸ್ಟೈಲ್ ಮತ್ತು ೪೦೦ ಮೀ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಉಳಿದಂತೆ ಪ್ರಥಮ ವಿಜ್ಞಾನ ವಿಭಾಗದ ಸ್ಟೆಲಿಯೊಸ್ ಡಾರ್ವಿನ್ ತಾವ್ರೋ ೧೫೦೦ ಮೀ ಮತ್ತು ೪೦೦ ಮೀ ಫ್ರೀ ಸ್ಟೈಲ್ ನಲ್ಲಿ ತೃತೀಯ ಸ್ಥಾನ, ಪ್ರಥಮ ವಿಜ್ಞಾನ ವಿಭಾಗದ ಗಗನ್ ಭಟ್ ೨೦೦ ಮೀ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ. ೪೦೦ × ೧೦೦ಮೀ ರಿಲೇಯಲ್ಲಿ ಆರ್ಯನ್, ಗಗನ್ ಭಟ್, ಸಾರ್ಥಕ್, ಸ್ಟೆಲಿಯೊಸ್ ಡಾರ್ವಿನ್ ತಾವ್ರೋ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.








