ಕರಾವಳಿ ಟಾಪ್ 3 ನ್ಯೂಸ್
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ರದ್ದು!
ಕಂಬಳಕ್ಕೆ 2 ಕೋಟಿ ಅನುದಾನಕ್ಕೆ ಸಮಿತಿ ಪಟ್ಟು!
2 ಜೀವ ಉಳಿಸಿದ ತುಳು ಹೀರೋ ಶೋಧನ್ ಶೆಟ್ಟಿಗೆ ಸಲಾಂ!
NAMMUR EXPRESS NEWS:
ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರಡಿಸಿದ್ದ ಗಡಿಪಾರು ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ರಾಯಚೂರಿನ ಮಾನ್ವಿಗೆ ಅವರನ್ನು ಗಡಿಪಾರು ಮಾಡುವ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿ ತೀರ್ಪು ನೀಡಿದೆ. ಹೈಕೋರ್ಟ್ ನೀಡಿದ ತೀರ್ಪಿನಂತೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗಾಧಿಕಾರಿಗೆ 15 ದಿನಗಳೊಳಗೆ ಸೂಕ್ತ ಕಾರಣ ಹಾಗೂ ಸಂಬಂಧಿತ ಕಾನೂನು ಸೆಕ್ಷನ್ಗಳೊಂದಿಗೆ ವಿಚಾರಣೆ ನಡೆಸಿ ಹೊಸ ಆದೇಶ ಹೊರಡಿಸಲು ಸೂಚಿಸಲಾಗಿದೆ.
ಧರ್ಮಸ್ಥಳದ ತಲೆಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣಗಳಲ್ಲಿ ಹೋರಾಟ ನಡೆಸುತ್ತಿದ್ದ ತಿಮರೋಡಿ ಅವರನ್ನು ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಸೆಪ್ಟೆಂಬರ್ 20ರಂದು ಒಂದು ವರ್ಷಗಳ ಕಾಲ ಮಾನ್ವಿಗೆ ಗಡಿಪಾರು ಮಾಡುವ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಿಮರೋಡಿ ಹೈಕೋರ್ಟ್ ಮೊರೆ ಹೋಗಿದ್ದರು.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32 ಪ್ರಕರಣಗಳು ದಾಖಲಾಗಿದ್ದವು ಎಂಬ ಕಾರಣದಿಂದಲೇ ಜಿಲ್ಲಾಡಳಿತ ಗಡಿಪಾರು ಕ್ರಮಕ್ಕೆ ಮುಂದಾಗಿತ್ತು. ಆದರೆ ಹೈಕೋರ್ಟ್ ಈ ಗಡಿಪಾರು ಆದೇಶದಲ್ಲಿ ಕಾನೂನು ಪ್ರಕ್ರಿಯೆಯ ತೊಂದರೆಯನ್ನು ಗುರುತಿಸಿ ಅದನ್ನು ರದ್ದುಪಡಿಸಿದೆ

ಕಂಬಳಕ್ಕೆ 2 ಕೋಟಿ ಅನುದಾನಕ್ಕೆ ಸಮಿತಿ ಪಟ್ಟು!
ಮಂಗಳೂರು: ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಮತ್ತು ವಿಧಾನಸಭಾ ಸದಸ್ಯರಾದ ಐವನ್ ಡಿಸೋಜ ರವರನ್ನು ಕಂಬಳ ಸಮಿತಿಯ ಅಧ್ಯಕ್ಷರಾದ ಡಾ ಐಕಲ ಭಾವ ದೇವಿಪ್ರಸಾದ್ ಶೆಟ್ಟಿ ಯವರು ಕಂಬಳಗಳಿಗೆ ಸಹಕಾರ ನೀಡುವಂತೆ ಅವರನ್ನು ಭೇಟಿ ಯಾಗಿ ಸರ್ಕಾರದ ಮಟ್ಟದಲ್ಲಿ ಕಂಬಳಕೆ 2 ಕೋಟಿ ವಿಶೇಷ ಅನುದಾನವನ್ನು ಬಜೆಟ್ ನಲ್ಲಿ ಮೊತ್ತ ಮಿಸಲು ಇಟ್ಟು ಕಂಬಳ ಅಭಿಮಾನಿಗಳಿಗೆ ಬೆಂಬಲಿಸುವಂತೆ ವಿನಂತಿಸಿದರು.
2 ಜೀವ ಉಳಿಸಿದ ತುಳು ಹೀರೋ ಶೋಧನ್ ಶೆಟ್ಟಿಗೆ ಸಲಾಂ!
ಮಂಗಳೂರು: ನವೆಂಬರ್ 17 ಬೆಳಿಗ್ಗೆ ಮಂಗಳೂರು ಕುಂಟಿಕಾನದ BMS ಹೋಟೆಲ್ ಮುಂಬಾಗ ಎರಡು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡ ಇಬ್ಬರು ಗಾಯಾಳುಗಳನ್ನು ರಕ್ಷಿಸಿ ತುಳು ಹೀರೋ ಶೋಧನ್ ಶೆಟ್ಟಿ ರಿಯಲ್ ಹೀರೋ ಆಗಿದ್ದಾರೆ.
ಘಟನೆ ವೇಳೆ ಸುತ್ತ ಮುತ್ತ 20 ಕ್ಕೂ ಹೆಚ್ಚು ಜನರಿದ್ದರೂ ಯಾರೂ ಸಹಾಯಕ್ಕೆ ಬಾರದ ಸಂದರ್ಭದಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದೆ ಆ ಜೀವಿಗಳನ್ನು ಹಿಂದೂ ಮುಂದೂ ನೋಡಿದೆ ತನ್ನ ವಾಹನದಲ್ಲಿ ಕರೆದುಕೊಂಡು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ತುಳು ಹೀರೋ ಶೋಧನ್ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಪಘಾತ ಆದಾಗ ನಿಂತ ಫೋಟೋ ತೆಗೆಯದೆ , ಕೇವಲ ಅಯ್ಯೋ ಎನ್ನುತ್ತಾ ಸಮಯ ವ್ಯರ್ಥ ಮಾಡುವ ಬದಲು ಬದುಕಿಸುವ ಪ್ರಯತ್ನ ಮಾಡಿದ ರಿಯಲ್ ಹೀರೋ ಆಗಿದ್ದಾರೆ








