ಕಾರ್ಕಳ ಪ್ರಮುಖ ಸುದ್ದಿಗಳು
ಅರುಣೋದಯ ವಿಶೇಷ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ
– ಜೆಸಿಐ ಕಾರ್ಕಳ, ಬಂಡಿ ಮಠ ಫೌಂಡೇಶನ್ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಸಹಾಯ
– ಕಾರ್ಕಳ ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್ ವತಿಯಿಂದ 50 ಸಾವಿರ ದೇಣಿಗೆ
– ಮಾಳ ಪಂಚಾಯತ್ ವ್ಯಾಪ್ತಿಯ ಮಕ್ಕಳಿಗೆ ವಿವಿಧ ಸ್ಪರ್ಧೆ
– ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಜೆಸಿಐ ಕಾರ್ಕಳ ಮತ್ತು ಬಂಡಿ ಮಠ ಫೌಂಡೇಶನ್ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಕಾರ್ಕಳ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ 3 ಸಿಂಟೆಕ್ಸ್ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸೋಮಶೇಖರ್, ಜೆಸಿಐ ಕಾರ್ಕಳದ ಅಧ್ಯಕ್ಷ ಜೆಸಿ ಅವಿನಾಶ್ ಶೆಟ್ಟಿ, ಕಾರ್ಕಳ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಜೆ ಸಿ ಐ ವಲಯ 15ರ ಕಾರ್ಯಕ್ರಮ ವಿಭಾಗದ ನಿರ್ದೇಶಕರಾದ ವಿಘ್ನೇಶ್ ಪ್ರಸಾದ್, ಜೆ ಸಿ ಐ ಕಾರ್ಕಳದ ಉಪಾಧ್ಯಕ್ಷ ರಿಜ್ವಾನ್ ಖಾನ್, ಜೆ ಸಿ ಐ ಕಾರ್ಕಳ ಕಾರ್ಯದರ್ಶಿ ಸುಶಾಂತ್ ಶೆಟ್ಟಿ, ಜೆಸಿಐ ಕಾರ್ಕಳದ ಕೋಶಾಧಿಕಾರಿ ಮಂಜುನಾಥ್ ರಾವ್ ಪೂರ್ವಾಧ್ಯಕ್ಷ ರೋಷನ್ ಡಿ ಮಲ್ಲೋ ಹಾಗೂ ಅರುಣೋದಯ ವಿಶೇಷ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತಪ್ಪ, ಅರುಣೋದಯ ವಿಶೇಷ ಶಾಲೆ ಶಿಕ್ಷಕರಾದ ಗಿರೀಶ್ ಅಶ್ರೀತ್, ಕಾಂತಮ್ಮ, ಪ್ರತಿಮಾ ಹಾಗೂ ಸಿಬ್ಬಂದಿವರ್ಗ, ವಿಶೇಷ ಮಕ್ಕಳು ಉಪಸ್ಥಿತರಿದ್ದರು.
ಕಾರ್ಕಳ ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್ ವತಿಯಿಂದ 50 ಸಾವಿರ ದೇಣಿಗೆ
ಕಾರ್ಕಳ : ಕಾರ್ಕಳ ಸರಕಾರಿ ಆಸ್ಪತ್ರೆಯ ಮಕ್ಕಳ ವಾರ್ಡಿನ ಪೈಂಟಿಂಗ್, ಸುಂದರೀಕರಣ ಹಾಗೂ ಚಿತ್ರಗಳ ಬಿಡಿಸುವಿಕೆಗಾಗಿ 50 ಸಾವಿರ ರೂಪಾಯಿ ದೇಣಿಗೆಯನ್ನು ಸಂಘದ ಸದಸ್ಯ ಅಮೀರ್ ಹುಸೇನ್ ಅವರ ಸಹಕಾರದೊಂದಿಗೆ ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ನೀಡಲಾಯಿತು. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ತಾಲೂಕು ಅರೋಗ್ಯಧಿಕಾರಿ ಡಾ ಸಂದೀಪ್ ಕುಡ್ವರವರಿಗೆ 50 ಸಾವಿರ ರೂಪಾಯಿ ಚೆಕ್ಕನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯ ಕಿವಿ ಮತ್ತು ಗಂಟಲು ತಜ್ಞ ಡಾ ಅನಂತ್ ಕಾಮತ್, ಮಕ್ಕಳ ತಜ್ಞೆ ಸೌಜನ್ಯ, ಅರಿವಿಳಿಕೆ ತಜ್ಞ ಡಾ ತುಷಾರ್, ಎಲುಬು ಮತ್ತು ಕೀಲು ತಜ್ಞ ಡಾ ನಿತಿನ್ ಶೆಟ್ಟಿ, ಫಿಜಿಶಿಯನ್ ಡಾ ಚಂದ್ರಕಾಂತ್, ಪ್ರಸುತಿ ತಜ್ಞೆ ಡಾ ಜಾಸ್ಮಿನ್, ಜಮೀಯತುಲ್ ಫಲಹ್, ದ. ಕ. ಉಡುಪಿ ಜಿಲ್ಲಾ ಅಧ್ಯಕ್ಷ ಅಷ್ಪಾಕ್ ಅಹ್ಮದ್, ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ಕೋಶಾಧಿಕಾರಿ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಅಮೀರ್ ಹುಸೇನ್ ಇನ್ನಿತರ ಸದಸ್ಯರು ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಾಳ ಪಂಚಾಯತ್ ವ್ಯಾಪ್ತಿಯ ಮಕ್ಕಳಿಗೆ ವಿವಿಧ ಸ್ಪರ್ಧೆ
– ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮಾಳ ಗ್ರಾಮ ಪಂಚಾಯತ್ ಇಲ್ಲಿನ ಅರಿವು ಕೇಂದ್ರದ ವತಿಯಿಂದ ಪಂಚಾಯತ್ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿನ ಸಭಾಂಗಣದಲ್ಲಿ ಏರ್ಪಡಿಸಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ ಆಚಾರ್ಯ, ಶಾಲಾ ಸಂಚಾಲಕರಾದ ಸುಧಾಕರ ಡೋಂಗ್ರೆ, ಪಂಚಾಯತ್ ಉಪಾಧ್ಯಕ್ಷರಾದ ವಿಮಲ ಪೂಜಾರಿ, ಅರಿವು ಕೇಂದ್ರದ ಸಲಹಾ ಸಮಿತಿಯ ಸದಸ್ಯರು ಹಿರಿಯರಾದ ಶ್ರೀರಂಗ ಜೋಶಿ, ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆದಿದ್ದು ಪ್ರಾಥಮಿಕ ಶಾಲಾ ಮಕ್ಕಳು ಪ್ರೌಢಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ದೇಶಭಕ್ತಿ ಗೀತೆ ಭಕ್ತಿ ಗೀತೆ ಜನಪದ ಗೀತೆ ಮತ್ತು ಭಾವಗೀತೆ ಸ್ಪರ್ಧೆಯನ್ನು ನಡೆಸಲಾಗಿತ್ತು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಯಿಂದ ಸುಮಾರು 116 ವಿದ್ಯಾರ್ಥಿಗಳು ಭಾಗವಹಿಸಿದ್ದು ಸಾರ್ವಜನಿಕರ ವಿಭಾಗದಲ್ಲಿ ಸುಮಾರು 20 ಸ್ಪರ್ಧಿಗಳು ಭಾಗವಹಿಸಿದ್ದರು ಅರಿವು ಕೇಂದ್ರಕ್ಕೆ ನಿರಂತರವಾಗಿ ಭೇಟಿ ನೀಡಿ ಉತ್ತಮ ಓದುಗಾರರಾಗಿ ಕೆ ಎಸ್ ವೆಂಕಟೇಶ್ ಇವರನ್ನು ಈ ಸಂದರ್ಭ ಗೌರವಿಸಲಾಯಿತು.
ಬಹುಮಾನದ ವಿಜೇತರ ಪಟ್ಟಿಯನ್ನು ಪಂಚಾಯತ್ ಕಾರ್ಯದರ್ಶಿಯಾದ ಸವಿತ ಕುಮಾರಿ ವಾಚಿಸಿದರು ಮತ್ತು ವಸಂತಿ. ಪಂಚಾಯತಿನ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸುಧೀರ್ ಶೆಟ್ಟಿ ನಡೆಸಿ ಗ್ರಂಥ ಪಾಲಕಿ ಗೀತಾ ಸೇರಿಗಾರ್ ವಂದನಾರ್ಪಣೆಗೈದರು. ಸ್ಪರ್ದಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿವಿಧ ಹೂಗಳ ಗಿಡಗಳನ್ನು ಬಹುಮಾನ ರೂಪದಲ್ಲಿ ನೀಡಲಾಯಿತು.








