ಪ್ರೀತಿ ನಿರಾಕರಿಸಿದ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ,ಕೊಲೆ ಯತ್ನ
* ಸಂಬಂಧಿಕ ಭವಿತ್ನಿಂದ ಕೊಲೆಗೆ ಯತ್ನ,ಸ್ಥಳೀಯರಿಂದ ರಕ್ಷಣೆ
* ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಿಕ್ಷಕಿ ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್,ಆರೋಪಿ ಅರೆಸ್ಟ್
NAMMMUR EXPRESS NEWS
ಕೊಪ್ಪ/ಬಸ್ರೀಕಟ್ಟೆ: ಕೆಲಸ ಮುಗಿಸಿ ಹೋಗುತ್ತಿದ್ದ ಅತಿಥಿ ಶಿಕ್ಷಕಿ ಮೇಲೆ ಹತ್ತಿರದ ಸಂಬಂಧಿಕನೇ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಹೇಯ ಘಟನೆ ಕೊಪ್ಪ ತಾಲೂಕಿನ ಅತ್ತಿಕೊಡಿಗೆ ಗ್ರಾ ಪಂ ವ್ಯಾಪ್ತಿಯ ಬಸ್ರೀಕಟ್ಟೆಯಲ್ಲಿ ನಡೆದಿದೆ.
ಶಿಕ್ಷಕಿಯ ಹತ್ತಿರದ ಸಂಬಂಧಿಯಾದ ಭವಿತ್ ಅಲಿಯಾಸ್ ರಮೇಶ್ (30) ಎಂಬುವನು 25 ವರ್ಷದ ಶಿಕ್ಷಕಿಯನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದು, ಕೊಲೆಗೆ ಯತ್ನಿಸಿದಾಗ ಶಿಕ್ಷಕಿ ಜೋರಾಗಿ ಕಿರುಚಿಕೊಂಡಿದ್ದು,ಈ ಸಂದರ್ಭ ಸ್ಥಳೀಯರು ಬಂದು ಶಿಕ್ಷಕಿಯನ್ನು ರಕ್ಷಿಸಿದ್ದಾರೆ. ಹಲ್ಲೆಗೆ ಪ್ರೀತಿ ನಿರಾಕರಣೆ ಕಾರಣ ಎಂಬುದು ತಿಳಿದು ಬಂದಿದ್ದು,ಕಳೆದ ಎರಡು ತಿಂಗಳಿಂದ ಭವಿತ್ ಫೋನ್ ನಂಬರ್ನ್ನು ಶಿಕ್ಷಕಿ ಬ್ಲಾಕ್ ಮಾಡಿದ್ದರು ಎನ್ನಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರ ಪರಿಣಾಮ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಿಕ್ಷಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಶಿಕ್ಷಕಿಯ ಸಂಬಂಧಿ ಭವಿತ್ ಎಂದು ತಿಳಿದು ಬಂದಿದ್ದು,ಹಲ್ಲೆ ನಡೆಸಿ ಪರಾರಿಯಾಗಿದ್ದ. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಆರೋಪಿಯನ್ನು ಬಾಳೂರು ಸಮೀಪದ ಚಂದುವಳ್ಳಿ ಗ್ರಾಮದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಜಯಪುರ ಪೊಲೀಸರು,ಕೊಪ್ಪ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆರೋಪಿ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಲಾಗಿತ್ತು. ಆರೋಪಿಯನ್ನು ಕೂಡಲೇ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದರು, ಶಿಕ್ಷಕಿ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.







