ಅನ್ನದಾತ.. ಉದ್ಯೋಗದಾತ ಕೊಪ್ಪದ ಸುಧಾಕರ್ ಶೆಟ್ಟಿ!
– ನೂರಾರು ಯುವತಿಯರಿಗೆ ಬೆಂಗಳೂರಲ್ಲಿ ಉದ್ಯೋಗ
– ಚುನಾವಣೆಯಲ್ಲಿ ಸೋತರೂ ಜನರ ಪ್ರೀತಿ ಗೆದ್ದ ಶೆಟ್ಟರು!
NAMMUR EXPRESS NEWS
ಕೊಪ್ಪ: ಅಮ್ಮ ಫೌಂಡೇಶನ್ ತುಮಖಾನೆ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ಉದ್ಯೋಗ ಮೇಳವನ್ನು ಆಯೋಜಿಸಿದ್ದು. ಇದರ ಫಲವಾಗಿ ಶೃಂಗೇರಿ ಕ್ಷೇತ್ರದ ನೂರಾರು ಮಂದಿ ಯುವತಿಯರು ಬೆಂಗಳೂರಿನ ಟಾಟಾ ಕಂಪನಿಯಲ್ಲಿ ಉದ್ಯೋಗವನ್ನು ಪಡೆದು ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರಿನ ಟಾಟಾ ಎಲೆಕ್ಟ್ರಾನಿಕ್ಗೆ ಕಳುಹಿಸುವ ಕಾರ್ಯ ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.
ಅಭ್ಯರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶ್ರೀ ಸುಧಾಕರ್ ಶೆಟ್ಟಿ ಅವರು ಅಭ್ಯರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಅವರ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸಿದರು.
ವಿದ್ಯಾವಂತ ಮಹಿಳೆಯರನ್ನು ಅಮ್ಮ ಫೌಂಡೇಶನ್ ವತಿಯಿಂದ ಸುಧಾಕರ್ ಶೆಟ್ಟಿ ಅವರು ಸ್ವಂತ ಖರ್ಚಿನಿಂದ ಬೆಂಗಳೂರಿಗೆ ಬಸ್ಸು ಹಾಗೂ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯೊಂದಿಗೆ ಅಭ್ಯರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿಸುವ ಕೆಲಸವನ್ನು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ದಿವಾಕರ್ ಭಟ್ ರವರು ಮಾತನಾಡುತ್ತ, ಸುಧಾಕರ್ ಶೆಟ್ಟಿ ಅವರ ಸೇವೆ ಕ್ಷೇತ್ರಕ್ಕೆ ಅಪಾರ. ಅಮ್ಮ ಫೌಂಡೇಶನ್ ರಾಜಕೀಯದಿಂದ ದೂರವಿದ್ದು, ಕರುಣಾಮಯ ಸೇವೆಯಲ್ಲಿ ತೊಡಗಿದೆ ಎಂದು ಪ್ರಶಂಶಿಸಿದರು. ವಿಶೇಷವಾಗಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಅಮ್ಮ ಫೌಂಡೇಶನ್ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದರು.
ಶೃಂಗೇರಿ ಕ್ಷೇತ್ರದಲ್ಲಿ ನಿರುದ್ಯೋಗದ ಸವಾಲು: ವಿನಯ್ ಕಣಿವೆ
ಎನ್ಆರ್ ಪುರ ರೋಟರಿ ಕ್ಲಬ್ ಅಧ್ಯಕ್ಷ ವಿನಯ್ ಕಣಿವೆಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ, ಶೃಂಗೇರಿ ಕ್ಷೇತ್ರದಲ್ಲಿ ಯುವಕರು, ವಿಶೇಷವಾಗಿ ಪದವೀಧರರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ ಶೃಂಗೇರಿ ಕ್ಷೇತ್ರದಲ್ಲಿ ಸುಮಾರು 2000 ಮಂದಿ ಪದವಿ ಅಥವಾ ಉನ್ನತ ಪದವಿ ಪಡೆದರು ಅವರಲ್ಲಿ ಕೇವಲ 200 ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಉಳಿದವರು ನಿರುದ್ಯೋಗಿಗಳಾಗುತ್ತಿದ್ದಾರೆ, ಸರ್ಕಾರ ಈ ಕುರಿತು ಚಿಂತಿಸಬೇಕು. ಈ ನಿಟ್ಟಿನಲ್ಲಿ ಸುಧಾಕರ್ ಶೆಟ್ಟಿ ಅನ್ನದಾತ ಉದ್ಯೋಗದಾತರಾಗಿದ್ದಾರೆ ಎಂದರು. ವಾಸಪ್ಪ ಕುಂಚೂರು ವಂದನಾರ್ಪಣೆ ಸಲ್ಲಿಸಿದರು. ವೇದಿಕೆಯಲ್ಲಿ ಸುಧಾಕರ್ ಶೆಟ್ಟಿ ಯವರು, ಶಿವದಾಸ್, ಸುಧಾ ಪೈ, ಗುರುಪ್ರಸಾದ್, ಪವಿತ್ರ ಕಾಡಪ್ಪ ಮತ್ತು ಪುಷ್ಪಲತಾ ಜನಾರ್ಧನ್ ಉಪಸ್ಥಿತರಿದ್ದರು. ಉದ್ಯೋಗ ಪಡೆದವರು ಸುಧಾಕರ್ ಶೆಟ್ಟಿ ಅವರಿಗೆ ಧನ್ಯವಾದ ಅರ್ಪಿಸಿದರು.
ಚುನಾವಣೆಯಲ್ಲಿ ಸೋತರೂ ಜನರ ಪ್ರೀತಿ ಗೆದ್ದ ಶೆಟ್ಟರು!
ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸೋತರೂ ಸುಧಾಕರ್ ಶೆಟ್ಟಿ ಅವರು ನಿರಂತರವಾಗಿ ಉದ್ಯೋಗ ಮೇಳ, ಅರೋಗ್ಯ ಮೇಳ, ಸ್ವಾವಲಂಬನೆ, ಪ್ರತಿಭಟನೆ, ಸಾಂತ್ವನ ಮೂಲಕ ಕ್ಷೇತ್ರದ ಜನರ ಮನ ಗೆಲ್ಲುತ್ತಿದ್ದಾರೆ.








