ಕೊಪ್ಪದಲ್ಲಿ ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳ
* ಅ. 28ರಂದು ಕೊಪ್ಪದಲ್ಲಿ ಅಮ್ಮ ಫೌಂಡೇಶನ್ ಮತ್ತು ಟಾಟಾ ಕಮ್ಯುನಿಕೇಶನ್ ಸಹಯೋಗದಲ್ಲಿ ಆಯೋಜನೆ
* ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳ
NAMMMUR EXPRESS NEWS
ಕೊಪ್ಪ: ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಅಮ್ಮಾ ಫೌಂಡೇಷನ್ ವತಿಯಿಂದ ಕೊಪ್ಪದ ಬಂಟರ ಭವನದಲ್ಲಿ ಯುವತಿಯರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಅಮ್ಮ ಫೌಂಡೇಷನ್ನ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ. ಅ.28 ರ ಮಂಗಳವಾರದಂದು ಅಮ್ಮಾ ಫೌಂಡೇಷನ್ ಹಾಗೂ ಟಾಟಾ ಕಮ್ಯುನಿಕೇಶನ್ ಇವರ ಸಹಯೋಗದಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ 18 ರಿಂದ 34 ವರ್ಷದೊಳಗಿನ SSLC / PUC / ಡಿಪ್ಲೋಮಾ / ITI / ಯಾವುದೇ ಪದವಿ ಪಾಸ್ ಅಥವಾ ಫೇಲ್ ಆದ ಯುವತಿಯರು ಪಾಲ್ಗೊಳ್ಳಬಹುದಾಗಿದೆ.
ಟಾಟಾ ಕಮ್ಯುನಿಕೇಶನ್ ರಾಜ್ಯದಾದ್ಯಂತ ಸುಮಾರು 20,000 ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸುತ್ತಿದ್ದು, ಒಂದು ವರ್ಷ ತರಬೇತಿ ಕೂಡ ನೀಡಲಾಗುತ್ತದೆ. ಮಾಸಿಕ ವೇತನ 19,000/- ರೂ. ಇರಲಿದ್ದು, ಉಚಿತ ಹಾಸ್ಟೆಲ್ ಹಾಗು ಮೂರು ಹೊತ್ತಿನ ಊಟ ಮತ್ತು ತಿಂಡಿ ಉಚಿತವಾಗಿರಲಿದೆ.
ಶೃಂಗೇರಿ ಕ್ಷೇತ್ರದ ಶೃಂಗೇರಿ,ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು ಪ್ರದೇಶದ ಸುಮಾರು 1000 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉದ್ಯೋಗಾವಕಾಶ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಈ ಮಾಹಿತಿಯನ್ನು ಅರ್ಹ ಮಹಿಳೆಯರಿಗೆ ತಲುಪಿಸಿ, ಅವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಅಮ್ಮ ಫೌಂಡೇಷನ್ನ ಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.








