ರಾಜ್ಯಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ
* ರಸ್ತೆ ಗುಂಡಿ ಸಮಸ್ಯೆ,ಹಕ್ಕುಪತ್ರ ವಿಳಂಬ,ರೈತರ ವಿರುದ್ಧ ಎಸ್ಐಟಿ ರಚನೆ ವಿರೋಧಿಸಿ ಆಕ್ರೋಶ
* ರಸ್ತೆ ಗುಂಡಿ ಮುಚ್ಚಿದ ಜೆಡಿಎಸ್ ಕಾರ್ಯಕರ್ತರು, ರಸ್ತೆ ಸರಿಪಡಿಸುವಂತೆ ಆಗ್ರಹ
NAMMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರದಾದ್ಯಂತ ತಲೆದೂರಿರುವ ರಸ್ತೆ ಗುಂಡಿ ಸಮಸ್ಯೆ ಮತ್ತು ಕ್ಷೇತ್ರದ ಅಭಿವೃದ್ಧಿ ಕುಂಠಿತವನ್ನು ವಿರೋಧಿಸಿ ಜೆಡಿಎಸ್ನಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ನೇತೃತ್ವದಲ್ಲಿ ಆಯೋಜನೆಗೊಂಡ ಪ್ರತಿಭಟನೆಯು ಕೊಪ್ಪದ ಕುವೆಂಪು ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಕೊಪ್ಪ ಮುಖ್ಯ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ಜೆಡಿಎಸ್ ಹಿರಿಯ ನಾಯಕರೂ, ಕಾರ್ಯಕರ್ತರೂ, ಭಾಗವಹಿಸಿದರು.
ರಸ್ತೆ ಗುಂಡಿಗಳನ್ನು ಸ್ವತಃ ತಾವೇ ಮುಚ್ಚುವ ಮೂಲಕ ಜೆಡಿಎಸ್ ಕಾರ್ಯಕರ್ತರು ಸ್ಥಳೀಯ ಶಾಸಕರು ಹಾಗು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕ್ಷೇತ್ರದ ಅಭಿವೃದ್ಧಿಯಲ್ಲಿ ಸರ್ಕಾರ ಹಾಗೂ ಶಾಸಕರ ಅಸಮರ್ಥತೆಯನ್ನು ವಿರೋಧಿಸಿ ಸ್ಥಳೀಯರು ಮತ್ತು ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಡವರಿಗೆ ಸಾಗುವಳಿ ಚೀಟಿಗಳನ್ನು ನೀಡದಿರುವುದು ಹಾಗೂ ರೈತರ ಒತ್ತುವರಿ ತೆರವಿಗಾಗಿ SIT ರಚಿಸಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
* ಸರ್ಕಾರದ ನಿರ್ಲಕ್ಷ್ಯಕ್ಕಿದು ಎಚ್ಚರಿಕೆಯ ಗಂಟೆ – ಸುಧಾಕರ್ ಎಸ್ ಶೆಟ್ಟಿ
ಈ ಸಮಯದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಮಾತನಾಡುತ್ತಾ , ಕ್ಷೇತ್ರದ ತಂಬಾ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು,ಇದರಿಂದ ಸಾರ್ವಜನಿಕರಿಗೆ ತುಂಬಾ ಕಷ್ಟವಾಗಿದೆ,ರಸ್ತೆಯ ಸ್ಥಿತಿ ಕಳಪೆಯಾಗಿದೆ, ಅಭಿವೃದ್ಧಿಯಲ್ಲಿ ಶಾಸಕರು ವಿಫಲರಾಗಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ” ಎಂದು ಹೇಳಿದರು.
ಒಂದೂವರೆ ಕಿಲೋಮೀಟರ್ ಉದ್ದದ ರಸ್ತೆಯ ಗುಂಡಿಗಳನ್ನು ಮುಚ್ಚುವ ಈ ಜನಪರ ಕಾರ್ಯವು ಸರ್ಕಾರದ ನಿರ್ಲಕ್ಷ್ಯಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಗಿದೆ ಎಂದು ಹೇಳಿದರು.








