ಕೊಪ್ಪ ಜೆಡಿಎಸ್ ಪಕ್ಷಕ್ಕೆ ನೂತನ ಸಾರಥಿಗಳು!
– ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ
– ಕೊಪ್ಪ ತಾಲೂಕಲ್ಲಿ ಜೆಡಿಎಸ್ ಬಲಪಡಿಸಲು ಮುಖಂಡರ ಪ್ಲಾನ್
NAMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರ ಜೆಡಿಎಸ್ ಪಕ್ಷದ ಕೊಪ್ಪ ಬಾಳಗಡಿಯ ಜೆಡಿಎಸ್ ಕಚೇರಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ ಎನ್ ರಾಮಸ್ವಾಮಿ ಕಗ್ಗ ಅಧ್ಯಕ್ಷತೆಯಲ್ಲಿ ಸರ್ವಾನುಮತದಿಂದ ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜೆಡಿಎಸ್ ಕೊಪ್ಪ ತಾಲೂಕು ಉಪಾಧ್ಯಕ್ಷರಾಗಿ ವಾಸಪ್ಪ ಕುಂಚೂರು, ಕೊಪ್ಪ ತಾಲೂಕು ಕಸಬಾ ಹೋಬಳಿಯ ಅಧ್ಯಕ್ಷರಾಗಿ ಪೂರ್ಣೇಶ್ ಕೂಸುಗೊಳ್ಳಿ, ಕಸಬಾ ಹೋಬಳಿಯ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಬಚ್ಚಣಿಕೆ, ಕೊಪ್ಪ ನಗರ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ್ ಕೊಪ್ಪ ರವರನ್ನು ಆಯ್ಕೆಮಾಡಲಾಯಿತು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಶೃಂಗೇರಿ ಕ್ಷೇತ್ರಧ್ಯಕ್ಷರಾದ ದಿವಾಕರ್ ಭಟ್ ಸೇರಿದಂತೆ ಜೆಡಿಎಸ್ ಮುಖಂಡರುಗಳು ಹಾಗೂ ತಾಲ್ಲೂಕು ಸಮಿತಿಯ ಸದಸ್ಯರುಗಳು ಹಾಜರಿದ್ದರು.








