ಗೂಂಡಾಗಿರಿ ಬಿಡಿ- ಅಭಿವೃದ್ಧಿ ಮಾಡಿ, ಬಿಜೆಪಿಯಿಂದ ಪ್ರತಿಭಟನೆ
* ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ
* ಕಾಂಗ್ರೆಸ್ ದ್ವೇಷದ ರಾಜಕಾರಣ ವಿರುದ್ಧ ಜೀವರಾಜ್ ಬೇಸರ
NAMMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಶಾಸಕರು ಹಾಗೂ ನಾಯಕರ ದ್ವೇಷದ ರಾಜಕಾರಣ ಮತ್ತು ಕ್ಷೇತ್ರದ ಅಭಿವೃದ್ಧಿ ಕುಂಠಿತ ವಿರೋಧಿಸಿ ಬಿಜೆಪಿ ಕೊಪ್ಪದಲ್ಲಿ ಕ್ಷೇತ್ರ ಮಟ್ಟದ ಪ್ರತಿಭಟನೆ ನಡೆಸಿತು.
ಕೊಪ್ಪದ ಮುಖ್ಯ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ನಾಯಕರು ಶಾಸಕ ಟಿ ಡಿ ರಾಜೇಗೌಡ,ಸುಧೀರ್ ಕುಮಾರ್ ಮುರೊಳ್ಳಿ,ಸದಾಶಿವ ಎನ್ ಆರ್ ಪುರ,ಕುಕ್ಕುಡಿಗೆ ರವೀಂದ್ರ ಸೇರಿದಂತೆ ದ್ವೇಷದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರಸ್ನ ಶಾಸಕರು ಹಾಗು ಅವರ ಹಿಂಬಾಲಕರು ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು,ರಸ್ತೆಯಲ್ಲಿ ಗುಂಡಿಗಳು ತಾಂಡವವಾಡುತ್ತಿದೆ ಅದನ್ನು ಬಗೆಹರಿಸಿ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನಹರಿಸುವುದನ್ನು ಬಿಟ್ಟು ಬಿಜೆಪಿ ನಾಯಕರಾದ ಡಿ ಎನ್ ಜೀವರಾಜ್ರವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಾ,ವೈಯಕ್ತಿಕ ನಿಂದನೆಗಳನ್ನು ಸಾರ್ವಜನಿಕವಾಗಿ ಮಾಡುತ್ತಿದ್ದು,ಜೊತೆಗೆ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಬೆದರಿಕೆ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ,ಇದನ್ನು ಬಿಜೆಪಿ ಇನ್ನು ಸಹಿಸುವುದಿಲ್ಲ ಇದು ಹೀಗೆ ಮುಂದುವರೆದರೆ ತಕ್ಕ ಪ್ರತ್ಯುತ್ತರ ಕಾಂಗ್ರೆಸ್ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.ಶಾಸಕರ ಅಕ್ರಮ ಆಸ್ತಿಗಳಿಕೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರೆ ಅದಕ್ಕೆ ಉತ್ತರ ನೀಡುವುದು ಬಿಟ್ಟು ಸತ್ಯ ಮೇವ ಜಯತೆ ಎಂಬ ಹೆಸರಿನಲ್ಲಿ ಸಭೆ ಮಾಡಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ,ಕಾಂಗ್ರೆಸ್ ಇದೇ ಚಾಳಿ ಮುಂದುವರೆಸಿದಲ್ಲಿ ಅವರ ಮಾರ್ಗದಲ್ಲೇ ಅವರಿಗೆ ಉತ್ತರ ನೀಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಬಿಜೆಪಿ ಪ್ರಮುಖರಾದ ಅರುಣ್ ಕುಮಾರ್,ಬಹಾಬಲ ರಾವ್, ಎನ್ ಆರ್ ಪುರ ಬಿಜೆಪಿ ಅಧ್ಯಕ್ಷ ನೀಲೇಶ್,ಕೊಪ್ಪ ಬಿಜೆಪಿ ಅಧ್ಯಕ್ಷ ದಿನೇಶ್ ಹೊಸೂರು,ಶೃಂಗೇರಿ ಬಿಜೆಪಿ ಪ್ರಧಾನಕಾರ್ಯದರ್ಶಿ ಹೆಚ್ ಎಸ್ ವೇಣುಗೋಪಾಲ್,ನಾ ಮ ನಾಗೇಶ್,ಡಾ ಬಿ ಶಿವಶಂಕರ್,ಪುಣ್ಯಪಾಲ್,ಸಂತೋಷ್ ಅರೆನೂರು ಸೇರಿದಂತೆ ಪ್ರಮುಖರು ಮಾತನಾಡಿ ತಮ್ಮ ಆಕ್ರೋಶ ಹೊರಹಾಕಿದರು.
* ಗಾಂಧಿಮೈದಾನ ಅಂಗಡಿ ತೆರವು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದ್ರು
ಕಾಂಗ್ರೆಸ್ಸಿಗರ ದ್ವೇಷದ ರಾಜಕಾರಣ,ಓಲೈಕೆ ರಾಜಕಾರಣ ಎಷ್ಟರ ಮಟ್ಟಿಗಿದೆ ಎಂದರೆ ಶೃಂಗೇರಿ ಜಗದ್ಗುರುಗಳು ಚಿಕ್ಕಮಗಳೂರಿನ ದತ್ತ ಪೀಠಕ್ಕೆ ಆಗಮಿಸುತ್ತಾರೆ ಎಂದಾಗ ಭದ್ರತೆಯ ನೆಪವೊಡ್ಡಿ ಡಿ ಸಿ ಮೂಲಕ ಭದ್ರತೆ ಒದಗಿಸುವುದು ಕಷ್ಟವಾಗುತ್ತೆ ಎಂದು ಹೇಳಿಸಿ ಜಗದ್ಗುರುಗಳು ದತ್ತಪೀಠಕ್ಕೆ ಹೋಗದಂತೆ ತಡೆದರು,ಜಗದ್ಗುರುಗಳ ಆಶಯಕ್ಕೆ ಗೌರವ ನೀಡಲಿಲ್ಲ, ಶೃಂಗೇರಿಗೆ ಬಂದಾಗ ಅಧ್ಯಕ್ಷರೇ ಎಷ್ಟು ಅನುದಾನ ಬೇಕು ಕೇಳಿ ಕೊಡುತ್ತೇವೆ ಎಂದು ಹೇಳಿದವರು ಅನುದಾನಕ್ಕಾಗಿ ಮನವಿ ಸಲ್ಲಿಸಿದಾಗ ಅಷ್ಟೆಲ್ಲ ಕೊಡಲಾಗುವುದಿಲ್ಲ ಎಂದು ಹೇಳಿದ್ದರು ಎಂದು ಪ ಪಂ ಅಧ್ಯಕ್ಷ ಹಾಗೂ ಶೃಂಗೇರಿ ಬಿಜೆಪಿ ಪ್ರಧಾನಕಾರ್ಯದರ್ಶಿ ಹೆಚ್ ಎಸ್ ವೇಣುಗೋಪಾಲ್ ವಾಗ್ದಾಳಿ ನಡೆಸಿದರು.
ಶೃಂಗೇರಿ ಗಾಂಧೀಮೈದಾನದಲ್ಲಿ 35-40 ವರ್ಷಗಳಿಂದ ಅಂಗಡಿ ಹಾಕಿ ವ್ಯಾಪಾರ ನಡೆಸಿಕೊಂಡು ಬಂದಿರುವ ಬಡವರ ಹೊಟ್ಟೆ ಮೇಲೆ ಹೊಡೆದ್ರೂ, ಸಣ್ಣ ಮಕ್ಕಳು,ತಾಯಂದಿರು,ಬಡವರು ಎಂಬ ಮಾನವೀಯತೆಯೂ ಇಲ್ಲದೆ ಅಧಿಕಾರಿಗಳು,ಶಾಸಕರು ಅವರ ಮೇಲೆ ದರ್ಪ ತೋರಿ ನ್ಯಾಯಾಲಯದ ಆದೇಶದ ಪ್ರತಿ ಇಲ್ಲದೆಯೇ ಆದೇಶವಿದೆ ಏಂಬ ನೆಪ ಹೇಳಿ,ಹೊಳೆ ಕರಾಬು ಎಂಬ ನೆಪ ಹೇಳಿ ಅನ್ಯಾಯವಾಗಿ ಬಡವರಿಗೆ ದ್ರೋಹ ಮಾಡಿ, ಅಲ್ಲಿನ ಪಾರ್ಕಿಂಗ್ನಿಂದ ಪ ಪಂ ಬರುತ್ತಿದ್ದ ಸುಮಾರು 1 ಕೋಟಿ ಆದಾಯವನ್ನು ಕಸಿದುಕೊಂಡಿದ್ದಾರೆ. ಎಂದು ತೀವ್ರ ವಾಗ್ದಾಳಿ ನಡೆಸಿದರು.
* ಕಾಂಗ್ರೆಸ್ ನಡೆಗೆ ಡಿ ಎನ್ ಜೀವರಾಜ್ ಬೇಸರ, ದಾಖಲೆ ಸಮೇತ ಪ್ರಶ್ನೆ
ಕ್ಷೇತ್ರದಾದ್ಯಂತ ಕಾಂಗ್ರೆಸ್ ದ್ವೇಷದ ರಾಜಕಾರಣ ನಡೆಸುತ್ತಿದೆ,ವೈಯಕ್ತಿಕ ಟೀಕೆಗಳು,ಕಾರ್ಯಕರ್ತರ ಮೇಲೆ ನಿರಂತರ ಬೆದರಿಕೆ ಹಾಕುತ್ತಿರುವುದು ತೀವ್ರ ಬೇಸರವನ್ನುಂಟುಮಾಡಿದೆ, ಇದುವರೆಗೂ ನನ್ನ ಅಧಿಕಾರಾವಧಿಯಲ್ಲಿ ಸದಾ ಕ್ಷೇತ್ರದ ಅಭಿವೃದ್ಧಿ,ಜನತೆಯ ಪರವಾಗಿ ನಿಂತು ಕೆಲಸ ಮಾಡಿದ್ದೇನೆ. ರಾಜೇಗೌಡರು ಶಾಸಕರಾದ ನಂತರವು ಶಾಸಕರ ಕೆಲಸಗಳಿಗೆ ಯಾವುದೇ ಅಡ್ಡಿ ಪಡಿಸದೇ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದೆ ಆದರೆ ಶಾಸಕರು ಕ್ಷೇತ್ರದ ಅಭಿವೃದ್ಧಿ ಮಾಡುವುದನ್ನು ಬಿಟ್ಟು ನನ್ನ ಮೇಲೆ ವೈಯಕ್ತಿಕ ವಾಗ್ದಾಳಿ ಮಾಡುತ್ತಿದ್ದಾರೆ. ಅಲ್ಲದೇ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಶಾಸಕರೂ ಸೇರಿದಂತೆ, ಅವರ ಹಿಂಬಾಲಕರು ಬೆದಕರಿಕೆಗಳನ್ನು ಹಾಕುತ್ತಿದ್ದು ಕೆಲವು ದಿನಗಳ ಹಿಂದೆ ಮನೋಜ್ ಗೌಡ ಎಂಬುವನಿಗೆ ಫೋಲ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿದೆ.ಆದರೆ ಇಂತಹ ಪ್ರವೃತ್ತಿಯನ್ನು ಇನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನನಗೇನಾದರೂ ತೊಂದರೆಯಿಲ್ಲ ನನ್ನ ಶಕ್ತಿ ಮೀರಿ ಕಾರ್ಯಕರ್ತರ ಜೊತೆ ನಿಲ್ಲುತ್ತೇನೆ ಎಂದು ಜೀವರಾಜ್ ಹೇಳಿದರು. ನನ್ನ ಇಷ್ಟು ವರ್ಷದ ರಾಜಕೀಯ ಜೀವನದ ಈ ಅವಧಿಯಲ್ಲಿ ಕಾಂಗ್ರೆಸ್ನ ಇಂತಹ ದ್ವೇಷದ ರಾಜಕಾರಣ ನನಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.








