ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದಲೇ ವೆಬ್ಸೈಟ್!
– ಡಿಜಿಟಲ್ ಜ್ಞಾನ ಮೂಡಿಸುತ್ತಿರುವ ವರ್ಡ್ಪ್ರೆಸ್ ಕ್ಯಾಂಪಸ್ ಕನೆಕ್ಟ್ ಕಾರ್ಯಾಗಾರ
– ಡಿಜಿಟಲ್ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ನೈಜ ಅನುಭವದ ಉದ್ದೇಶ
NAMMUR EXPRESS NEWS
ಕುಂದಾಪುರ : ಡಿಜಿಟಲ್ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ನೈಜ ಅನುಭವ ನೀಡುವ ಉದ್ದೇಶದಿಂದ ನಡೆದ ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್ ಉಡುಪಿ ಕಾರ್ಯಾಗಾರವು ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜು, ಕುಂದಾಪುರದಲ್ಲಿ ಯಶಸ್ವಿಯಾಗಿ ನೆರವೇರಿತು. 65 ವಿದ್ಯಾರ್ಥಿಗಳು ತಮ್ಮ ಮೊದಲ ವೆಬ್ ಸೈಟ್ಗಳನ್ನು ನಿರ್ಮಿಸಿದರು. ವಿದ್ಯಾರ್ಥಿಗಳು ವರ್ಡ್ ಪ್ರೆಸ್ ಡಾಟ್ ಕಾಮ್ ನೀಡಿದ ಉಚಿತ ಒಂದು ವರ್ಷದ ಯೋಜನೆಯ ನೆರವಿನಿಂದ ತಮ್ಮ ಆಲೋಚನೆಗಳನ್ನು ಆನ್ ಲೈನ್ನಲ್ಲಿ ನೈಜ ರೂಪಕ್ಕೆ ತಂದರು. ತರಗತಿಯಲ್ಲಿ ಕಲಿತ ವಿಷಯಗಳನ್ನು ನೈಜ ಪ್ರಯೋಗ ರೂಪದಲ್ಲಿ ಅನ್ವಯಿಸುವ ಅವಕಾಶ ನೀಡಿದ ಈ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿತು.
ಕಾರ್ಯಾಗಾರಕ್ಕೆ ಡಾ| ಬಿ.ಬಿ. ಹೆಗ್ಡೆ ಕಾಲೇಜು ಆತಿಥ್ಯ ವಹಿಸಿತು. ಪ್ರಾಚಾರ್ಯ ಡಾ| ಕೆ. ಉಮೇಶ್ ಶೆಟ್ಟಿ, ಉಪಪ್ರಾಚಾರ್ಯ ಡಾ। ಚೇತನ್ ಶೆಟ್ಟಿ ಕೆ., ಅಕಾಡೆಮಿಕ್ ಡೀನ್ ಹಾಗೂ ಕಾರ್ಯಕ್ರಮ ಸಂಯೋಜಕ ಗಿರಿರಾಜ ಭಟ್, ಕಂಪ್ಯೂಟರ್ಸೈನ್ಸ್ ವಿಭಾಗದ ಮುಖ್ಯಸ್ಥ ಮಹೇಶ್ ಕುಮಾರ್ ಉಪಸ್ಥಿತರಿದ್ದರು. ಸಮುದಾಯದ ವರ್ಡ್ ಪ್ರೆಸ್ ಉಡುಪಿ ಆಯೋಜನೆ ವರ್ಡ್ ಪ್ರೆಸ್ ಕಾರ್ಯಾಗಾರವನ್ನು ಉಡುಪಿ ಸಮುದಾಯದ ಸದಸ್ಯರು ಆಯೋಜಿಸಿದರು. ಆಯೋಜಕರಾಗಿ ಸಬ್ವೆಬ್ ಉಡುಪಿ ಸಂಸ್ಥಾಪಕ ಶಶಿಕಾಂತ್ ಶೆಟ್ಟಿ ಕ್ವಾಲಿಟಿ ಕಿಯಾಸ್ಟ್ ಮುಂಬಯಿಯ ಹಿರಿಯ ಟೆಸ್ಟರ್ಕೆ. ಕೀರ್ತಿ ಪ್ರಭು, ಫೋರ್ಥಫೋಕಸ್ ಕುಂದಾಪುರ ಸಂಸ್ಥಾಪಕ ಗೌತಮ್ ನಾವಡ, ಕಾರ್ಯಾಗಾರ ನಿರ್ವಾಹಕರಾಗಿ ಯುಕ್ತ ಡಿಜಿಟಲ್ ತೀರ್ಥಹಳ್ಳಿಯ ಸಂಸ್ಥಾಪಕ ಮಂಜುನಾಥ್ ಎಂ.ಎಂ., ಕೋಟಿಸಾಫ್ಟ್ ಸೊಲ್ಯೂಶನ್ ಕೋಟೇಶ್ವರದ ಮುಖ್ಯ ಕಾರ್ಯನಿರ್ವಾಹಕ ಓಂಕಾರ ಉಡುಪ, ಫೋರ್ಥ್ ಫೋಕಸ್ ಕುಂದಾಪುರದ ಕಾರ್ಯ ನಿರ್ವಹಣಾ ನಿರ್ವಾಹಕಿ ಚಂದನಾ ಜಿ.ಎಂ. ಭಾಗವಹಿಸಿದ್ದರು.








