ಕೋಣಂದೂರಲ್ಲಿಂದು ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ!
– ಸಾವಿರಾರು ಯಕ್ಷಪ್ರಿಯರ ಆಗಮನ ನಿರೀಕ್ಷೆ: ಸರ್ವ ಸಿದ್ಧತೆ
– ಸರ್ವರನ್ನು ಸ್ವಾಗತಿಸಿದ ಆಯೋಜಕ ಸಮಿತಿ
NAMMUR EXPRESS NEWS
ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಾಂಸ್ಕೃತಿಕ ಸಮಿತಿ ವತಿಯಿಂದ ಖ್ಯಾತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ದಿನಾಂಕ ಕೋಣಂದೂರಲ್ಲಿ ಇಂದು ಸಂಜೆ 6ರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ನಡೆಯಲಿದೆ.
ಕೊಡಚಾದ್ರಿ ಟ್ರಸ್ಟ್ ಸ್ಥಾಪಕರು, ತೀರ್ಥಹಳ್ಳಿ ನಾಯಕರು ಆದ ಡಾ. ಆರ್.ಎಂ. ಮಂಜುನಾಥ ಗೌಡ ಸರ್ವರನ್ನು ಸ್ವಾಗತಿಸಿದ್ದಾರೆ.
ಯಕ್ಷಗಾನ 6 ಗಂಟೆಯಿಂದ 11 ಗಂಟೆವರೆಗೆ ನಡೆಯಲಿದೆ. 5 ಗಂಟೆ ಕಾಲ ಮಿತಿ ಯಲ್ಲಿ ಯಕ್ಷಗಾನ ನಡೆಯಲಿದ್ದು, ಈಗಾಗಲೇ ಜನರ ಆಗಮನ ಶುರುವಾಗಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆ ಗಮನ ಸೆಳೆಯಲಿದೆ.
ಕೊಡಚಾದ್ರಿ ಸಾಂಸ್ಕೃತಿಕ ಸಮಿತಿ ಪ್ರಮುಖರಾದ ಮಧು ಸೂಧನ ನಾವುಡ ನೇತೃತ್ವದಲ್ಲಿ ಕೋಣಂದೂರಲ್ಲಿ ಯಕ್ಷಗಾನ ನಡೆಯಲಿದ್ದು, ವಿದ್ಯುತ್ ಅಲಂಕಾರ ಮಾಡಲಾಗಿದೆ.
ಹಿರಿಯ ಕಾಂಗ್ರೆಸ್ ನಾಯಕರಾದ ನಾರಾಯಣರಾವ್, ಶಿಮೂಲ್ ಅಧ್ಯಕ್ಷರಾದ ವಿದ್ಯಾಧರ ಗುರುಶಕ್ತಿ, ಮಧು ಸೂಧನ ನಾವುಡ, ಕಂಪದಗದ್ದೆ ಸುರೇಶ, ಕೊಲ್ಲೂರಯ್ಯ, ರಾಘವೇಂದ್ರ ಶೆಟ್ಟಿ ಸೇರಿ ಅನೇಕರು ಸ್ಥಳದಲ್ಲಿದ್ದು ಎಲ್ಲಾವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.
ಅದ್ದೂರಿ ರಂಗ ವೇದಿಕೆ: ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆ!
ಯಕ್ಷಗಾನದಲ್ಲಿ ಚಿನ್ನದ ಕಿರೀಟ ಧಾರಣೆಯೊಂದಿಗೆ, ಎಂಟು ಆಯುಧಗಳನ್ನು ಹಿಡಿದಿರುವ ಶ್ರೀದೇವಿಯ ಪ್ರವೇಶ, ಬೆಂಕಿಯ ಜ್ವಾಲೆಯೊಂದಿಗೆ, ಅಬ್ಬರಿಸುತ್ತಾ ಚಂಡ ಮುಂಡರ ಪ್ರವೇಶ, ಎಪ್ಪತ್ತು ಕೆಜಿ ತೂಕವುಳ್ಳ ಬೆಳ್ಳಿಯ ಉಯ್ಯಾಲೆಯಲ್ಲಿ ಶ್ರೀದೇವಿ ಆಸೀನಳಾಗಿ ತೂಗುವುದು, ರಕ್ತೇಶ್ವರಿ ಕೆನ್ನಾಲಿಗೆಯೊಂದಿಗೆ ರಾಕ್ಷಸರ ವಧೆ ಪ್ರಮುಖ ಆಕರ್ಷಣೆಯಾಗಿದೆ. ಈ ಅದ್ಧೂರಿ ಪ್ರದರ್ಶನವನ್ನು ಕಲಾಪ್ರಿಯರು ಕಣ್ತುಂಬಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಡಾ.ಆರ್.ಎಂ.ಮಂಜುನಾಥ ಗೌಡ ಅವರು ಹಾಗೂ ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸರ್ವ ಸದಸ್ಯರು ಸಾರ್ವಜನಿಕರಿಗೆ ಆದರದ ಸ್ವಾಗತವನ್ನು ಕೋರಿದ್ದಾರೆ. ಉಪಹಾರ ವ್ಯವಸ್ಥೆ ಇರುತ್ತದೆ. ಸಾವಿರಾರು ಜನ ಸೇರುವ ನಿರೀಕ್ಷೆ ಇದೆ.








