ಬಿ.ಶ್ರೀನಿವಾಸ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಮಹತ್ವದ ಹುದ್ದೆ
– ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿಗಳಾಗಿ, ಗುಜರಾತ್ ಉಸ್ತುವಾರಿಯಾಗಿ ಆಯ್ಕೆ
ಶಿವಮೊಗ್ಗ: ಇಂಡಿಯಾ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿಗಳಾಗಿ, ಗುಜರಾತ್ ಉಸ್ತುವಾರಿಯಾಗಿ ಮಾಜಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ. ಶ್ರೀನಿವಾಸ್ ಆಯ್ಕೆ ಆಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಕಾಣಿಕೆ ನೀಡಿದ್ದಾರೆ. ಇದೀಗ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹೊಸ ಜವಾಬ್ದಾರಿ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಶ್ರೀನಿವಾಸ್ ರಾಹುಲ್ ಗಾಂಧಿ ಆಪ್ತರಲ್ಲಿ ಒಬ್ಬರು. ಶ್ರೀನಿವಾಸ್ ಅವರಿಗೆ ಅವರ ಆತ್ಮೀಯರು, ಸ್ನೇಹಿತರು ಶುಭಾಶಯ ಕೋರಿದ್ದಾರೆ.
ಹುಂಚದಕಟ್ಟೆ ಆದರ್ಶ್ ಅಭಿನಂದನೆ
ಶಿವಮೊಗ್ಗ ಜಿಲ್ಲೆ ಯುವ ಕಾಂಗ್ರೆಸ್ ನಾಯಕರು, ರಾಷ್ಟ್ರೀಯ ಕಾಂಗ್ರೆಸ್ ವಕ್ತಾರರು ಅದ ಹುಂಚದಕಟ್ಟೆ ಆದರ್ಶ್ ಅವರು ಶುಭಾಶಯಗಳು ಸಲ್ಲಿಸಿದ್ದಾರೆ.








