ಟಾಪ್ 4 ನ್ಯೂಸ್ ಮಲೆನಾಡು: ಎಲ್ಲೆಲ್ಲಿ ಏನೇನ್ ಆಯ್ತು?
ತೀರ್ಥಹಳ್ಳಿ: ಕಾಳಿಂಗ ಸರ್ಪ ಸಂಶೋಧನೆ ವಿರುದ್ಧ ಡಿಸಿಗೆ ದೂರು!
ಮೂಡಿಗೆರೆ: ಗಾಂಜಾ ಗಿಡ ಬೆಳೆದವರು ಅರೆಸ್ಟ್!
ಹೊಸನಗರ: ಹೊಂಡಕ್ಕೆ ಬಿದ್ದು ಯುವಕ ಸಾವು!: ಅನುಮಾನ!
ತೀರ್ಥಹಳ್ಳಿ: ಕುರುವಳ್ಳಿ ಬಂಡೆ ಸ್ಫೋಟ: ಮನೆಗಳಿಗೆ ಹಾನಿ!
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆಗುಂಬೆ ಕಾಳಿಂಗ ಸರ್ಪ ಸಂಶೋಧನೆ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭೇಟಿ ಮಾಡಿ ಪರಿಸರಾಸಕ್ತರು ದೂರು ನೀಡಿದ್ದಾರೆ. ನಂತರ ತೀರ್ಥಹಳ್ಳಿ ACF ಮಧುಸೂದನ್ ಅವರನ್ನೂ ಭೇಟಿ ಮಾಡಿ ದಾಖಲೆ ಹಸ್ತಾಂತರ ಮಾಡಿದ್ದಾರೆ. ಹಿರಿಯ ಪತ್ರಕರ್ತ ಲೇಖಕ ಶಶಿಸಂಪಳ್ಳಿ, ಪರ್ವ ಮಲ್ನಾಡ್, ಮೋಹಿತ್ ಇದ್ದರು. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತನಿಖೆಗೆ ಕೂಡ ಆದೇಶ ಮಾಡಿದ್ದಾರೆ.
ಮೂಡಿಗೆರೆ ಗಾಂಜಾ ಗಿಡ ಬೆಳೆದವರು ಅರೆಸ್ಟ್!
ಮೂಡಿಗೆರೆ: ಡ್ರಗ್ಸ್ ವಿರುದ್ಧ ಸಮರ ಮುಂದುವರೆಸುತ್ತಿರುವ ಮೂಡಿಗೆರೆ ಪೊಲೀಸರು ಮತ್ತೊಂದು ಪ್ರಕರಣ ಬೇಧಿಸಿದ್ದಾರೆ. ಮೂಡಿಗೆರೆ ತಾಲ್ಲೂಕ್ ಬಿಳುಗುಳ ಗ್ರಾಮದ ಶಿವಾಜಿನಗರದಲ್ಲಿ ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಓರ್ವ ವ್ಯಕ್ತಿಯನ್ನು ನ. 17ರಂದು ಪಿಎಸ್ಐ ಮೂಡಿಗೆರೆ ಪೊಲೀಸ್ ಠಾಣೆ ಮತ್ತು ತಂಡ ವಶಕ್ಕೆ ಪಡೆದು, 5 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಗಾಂಜಾ ಪ್ರಕರಣ ಹೆಚ್ಚುತ್ತಿದೆ.
ಅಡಿಕೆ ತೋಟದ ಹೊಂಡಕ್ಕೆ ಬಿದ್ದು ಯುವಕ ಸಾವು!: ಅನುಮಾನ!
ಹೊಸನಗರ: ಹೊಸನಗರ ತಾಲೂಕು ಗವಟೂರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಅಡಿಕೆ ತೋಟದಲ್ಲಿ ಯುವಕನೊಬ್ಬ ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಪಟ್ಟಣದ ದೊಡ್ಡಿನಕೊಪ್ಪ ನಿವಾಸಿ ಮಂಜುನಾಥ್ (37) ಮೃತಪಟ್ಟ ವ್ಯಕ್ತಿ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗುತಿದ್ದು ತೋಟದ ಕಂದು ದಾಟುವಾಗ ಕೆಳಗೆ ಬಿದ್ದು ಗಾಯಗೊಂಡಿದ್ದ ಎನ್ನಲಾಗುತಿದ್ದು , ಯುವಕನನ್ನು ತೋಟದ ಮಾಲೀಕರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ ಅಷ್ಟರಲ್ಲಾಗಲೇ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ. ಮಂಜುನಾಥ್ ಅಡಿಕೆ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ ಕರೆ ಮಾಡಿ ಇನ್ನೂ ಸ್ವಲ ಅಡಿಕೆ ಕೊನೆ ಇದೆ ಮುಗಿಸಿ ಬರುತ್ತೇನೆ ಎಂದು ಹೇಳಿದ್ದನು ಆದರೆ 3.45 ರ ಹೊತ್ತಿಗೆ ಅವರೇ ಆಸ್ಪತ್ರೆಗೆ ಕರೆತಂದಿದ್ದಾರೆ ಆದರೆ ನಮ್ಮ ಬಳಿ ಇಂದು ಆತ ಕೆಲಸ ಮಾಡಲು ಬರಲಿಲ್ಲ ಎಂದು ಸುಳ್ಳು ಹೇಳುತಿದ್ದಾರೆ ಹಾಗೂ ಆತನ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡದೇ ಆಸ್ಪತ್ರೆಯಲ್ಲಿ ಶವ ಇರಿಸಿ ಹೋಗಿದ್ದಾರೆ ಆದ್ದರಿಂದ ಈ ಘಟನೆ ಬಗ್ಗೆ ನಮಗೆ ಅನುಮಾನವಿದೆ ಪೊಲೀಸರು ಸೂಕ್ತ ತನಿಖೆ ಮಾಡಲಿ ಎಂದು ಆರೋಪಿಸಿದ್ದಾರೆ.
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ತೆರಳಿದ ಪಿಎಸೈ ರಾಜು ರೆಡ್ಡಿ ಹಾಗೂ ಸಿಬ್ಬಂದಿಗಳು ತೋಟದ ಮಾಲೀಕರನ್ನು ವಿಚಾರಿಸಿದ್ದಾರೆ ಈ ಸಂಧರ್ಭದಲ್ಲಿ ಸ್ಥಳದಲ್ಲಿ ಗೊಂದಲವುಂಟಾಗಿ ಕುಟುಂಬಸ್ಥರು ಹಾಗೂ ತೋಟದ ಮಾಲೀಕರ ನಡುವೆ ಮಾತಿನ ಚಕಮಕಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಪ್ರಾರಂಭಿಸಿದ್ದಾರೆ.
ಕುರುವಳ್ಳಿ ಬಂಡೆ ಸ್ಫೋಟ: ಮನೆಗಳಿಗೆ ಹಾನಿ!
ತೀರ್ಥಹಳ್ಳಿ ತಾಲೂಕು ಕುರುವಳ್ಳಿ ಬಂಡೆ ಇದೀಗ ವಿವಾದದ ಸ್ಥಳವಾಗಿದೆ. ನ.18ರ ಸಂಜೆ ಅನಧಿಕೃತ ಬಂಡೆಯಲ್ಲಿ ನಾಡ ಬಾಂಬ್ ಸ್ಪೋಟಿಸಿ ಕುಂಬಾರದಡಿಗೆ ಬಂಗಾರಮ್ಮ ಎಂಬುವರ ಮನೆ ಮೇಲೆ ದೊಡ್ಡ ಬಂಡೆಯ ಗಾತ್ರ ಮನೆ ಮೇಲೆ ಬಿದ್ದಿದ್ದು ತೀವ್ರ ಹಾನಿಗೊಳಗಾಗಿದ್ದಾರೆ ಎಂದು ಕುರುವಳ್ಳಿಯ ಕುಂಬಾರದಡಿಗೆ ಗ್ರಾಮಸ್ತರು ಹೇಳಿದ್ದಾರೆ. ಕುಂಬಾರದಡಿಗೆ ಇತರ ವಾಸಿಗಳಿಗೂ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.







