ಕುಸ್ತಿ: ರಾಜ್ಯ ಮಟ್ಟಕ್ಕೆ ಆಯ್ಕೆ ಆದ ಜನತಾ ಕಾಲೇಜು ವಿದ್ಯಾರ್ಥಿ!
– ಕಾಲೇಜು ಹಾಗೂ ಕುಟುಂಬದ ಅಭಿನಂದನೆಗಳು
– ಹ್ಯಾಂಡ್ ಬಾಲ್ ಕ್ರೀಡೆಯಲ್ಲೂ ಸಾಧನೆ
NAMMUR EXPRESS NEWS
ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಉಡುಪಿ ಇವರ ಆಸರೆಯಲ್ಲಿ ಜಿಲ್ಲಾಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟವು ಜನತಾ ಪಿ ಯು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಪನ್ನಗ ವೈ ಪಿ
ಕುಸ್ತಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹ್ಯಾಂಡ್ ಬಾಲ್ ಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಸ್ತಿ ಪಂದ್ಯಾಟದಲ್ಲಿ ಪನ್ನಗ ವೈ ಪಿ ಪ್ರಥಮ ಸ್ಥಾನದ ಜೊತೆಗೆ ಚಿನ್ನದ ಪದಕವನ್ನು ಕೂಡ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಕೂಡ ಕುಸ್ತಿ ಪಂದ್ಯಾಟದಲ್ಲಿ ಬೆಳ್ಳಿಯ ಪದಕದ ಜೊತೆಗೆ ದ್ವಿತೀಯ ಸ್ಥಾನ ಕೂಡ ಪಡೆದುಕೊಂಡಿದ್ದಾರೆ.
ಇವನು ಸುಗುಣ ಕೆ ವಿ ರಂಜದಕಟ್ಟೆ ಇವರ ಮಗ ಪನ್ನಗ ವೈ ಪಿ ಇವರಿಗೆ
ಕಾಲೇಜು ಹಾಗೂ ಕುಟುಂಬದವರು ವತಿಯಿಂದ ಅಭಿನಂದನೆ.








