ಕರ್ನಾಟಕದ ಹನೂರ್ ಬಳಿ ಬಸ್ ಪಲ್ಟಿಯಾಗಿ ಒಬ್ಬ ವ್ಯಕ್ತಿಯ ಸಾವು, 70 ಜನರಿಗೆ ಗಾಯ
– ನಿಶ್ಚಿತಾರ್ಥ ಸಮಾರಂಭಕ್ಕೆ ಭಾಗವಹಿಸಲು ತೆರಳುತ್ತಿದ್ದ ಬಸ್ ಪಲ್ಟಿ
-ಒಬ್ಬ ವ್ಯಕ್ತಿ ಸಾವನ್ನಪ್ಪಿ, 70 ಮಂದಿ ಗಾಯಗೊಂಡಿದ್ದಾರೆ.
NAMMUR EXPRESS NEWS
ಕನಕಪುರ ತಾಲ್ಲೂಕಿನ ಕಬ್ಬಾಲು ಬಳಿಯ ಹನಿಯೂರು ಗ್ರಾಮದಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಲು ಶಾಗ್ಯ ಗ್ರಾಮದ 70 ಕ್ಕೂ ಹೆಚ್ಚು ಜನರು ಹೋಗಿದ್ದರು.
ಕೊತ್ತನೂರು-ಮಂಡಲಿ ಬಳಿಯ ತಿರುವಿನಲ್ಲಿ ಬಸ್ ಉರುಳಿಬಿದ್ದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಂಡಲಿ ಬಳಿ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿ, 70 ಮಂದಿ ಗಾಯಗೊಂಡಿದ್ದಾರೆ. ದೊಡ್ಡಿಂಡುವಾಡಿ ಗ್ರಾಮದ ನವೀನ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ







