ರಾಜಧಾನಿಯಲ್ಲಿ ಎಂಎಸ್ಎಮ್ಇ, ಸ್ಟಾರ್ಟ್ಅಪ್ ಕಾಂಕ್ಲೇವ್
– ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಸ್ವಾಗತ
– ಅಂತಾರಾಷ್ಟ್ರೀಯ ಚೇಂಬರ್ ಫಾರ್ ಸರಸ್ವತ್ ಎಂಟ್ರಪ್ರನರ್ಸ್, ಮಾಹೆ ಬೆಂಗಳೂರು ಸಹಯೋಗ
– ನೀವೂ ಸ್ಟಾರ್ಟ್ ಅಪ್ ಉದ್ಯಮಿಗಳಾ?.. ನೋಂದಾಯಿಸಿಕೊಂಡು ಪಾಲ್ಗೊಳ್ಳಿ.. ಉದ್ಯಮ ಆಸಕ್ತರಿಗೂ ಅವಕಾಶ
NAMMUR EXPRESS NEWS
ಅಂತಾರಾಷ್ಟ್ರೀಯ ಚೇಂಬರ್ ಫಾರ್ ಸರಸ್ವತ್ ಎಂಟ್ರಪ್ರನರ್ಸ್, ಮಾಹೇ ಬೆಂಗಳೂರು ಸಹಯೋಗದಲ್ಲಿ 2024 ನೇ ಸಾಲಿನ ಎಂಎಸ್ಎಮ್ಇ ಮತ್ತು ಸ್ಟಾರ್ಟ್ಅಪ್ ಕಾಂಕ್ಲೇವ್ ಮತ್ತು ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್, 16ನೇ ನವೆಂಬರ್ 2024 ರಂದು ರಾಜಧಾನಿ ಬೆಂಗಳೂರಲ್ಲಿ ನಡೆಯುತ್ತಿದೆ. ನ.16ರ ಬೆಳಿಗ್ಗೆ 9 ಗಂಟೆಗೆ ಡಾ. ರಾಮದಾಸ್ ಎಂ ಪೈ ಕನ್ವೆನ್ಶನ್ ಹಾಲ್, ಮಾಹೇ ಬೆಂಗಳೂರು ಕ್ಯಾಂಪಸ್, ಯಲಹಂಕ, ಬೆಂಗಳೂರಿನಲ್ಲಿ ಎಂಎಸ್ಎಮ್ಇ ಮತ್ತು ಸ್ಟಾರ್ಟ್ಅಪ್ ಕಾಂಕ್ಲೇವ್ ಆರಂಭವಾಗಲಿದೆ.
ಸಾರಸ್ವತ ಸಮಾಜದ ನವೋದ್ಯಮಿಗಳು ಸೇರಿದಂತೆ ಎಲ್ಲಾ ಸಮುದಾಯದ ತಮ್ಮ ಹೆಸರನ್ನು ಕೆಳಗೆ ಕೊಟ್ಟಿರುವ ಸ್ಕ್ಯಾನರ್ ಮೂಲಕ ನೊಂದಾಯಿಸಿಕೊಳ್ಳಬಹುದು. ಈ ಕಾಂಕ್ಲೇವ್ ಸ್ಮಾಲ್ ಮತ್ತು ಮಿಡಿಯಂ ಎಂಟರ್ಪ್ರೈಸಸ್ ಕ್ಷೇತ್ರದ ಉದ್ಯಮಿಗಳನ್ನು, ಕೈಗಾರಿಕಾ ನಾಯಕರನ್ನು, ಉದ್ಯಮ ಕಟ್ಟುವ ಹಂಬಲವಿರುವ ಯುವ ಮನಸ್ಸುಗಳನ್ನು ಮತ್ತು ಔದ್ಯೋಗಿಕರ ಅಗ್ರಗಣ್ಯರನ್ನು ಒಂದುಗೂಡಿಸುವ ಉದ್ದೇಶದೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಉದ್ಯಮದ ಹೊಸ ಪಯಣಕ್ಕೆ ಅವಕಾಶ
ಸ್ಟಾರ್ಟ್ಅಪ್ ನಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಗೆ ಪ್ರೋತ್ಸಾಹ ನೀಡುವುದರೊಂದಿಗೆ ಎಂಎಸ್ಎಮ್ಇ ವಲಯದ ವಿಭಿನ್ನ ಸವಾಲುಗಳನ್ನು ಚರ್ಚಿಸಲು ಈ ವೇದಿಕೆ ಅವಕಾಶ ಒದಗಿಸುತ್ತದೆ. ಎಂಎಸ್ಎಮ್ಇ ಮತ್ತು ಸ್ಟಾರ್ಟ್ಅಪ್ ಕ್ಷೇತ್ರದ ತಜ್ಞರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಬ್ರಾಂಡಿಂಗ್, ಫಂಡಿಂಗ್ ಆಯ್ಕೆಗಳು, ಬಿಸಿನೆಸ್ ಸ್ಕೇಲಿಂಗ್, ನಿಯಮಾವಳಿ ಸೇರಿ ಬ್ಯುಸಿನೆಸ್ ಮಾರ್ಕೆಟ್ ಮುಂತಾದ ಪ್ರಮುಖ ವಿಷಯಗಳ ಕುರಿತಾಗಿ ಚರ್ಚೆ ಒಳಗೊಂಡಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಿಎ ಸಂಕೇತ್ ಎಸ್ ನಾಯಕ್
ಕಾರ್ಯಕ್ರಮ ಸಂಯೋಜಕರು, ಬೆಂಗಳೂರು
ದೂರವಾಣಿ ಸಂಖ್ಯೆ: 9731923402.
ಶಿಯಾ ಬ್ಯಾಕರ್
ಸೀನಿಯರ್ ಎಕ್ಸಕ್ಯೂಟಿವ್ ಮಾರ್ಕೆಟಿಂಗ್
ಮಾಹೆ, ಬೆಂಗಳೂರು
ದೂರವಾಣಿ ಸಂಖ್ಯೆ: 8156801972