ಶೃಂಗೇರಿ ಕ್ಷೇತ್ರ ಮರು ಮತ ಎಣಿಕೆ: ಜೀವರಾಜ್ ಹೇಳಿದ್ದೇನು?
* ಇನ್ನೊಂದು ತಿಂಗಳಲ್ಲಿ ತೀರ್ಪು ಬರಲಿದೆ ಎಂಬ ನಿರೀಕ್ಷೆ
* ಕ್ಷೇತ್ರದ ಶಾಸಕರ ಮೇಲೆ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಎಫ್ಐಆರ್
NAMMMUR EXPRESS NEWS
ಶೃಂಗೇರಿ ಕ್ಷೇತ್ರದ ವಿಧಾನಸಭಾ ಚುನಾವಣಾ ಮರುಮತ ಎಣಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಡಿ ಎನ್ ಜೀವರಾಜ್ ಪ್ರತಿಕ್ರಿಸಿದ್ದು, ಚರ್ಚೆಯಾಗುತ್ತಿರುವ ವಿಷಯಗಳ ಬಗ್ಗೆ ತಿಳಿಸಿದ್ದಾರೆ.
* ದೂರಿನ ಬಗ್ಗೆ ಜೀವರಾಜ್ ಹೇಳಿದ್ದೇನು ?
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಡಿ ಎನ್ ಜೀವರಾಜ್, ನಾನು ನನ್ನ ಮರು ಮತ ಎಣಿಕೆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ವಿಷಯ ಕೋರ್ಟ್ನಲ್ಲಿರುವ ಸಂದರ್ಭದಲ್ಲಿ ಮಾತನಾಡಿದರೆ ತಪ್ಪಾಗಲಿದೆ.ನನಗೆ ನ್ಯಾಯಲಯದ ಮೇಲೆ ಭರವಸೆ ಇದ್ದು,ಇನ್ನೊಂದು ತಿಂಗಳಲ್ಲಿ ತೀರ್ಪು ಬರಬಹುದು ಎಂಬ ಭರವಸೆಯಲ್ಲಿ ಇದ್ದೇನೆ.
ಎಲ್ಲವೂ ಒಳ್ಳೆಯದಾಗಲಿದೆ ಎಂಬ ನಂಬಿಕೆ ನನಗಿದೆ.
ಶೃಂಗೇರಿ ಕ್ಷೇತ್ರದ ಶಾಸಕರ ಮೇಲೆ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಎಫ್ಐಆರ್ ದಾಖಲಾಗಿದೆ.
2022 ರಲ್ಲಿ ದಿನೇಶ್ ಹೊಸೂರು ಎಂಬುವವರು ಲೋಕಾಯುಕ್ತಕ್ಕೆ ದೂರು ಕೊಟ್ಟಿರುತ್ತಾರೆ.
ಲೋಕಾಯುಕ್ತ ದೂರಿನಲ್ಲಿ ಶಾಸಕರು 2013 ರಿಂದ 2020 ವರೆಗೂ ಚುನಾವಣಾ ಅಫಿಡೆವಿಟ್ನಲ್ಲಿ ಆದಾಯ 40 ಲಕ್ಷ 38 ಲಕ್ಷ ಅಂತ ತೋರಿಸಿದ್ದಾರೆ, ಆದರೆ 13-02-2020ಕ್ಕೆ ಎನ್ ಆರ್ ಪುರ ಸಬ್ ರಿಜಿಸ್ಟ್ರಾರ್ ನಲ್ಲಿ 124 ಕೋಟಿ ರೂಪಾಯಿ ಸಾಲ ತೀರಿಸಿದ್ದೇನೆ,ಜೊತೆಗೆ ಆ ತೋಟವನ್ನು ಕೊಂಡುಕೊಂಡಿದ್ದೇನೆ ಅಂತ ತೋರಿಸಿದ್ದಾರೆ. ಆದರೆ ಶಾಸಕರಾದ ಮೇಲೆ 40 ಲಕ್ಷ ದಿಂದ ಕೋಟಿ ಆದಾಯ ಆಗಿದೆ,ಇಷ್ಟೊಂದು ಆಸ್ತಿ ಜಾಸ್ತಿ ಆಗಿದೆ ಎಂದು ಲೋಕಾಯುಕ್ತ ತನಿಖೆಗೆ ದೂರು ಕೊಟ್ಟಿರುತ್ತಾರೆ.
ಇದಕ್ಕೆ ಲೋಕಾಯುಕ್ತ ಯಾವುದೇ ಮಾಹಿತಿ ಕೊಡದೇ ಬಿ ರಿಪೋರ್ಟ್ ಕೊಟ್ಟು ಕೇಸ್ ಕ್ಲೋಸ್ ಮಾಡಿರುತ್ತಾರೆ,ಹೀಗಾಗಿ ದಿನೇಶ್ ಅವರು ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನಲ್ಲಿ ನನ್ನ ದೂರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಕೇಸ್ ಹಾಕಿರುತ್ತಾರೆ.
ಇದನ್ನು ಗಮನಿಸಿದ ಸಿ ಟಿ ಸಿವಿಲ್ ಕೋರ್ಟ್ನ ನ್ಯಾಯಾಧೀಶರು ಎಫ್ಐಆರ್ ದಾಖಲಿಸಿ ಸೂಕ್ತ ತನಿಖೆ ಮಾಡುವಂತೆ ಆದೇಶ ಮಾಡುತ್ತಾರೆ. 2013 ರಿಂದ 2020 ವರೆಗೂ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡರ ಆದಾಯ 38 ರಿಂದ 40 ಕೋಟಿ ರೂಪಾಯಿ ಇರುತ್ತದೆ.
ಇದನ್ನೆಲ್ಲಾ ಗಮನಿಸಿ ತನಿಖೆ ನಡೆಸಿದರೆ ಹಣ ಎಲ್ಲಿಂದ ಬಂತು?, ಹವಾಲಾ ಆಗಿದ್ಯಾ? ಅಥವಾ ಕಪ್ಪು ಹಣವಾ? ಎಂಬುದು ಹೊರಬರಲಿದ್ದು,ಸತ್ಯಾಸತ್ಯತೆ ಜನರಿಗೆ ತಿಳಿಯಲಿದೆ.








