ಯುವ ಸಹಕಾರಿ ಅಜಿತ್ ಅವರಿಗೆ ಮಹತ್ವದ ಹುದ್ದೆ
– ಶಿವಮೊಗ್ಗ ಜಿಲ್ಲಾ ಸಹಕಾರ ಕ್ಷೇತ್ರಕ್ಕೆ ಅಜಿತ್ ಗೌಡ ಎಂಟ್ರಿ
– ಜಿಲ್ಲಾ ಸಹಕಾರಿ ಮಾರಾಟ ಒಕ್ಕೂಟಕ್ಕೆ ತೀರ್ಥಹಳ್ಳಿಯ ನಿರ್ದೇಶಕರಾಗಿ ಆಯ್ಕೆ
NAMMUR EXPRESS NEWS
ಶಿವಮೊಗ್ಗ: ಜಿಲ್ಲಾ ಸಹಕಾರಿ ಮಾರಾಟ ಒಕ್ಕೂಟಕ್ಕೆ ತೀರ್ಥಹಳ್ಳಿಯ ನಿರ್ದೇಶಕರಾಗಿ ತೀರ್ಥಹಳ್ಳಿ ಶರಾವತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ವಿ. ಅಜಿತ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಮೂಲಕ ಜಿಲ್ಲಾ ಸಹಕಾರ ಕ್ಷೇತ್ರಕ್ಕೆ ಅಜಿತ್ ಎಂಟ್ರಿ ಆಗಿದ್ದಾರೆ.
ಇತ್ತೀಚಿಗೆ ಜರುಗಿದ ನಿರ್ದೇಶಕರುಗಳ ಆಯ್ಕೆ ಸಂದರ್ಭದಲ್ಲಿ ಅಜಿತ್ ಅವರ ಕಾರ್ಯ ಚಟುವಟಿಕೆ ಮತ್ತು ಸಹಕಾರಿ ಸಂಘಗಳ ಅಭಿವೃದ್ಧಿಯತ್ತ ಅವರಿಗಿರುವ ಆಸಕ್ತಿ ಮತ್ತು ಕಾಳಜಿಯನ್ನು ಗಮನಿಸಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಹೆಚ್. ವಿ.ಅಜಿತ್ ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಆಲೋಚನೆ ಮತ್ತು ಚಿಂತನೆಗಳನ್ನೂ, ಮುಂದಾಲೋಚನೆಗಳನ್ನೂ ಇರಿಸಿಕೊಂಡಿರುವ ಓರ್ವ ಕ್ರಿಯಾಶೀಲ ಯುವಕ. ಎಂ ಟೆಕ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೈ ತುಂಬಾ ಸಂಬಳ ಗಳಿಸಿಕೊಳ್ಳಬಹುದಾದ ಅವಕಾಶಗಳಿದ್ದರೂ ಕೂಡ ಅದಕ್ಕೆ ಹಾತೊರೆಯದೇ ತಮ್ಮ ತಂದೆ ಬಸವಾನಿ ವಿಜಯ ದೇವ್ರವರ ಮಾರ್ಗದರ್ಶನದಂತೆ ಸಹಕಾರಿ ಕ್ಷೇತ್ರದಲ್ಲೇ ಮುಂದುವರಿಯಲು ಮನಸ್ಸು ಮಾಡಿದರು. ಅತ್ಯಂತ ಸೌಮ್ಯ ಸ್ವಭಾವಿಯೂ,ಸರಳತೆಯನ್ನು ಮೈಗೂಡಿಸಿಕೊಂಡ ಅಜಿತ್ ಸಹಕಾರ ಕ್ಷೇತ್ರದಲ್ಲಿ ಮಹತ್ವದನ್ನೂ ಸಾಧಿಸಬಹುದಾದ ಆಲೋಚನೆ ಇಲ್ಲವೆಂದು ಬಹಳಷ್ಟು ಜನ ಅಂದುಕೊಂಡಿದ್ದರು. ಆದರೆ ಶರಾವತಿ ಪತ್ತಿನ ನಿರ್ದೇಶಕರಾಗಿ ಆಯ್ಕೆಗೊಂಡು ಶರಾವತಿ ಪತ್ತಿನ ಅಧ್ಯಕ್ಷರಾದ ನಂತರ ಇಲ್ಲಿ ಅಜಿತ್ ಅವರು ಸಾಧಿಸಿದ ಸಾಧನೆ ಮತ್ತು ಸೊಸೈಟಿಯನ್ನು ಪ್ರಗತಿಯತ್ತ ಕೊಂಡೊಯ್ದ ದಿಟ್ಟ ಕ್ರಮ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಸೊಸೈಟಿ ಎಂದಾದರೂ ಒಂದು ದಿನ ನಷ್ಟ ಸಂಭವಿಸಿದರೆ ಈ ಸೊಸೈಟಿಯಲ್ಲಿ ಷೇರು ತೊಡಗಿಸಿರುವ ಠೇವಣಿ ಇಟ್ಟಿರುವವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಪಟ್ಟಣದ ಹೃದಯ ಭಾಗಗಳಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿ ಖರೀದಿಸಿ ಷೇರುದಾರರಿಗೆ ಭದ್ರತೆ ಕಲ್ಪಿಸಿರುವುದು ಅಜಿತ್ ರವರಲ್ಲಿನ ಪ್ರಗತಿಗಾಮಿ ಧೋರಣೆಯನ್ನು ತೋರಿಸುತ್ತದೆ. ತಾನೊಂದು ಸಂಸ್ಥೆಯ ಅಧ್ಯಕ್ಷನಾಗಿದ್ದರೂ ಸಹ ಹಮ್ಮು-ಬಿಮ್ಮು ತೋರದೆ ಅತ್ಯಂತ ಸರಳತೆಯಿಂದ ಎಲ್ಲರೊಂದಿಗೆ ಬೆರೆಯುವ ಅಜಿತ್ಗೆ ಶಿವಮೊಗ್ಗ ಜಿಲ್ಲಾ ಸಹಕಾರಿ ಮಾರಾಟ ಒಕ್ಕೂಟದ ನಿರ್ದೇಶಕರ ಹುದ್ದೆ ಸಹಕಾರಿ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರದ ಹುದ್ದೆ ಅಲಂಕರಿಸಲು ಮೆಟ್ಟಿಲಾಗಿದೆ.
ಯುವ ಸಹಕಾರಿಯಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮೆಲರ ಆಶಯ.








