ಮಧುಸೂದನ್ ನಾವಡ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ
– ಜೆಸಿಐ ಭಾರತದ ವಲಯ 24ರ ನೂತನ ವಲಯಾಧ್ಯಕ್ಷರಾಗಿ ಆಯ್ಕೆ
– ವಲಯ ಉಪಾಧ್ಯಕ್ಷರಾಗಿ ಜೆಎಫ್ಎಂ ಅಭಿಜಿತ್ ಹಿರಿಯ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ನಡೆದ ವಲಯ ಸಮ್ಮೇಳನ ವಿಜಯಪಥದಲ್ಲಿ ಜೆಸಿಐ ಭಾರತದ ವಲಯ 24ರ 2026ನೇ ಸಾಲಿನ ನೂತನ ವಲಯಾಧ್ಯಕ್ಷರಾಗಿ ಜೆಸಿಐ ಹೊಸನಗರ ಡೈಮಂಡ್ ಘಟಕದ ಪೂರ್ವ ಅಧ್ಯಕ್ಷರು, ಪ್ರಸ್ತುತ ವಲಯ ಉಪಾಧ್ಯಕ್ಷರು ಆದ ಜೆ ಎಫ್ ಡಿ ಸಿಎ ಮಧುಸೂದನ್ ನಾವಡರವರು ಆಯ್ಕೆ ಆಗಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರು, ಪ್ರಸಿದ್ಧ ಆಡಿಟರ್ ಆಗಿರುವ ನಾವುಡ ಅವರು ಇದೀಗ ರಾಷ್ಟ್ರ ಮಟ್ಟದಲ್ಲಿ ಹುದ್ದೆ ಅಲಂಕಾರ ಮಾಡಿದ್ದಾರೆ.
ಜೆಸಿಐ ತೀರ್ಥಹಳ್ಳಿ ಘಟಕದ ಪೂರ್ವ ಅಧ್ಯಕ್ಷರು, JC SAT ಟಾಸ್ಕ್ ಫೋರ್ಸ್ ರಾಷ್ಟ್ರೀಯ ಸಂಯೋಜಕರೂ, ಹಿರಿಯ ಟೆಕ್ನಾಲಜಿಸ್ ತೀರ್ಥಹಳ್ಳಿ ಇದರ ಮಾಲೀಕರು ಆದ ಜೆಎಫ್ಎಂ ಅಭಿಜಿತ್ ಹಿರಿಯರವರು ವಲಯ ಉಪಾಧ್ಯಕ್ಷರಾಗಿ ಹಾಗೆಯೇ ಜೆಸಿ ಕುಮಾರ್ ಬೆನ್ನಿ, ಜೆಸಿ ಅಮೃತ್ ಛತ್ರಕಿ, ಜೆಸಿ ಗಣೇಶ್ ಪೈ ಅವರು ವಲಯ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುತ್ತಾರೆ. ಮುಂದಿನ ವರ್ಷ ವಲಯ 24ರಲ್ಲಿ ಹೆಚ್ಚಿನ ಬೆಳವಣಿಗೆಯೊಂದಿಗೆ ಯಶಸ್ಸು ಸಿಗಲಿ ಎಂದು ಜೆಸಿ ತೀರ್ಥಹಳ್ಳಿ ಘಟಕದ ಅಧ್ಯಕ್ಷರಾದ ಜೆಸಿ ಅರುಣ್ ಕುಮಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನಿಕಟ ಪೂರ್ವ ಅಧ್ಯಕ್ಷರೂ ಆದ ಜೆಸಿ ಹರೀಶ್ ಸರ್ಜಾ, ಜೆಸಿಐ ತೀರ್ಥಹಳ್ಳಿ ಘಟಕದ ಕಾರ್ಯಕಾರಿ ಸಮಿತಿ, ಘಟಕದ ಪೂರ್ವ ಅಧ್ಯಕ್ಷರು ಹಿರಿಯ ಸದಸ್ಯರೆಲ್ಲರೂ ಶುಭ ಹಾರೈಸಿದ್ದಾರೆ.








