ಬೀದಿ ನಾಯಿ ಕಡಿತದಿಂದ ವ್ಯಕ್ತಿ ಸತ್ತರೆ 5 ಲಕ್ಷ ಪರಿಹಾರ!
– ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ: ಏನಿದು ಆದೇಶ
– 2025ರ 7 ತಿಂಗಳಲ್ಲಿ ಒಟ್ಟು 23 ಮಂದಿ ನಾಯಿಗಳಿಗೆ ಬಲಿ!
NAMMUR EXPRESS NEWS
ಬೆಂಗಳೂರು : ಬೀದಿ ನಾಯಿ ಕಡಿತದಿಂದ ವ್ಯಕ್ತಿ ಮೃತಪಟ್ಟರೆ 5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಮಹತ್ವದ ಆದೇಶ ಹೊರಡಿಸಿದೆ.ಈ ಹಿಂದೆ ಇದ್ದ ಆದೇಶವನ್ನ ನಗರಾಭಿವೃದ್ಧಿ ಇಲಾಖೆ ತಿದ್ದುಪಡಿ ಮಾಡಿದೆ.
ಬೀದಿ ನಾಯಿ ದಾಳಿಗೆ ಒಳಗಾದ ಸಂತ್ರಸ್ತರಿಗೆ ಮಾತ್ರ ಜಿಬಿಎ ಪರಿಹಾರ ನೀಡಲಿದೆ. ನಿರ್ದಿಷ್ಟ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜಿಬಿಎ ಪಶುಪಾಲನಾ ವಿಭಾಗಕ್ಕೆ ಸಲ್ಲಿಸಬೇಕು. ಅರ್ಜಿಯಲ್ಲಿ ಹೆಸರು, ವಯಸ್ಸು, ಫೋಟೋ, ವಿಳಾಸ, ನಾಯಿ ದಾಳಿ ನಡೆದ ಸ್ಥಳ, ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ದಾಖಲೆಗಳ ವಿವರವನ್ನು ನಿಗದಿತ ಅವಧಿಯಲ್ಲಿ ನೀಡಬೇಕು. ಬಳಿಕ ಪಶುಪಾಲನಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ. ಅರ್ಜಿಯು ಜಿಬಿಎ ವೆಬ್ಸೈಟ್ನಲ್ಲಿ ಸಿಗುತ್ತದೆ.
ಯಾವ್ಯಾವ ವರ್ಷ ಎಷ್ಟು ಪರಿಹಾರ?
2016-1780 170,430, 2017-1880 3,60,645, 2018-19 8,42,963, 2019-2080 2,07,292, 2020-21 2,22,540, 2021-2280 4,85,431, 2022-23ರ ಮಾರ್ಚ್ ತನಕ 1,26,100 ಪರಿಹಾರ ನೀಡಲಾಗಿತ್ತು.
ಆಗಸ್ಟ್ನ ಮೊದಲ ವಾರ, 10 ಸಾವಿರಕ್ಕೂ ಅಧಿಕ ನಾಯಿ ಕಡಿತ
ಬೆಂಗಳೂರು ಮಾತ್ರವಲ್ಲದೆ ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ಮಿತಿಮೀರಿವೆ. ಆಗಸ್ಟ್ ತಿಂಗಳ ಮೊದಲ ಒಂದೇ ವಾರದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. 2025ರ 7 ತಿಂಗಳಲ್ಲಿ ಒಟ್ಟು 23 ಮಂದಿ ನಾಯಿಗಳ ಡೆಡ್ಲಿ ಅಟ್ಯಾಕ್ಗೆ ಉಸಿರು ಚೆಲ್ಲಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ 2 ಲಕ್ಷ 60 ಸಾವಿರ ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ..
ಬೀದಿ ನಾಯಿಗಳ ಭಯ!
2023ರ ಜನವರಿಯಿಂದ 2025ರ ಜುಲೈ 30 ರ ತನಕ 1,69,672 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. 2024 ಜನವರಿಯಿಂದ ಜೂನ್ 31ರ ತನಕ 2 ಲಕ್ಷದ 32 ಸಾವಿರ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ ಎನ್ನುತ್ತದೆ ವರದಿ







