ಮಲೆನಾಡು ಮತ್ತು ಕರಾವಳಿ ಒಕ್ಕೂಟಕ್ಕೆ ಅವಮಾನ, ಒಕ್ಕೂಟದ ಆಕ್ರೋಶ
* ಮಂಡಾಳೆ ಗ್ಯಾಂಗ್ ಎಂದಿದ್ದ ಬಿಜೆಪಿ ಮುಖಂಡ ರಾಮಸ್ವಾಮಿ ಶೆಟ್ಟಿಗದ್ದೆ
* ಸ್ವಾಮೀಜಿಗಳಿಗೆ ಅವಮಾನಿಸಿದ್ದೀರಿ – ಅನಿಲ್ ಹೊಸಕೊಪ್ಪ
NAMMMUR EXPRESS NEWS
ಶೃಂಗೇರಿ: ಮಲೆನಾಡು ಮತ್ತು ಕರಾವಳಿ ಒಕ್ಕೂಟವನ್ನು ಬಿಜೆಪಿ ಮುಖಂಡ ಶೆಟ್ಟಿಗದ್ದೆ ರಾಮಸ್ವಾಮಿ ಅವರು ಸಭೆಯಲ್ಲಿ ಅವಮಾನಿಸಿರು ವುದು ಖಂಡನೀಯ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುವ ನಮ್ಮ ತಂಡವನ್ನು ಅವಹೇಳನಕಾರಿಯಾಗಿ ಟೀಕಿಸಿದ್ದಾರೆ. ಮಲೆನಾಡಿಗರ ಪರ ಧ್ವನಿ ಎತ್ತಿರುವ ಒಕ್ಕೂಟಕ್ಕೆ ಅವಮಾನ ಮಾಡಿದ್ದಾರೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗಲೂ ಜನರ ಸಮಸ್ಯೆಗೆ ಹೋರಾಟ ನಡೆಸಿದ್ದೇವೆ. ನಮ್ಮ ಸಭೆಗೆ ರಾಜಕೀಯ ಮುಖಂಡರು, ಶಾಸಕರು, ಮಾಜಿ ಸಚಿವರು ಬಂದಿದ್ದಾರೆ. ಇತ್ತೀಚೆಗೆ ಅರಣ್ಯ ಸಚಿವರ ಹೇಳಿಕೆ ವಿರುದ್ಧ ಚರ್ಚಿಸಲು ರಂಭಾಪುರಿ ಸ್ವಾಮೀಜಿ, ಗುಣನಾಥ ಸ್ವಾಮೀಜಿ ಭಾಗವಹಿಸಿದ್ದರು. ಇದು ಸ್ವಾಮೀಜಿಗಳಿಗೆ ಮಾಡಿದ ಅವಮಾನ ಎಂದಿದ್ದಾರೆ.
ಒಕ್ಕೂಟದ ಕಣದಮನೆ ಜಗದೀಶ್ ಮಾತನಾಡಿ, ಪಶ್ಚಿಮ ಘಟ್ಟವನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವ ವಿರುದ್ಧ ನಡೆದ ಒಕ್ಕೂಟದ ಹೋರಾಟದಲ್ಲಿ ಬಿಜೆಪಿಯ ಮಾಜಿ ಶಾಸಕ ಡಿ.ಎನ್ ಜೀವರಾಜ್ ಭಾಗವಹಿಸಿದ್ದರು. ಹಾಗಾದರೆ ಅವರನ್ನೂ ನೀವು ಅವಮಾನಿಸುವಿರಾ ಎಂದು ಪ್ರಶ್ನಿಸಿದರು.
ಒಕ್ಕೂಟದ ಬೆಂಗಳೂರು ನಗರ ಸಂಚಾಲಕ ಪ್ರವೀಣ್ ಹಗಡೂರು, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕಲ್ಲೋಳ್ಳಿ, ಕೆ.ಟಿ ಮಂಜುನಾಥ್, ಸಂಪೇಕೊಳಲು ರತ್ನಾಕರ್, ಸಂತೋಷ್ ಕಾಳ್ಯ, ಶುಭಕೃತ್ ಹೆಗ್ಡೆ, ಅವಿನಾಶ್, ಸುಬ್ಬಣ್ಣ, ಅಭಿ ಹುಲುಗಾರು, ಪ್ರದೀಪ್ ಯಡದಾಳು, ರಾಜ್ ಕುಮಾರ್ ಹೆಗ್ಡೆ ಭಾಗವಹಿಸಿದ್ದರು








