ಇಂದು ಕಿಗ್ಗಾದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ
* ಮಳೆದೇವರೆಂದೇ ಪ್ರಸಿದ್ಧಿ ಹೊಂದಿದ ಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿ
* ದೀಪೋತ್ಸವದ ಪ್ರಯುಕ್ತ ಹಲವು ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳು
NAMMMUR EXPRESS NEWS
ಶೃಂಗೇರಿ: ಮಳೆ ದೇವರೆಂದೇ ಪ್ರಸಿದ್ಧಿಯಾಗಗಿರುವ ತಾಲೂಕಿನ ಕಿಗ್ಗಾ ಶ್ರೀಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿಂದು ಸಾರ್ವಜನಿಕ ಲಕ್ಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಲಕ್ಷ ದೀಪೋತ್ಸವದ ಅಂಗವಾಗಿ ದೀಪೋತ್ಸವ ಸಮಿತಿ ಹಾಗೂ ದೇವಸ್ಥಾನದಿಂದ ಹಲವು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಜೆ 6 ಗಂಟೆಯಿಂದ ದೇವಸ್ಥಾನದ ಮುಂಭಾಗದಲ್ಲಿ ಸ್ಯಾಕ್ಸಫೋನ್ ವಾದನ,ಚಂಡೆ,ಕೊಳಲು ವಾದನ ಜುಗಲ್ ಬಂದಿ ನಡೆಯಲಿದ್ದು ನಂತರ ಸ್ಥಳೀಯ ಆಯ್ದ ಅಂಗನಾವಡಿ,ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 7:30 ಕ್ಕೆ ದೀಪೋತ್ಸವ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕಾಗಿ ಸಾರ್ವಜನಿಕ ಲಕ್ಷ ದೀಪೋತ್ಸವ ಸಮಿತಿ ವಿನಂತಿಸಿಕೊಂಡಿದೆ.








