ಗಾಂಧಿ ಮೈದಾನ ಅಂಗಡಿ ತೆರವಿಗೆ ಶಾಸಕರೇ ನೇರ ಕಾರಣ – ವೇಣುಗೋಪಾಲ್
* ಗಾಂಧಿಮೈದಾನ ವಿಚಾರದಲ್ಲಿ ಶಾಸಕರಿಗೆ ಮಾಹಿತಿಯ ಕೊರತೆ
* ಬಡವರ ಅಂಗಡಿಗಷ್ಟೇ ಹೊಳೆ ಕರಾಬು,ಪಾರ್ಕಿಂಗ್ ವಾಹನಗಳಿಗಿಲ್ಲ
NAMMMUR EXPRESS NEWS
ಶೃಂಗೇರಿ: ಗಾಂಧಿ ಮೈದಾನ ಅಂಗಡಿಗಳ ತೆರವು ವಿಚಾರವಾಗಿ ಶಾಸಕ ಟಿ ಡಿ ರಾಜೇಗೌಡ ಪ್ರತಿಕ್ರಿಯಿಸಿ ಅಂಗಡಿ ತೆರವು ವಿಚಾರಕ್ಕೆ ಸಂಪೂರ್ಣ ಶೃಂಗೇರಿಯ ಬಿಜೆಪಿ ನೇತೃತ್ವದ ಪಟ್ಟಣ ಪಂಚಾಯ್ತಿಯೇ ಹೊಣೆ ಎಂದು ಆರೋಪಿಸಿದ ಬೆನ್ನಲ್ಲೇ ಶೃಂಗೇರಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್ ಎಸ್ ವೇಣುಗೋಪಾಲ್ ನೇತೃತ್ವದಲ್ಲಿ ಪ ಪಂಯ ಎಲ್ಲಾ ಬಿಜೆಪಿ ಸದಸ್ಯರು ಸೇರಿ ಶಾಸಕ ರಾಜೇಗೌಡ ಮಾಡಿದ ಆರೋಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆಲ್ಲಾ ಶಾಸಕ ಹಾಗೂ ಅವರ ಹಿಂಬಾಲಕರ ದ್ವೇಷದ ರಾಜಕಾರಣವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಗಾಂಧಿ ಮೈದಾನದ ಅಂಗಡಿಗಳ ನೆಲಸಮಕ್ಕೆ ಬಂದ ಅಧಿಕಾರಿಗಳ ಬಳಿ ಯಾವುದೇ ಕೋರ್ಟ್ ಆದೇಶವಿರಲಿಲ್ಲ ಹಾಗಿದ್ದರೂ ಯಾರ ಒತ್ತಡಕ್ಕೆ ಮಣಿದು ತೆರವು ಕಾರ್ಯಚರಣೆ ನಡೆಸಿದ್ದಾರೆಂದು ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರಿಗೆ ಮಾಹಿತಿಯ ಕೊರತೆಯೋ? ಅಥವಾ ಉದ್ದೇಶಪೂರ್ವಕವಾಗಿ ಜನರನ್ನು ದಾರಿತಪ್ಪಿಸಲು ಸುಳ್ಳನ್ನು ಹೇಳಿದ್ದಾರೋ? ತಿಳಿದಿಲ್ಲ, ಹೈಕೋರ್ಟ್ ಆದೇಶವನ್ನು ಒಮ್ಮೆ ಇತರ ವಕೀಲರ ಬಳಿ ತೋರಿಸಿ ತಿಳಿದುಕೊಳ್ಳಲಿ, ಒಂದುವೇಳೆ ಆ ಹೈಕೋರ್ಟ್ ಆದೇಶದಲ್ಲಿ ಅಂಗಡಿಗಳನ್ನು ಕೀಳಬೇಕೆನ್ನುವ ಸೂಚನೆ ಇದ್ದಿದ್ದರೆ ಕಾನೂನಿಗೆ,ಕೋರ್ಟ್ಗೆ ಗೌರವಕೊಟ್ಟು ತೆರವಿಗೆ ಸಹಕರಿಸುತ್ತಿದ್ದರು.ಆದರೆ ತೆರವಿಗೆ ಬಂದ ಅಧಿಕಾರಿಗಳ ಅಂತಹ ಯಾವುದೇ ಆದೇಶ ಇರಲಿಲ್ಲ,ಆದೇಶ ಕೇಳಿದರೆ ಅವರಲ್ಲಿ ಇದ್ದ ಉತ್ತರ ಒಂದೇ ಈ ಹಿಂದೆ ತೆರವು ಆದೇಶ ಪ್ರಶ್ನಿಸಿ ನೀವು ಕೋರ್ಟ್ಗೆ ಹೋಗಿದ್ದೀರಿ ಈಗ ಅದು ವಜಾಗೊಂಡಿದೆ ಅದಕ್ಕಾಗಿ ತೆರವು ಮಾಡುತ್ತಿದ್ದೇವೆ ಎನ್ನುವುದಾಗಿ. ಆದರೆ ಹೈಕೋರ್ಟ್ ನೀಡಿದ ಸೂಚನೆಯಲ್ಲಿ ಹತ್ತು ವಾರಗಳ ಸಮಯ ನೀಡಿ ಅದರೊಳಗೆ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಿ ಬಗೆಹರಿಸಿಕೊಳ್ಳಿ ಎಂದು ಹೇಳಲಾಗಿತ್ತು,ಹೈಕೋರ್ಟ್ ಆದೇಶದ ಪ್ರತಿ ಕೈಸೇರುವಾಗ 6 ವಾರಗಳು ಕಳೆದಿತ್ತು ಆದೇಶ ಕೈಗೆ ಸಿಕ್ಕ ತಕ್ಷಣ ಅದರಂತೆಯೇ ವರ್ತಕರು ಜಿಲ್ಲಾ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಾಗಿ ವಿಚಾರಣೆ ಆರಂಭಗೊಂಡಿತ್ತು ಆದರೆ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನ್ಯಾಯಾಧೀಶರು ನಿಯುಕ್ತಿಯಾಗದ ಹಿನ್ನೆಲೆಯಲ್ಲಿ ಹಾಗೂ ಪ್ರಭಾರಿ ನ್ಯಾಯಾಧೀಶರು ಪ್ರಕರಣದ ಆದೇಶ ನೀಡುವ ಅಧಿಕಾರ ಇಲ್ಲವಾದ್ದರಿಂದ ಅ.23 ರಂದು ಕೋರ್ಟ್ನಲ್ಲಿ ವಿಚಾರಣೆ ನಡೆಸುವ ದಿನಾಂಕ ನಿಗದಿಯಾಗಿತ್ತು ಆದರೆ ಇದನ್ನೆಲ್ಲಾ ಅಧಿಕಾರಿಗಳ ಬಳಿ ಹೇಳಿದರೂ ಇದ್ಯಾವುದನ್ನು ಕೇಳುವ ವ್ಯವಧಾನ ಇಲ್ಲದೇ ಅಧಿಕಾರಿಗಳು ವರ್ತರ ಮೇಲೆ ರಾಕ್ಷಸೀ ಪ್ರವೃತ್ತಿ ತೋರಿಸಿ,ಬಡವರ 27 ಅಂಗಡಿಗಳನ್ನು ಜೆಸಿಬಿ ಮೂಲಕ ಬಲವಂತವಾಗಿ ನೆಲಸಮ ಮಾಡಲಾಗಿದೆ.
ಶಾಸಕರಿಕೆ ಮಾಹಿತ ಕೊರತೆ ಇದೆ ಕೋರ್ಟ್ ಆದೇಶ ಪ್ರತಿಯನ್ನು ತಮಗೆ ಗೊತ್ತಿರುವ ವಕೀಲರ ಬಳಿ ಒಮ್ಮೆ ತೋರಿಸಿ, ಈ ಮೂಲಕ ಅಧಿಕಾರಿಗಳು ತಪ್ಪಿದ್ದಾರೆ ಇದನ್ನು ಮುಂದಿನ ದಿನಗಳಲ್ಲಿ ವರ್ತಕರು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ ಹಾಗೂ ಮಾಡಿದ ತಪ್ಪಿಗೆ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದರು.
ಪಾರ್ಕಿಂಗ್ ವಿಚಾರವಾಗಿ ಶಾಸಕರು ನಾನು ಶಾಸಕನಾದ ಬಳಿಕ ಅದನ್ನು ಒಂದು ಕೋಟಿಯವರೆಗೆ ಆದಾಯ ಬರುವಂತೆ ಮಾಡಿದೆ ಅದು ನನ್ನ ಹೆಗ್ಗಳಿಕೆ ಈಗ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡ ಮತ್ತೆ ಅದೇ ಬೆಲೆಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ,ಆದರೆ ಪ್ರತಿವರ್ಷ ಶೃಂಗೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆಲ್ಲಾ ಪಾರ್ಕಿಂಗ್ ಹರಾಜಿನ ಮೊತ್ತ ಹೆಚ್ಚುತ್ತಾ ಹೋಯಿತೇ ವಿನಃ ಇದರಲ್ಲಿ ಶಾಸಕರ ಪಾತ್ರ ಏನೂ ಇಲ್ಲ,ಕಳೆದ ವರ್ಷ ತುಂಗಾ ನದಿಯ ಪ್ರವಾಹ ಬಂದಾಗಿನಿಂದ ಡಿ ಸಿ ಇದು ಹೊಳೇ ಕರಾಬಿನ ಜಾಗ ಎಂದು ಆದೇಶಿಸಿದ್ದರು ಆಗಿನಿಂದ ಉದ್ದೇಶಪೂರ್ವಕವಾಗಿ ಬಾಕಿ ಇಟ್ಟು ಈಗಲೂ ಕೂಡ ಪಾರ್ಕಿಂಗ್ ಹರಾಜು ನಡೆಯದಂತೆ ಮಾಡಿದ್ದಾರೆ ಇದರಿಂದ ಪಟ್ಟಣ ಪಂಚಾಯ್ತಿಗೆ ಬರುತ್ತಿದ್ದ ಸುಮಾರು 1 ಕೋಟಿಯಷ್ಟು ಆದಾಯ ಇಲ್ಲದಂತಾಗಿದೆ. ಇಷ್ಟಕ್ಕೆಲ್ಲ ಕಾರಣ ಯಾರು ಎಂಬುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಜಿಲ್ಲಾಧಿಕಾರಿಗಳ ಅಧೀನದಲ್ಲಿ ಬರುವ ಪಟ್ಟಣ ಪಂಚಾಯ್ತಿಯು ಅಲ್ಲಿನ ಪಾರ್ಕಿಂಗ್ ಟೆಂಡರ್ ಕೂಡ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳ ಸಮ್ಮುಖದಲ್ಲೇ ನಡೆಯುತ್ತದೆ ಇದರಲ್ಲಿ ಯಾವುದೇ ಒಳ ಒಪ್ಪಂದ ಮಾಡುವ ಯಾವುದೇ ಅವಕಾಶ ಇರುವುದಿಲ್ಲ,ಹಾಗೆ ಯಾರೂ ಮಾಡಿಯೂ ಇಲ್ಲ ಹಾಗೇನಾದರೂ ಒಳ ಒಪ್ಪಂದ ನಡೆದ ಮಾಹಿತಿ ಇದ್ದರೆ ಅಧಿಕಾರದಲ್ಲಿದ್ದ ಶಾಸಕರೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳ ಬೇಕಿತ್ತು, ವಿನಾ ಕಾರಣ ಶಾಸಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈಗ ಹೊಳೆ ಕರಾಬು ಎಂಬ ನೆಪ ಇಟ್ಟುಕೊಂಡು ಅಂಗಡಿಗಳ ತೆರವು ಮಾಡುತ್ತಿರುವ ಅಧಿಕಾರಿಗಳಿಗೆ ಹಾಗೂ ಇದರ ಹಿಂದೆ ಒತ್ತಡ ಹಾಕುತ್ತಿರುವ ಶಾಸಕರು,ಕಾಂಗ್ರೆಸ್ ನಾಯಕರುಗಳಿಗೆ ಹೊಳೆ ಕರಾಬು ಕೇವಲ 27 ಅಂಗಡಿಗಳಿಗೆ ಮಾತ್ರ ಸೀಮಿತವಾಗಿತ್ತಾ,ಅಂತಹಾ ನಕ್ಷೆ ಏನಾದರೂ ಇದೆಯಾ,ಇದ್ದರೆ ಈಗಲಾದರೂ ನಮಗೆ ಅದನ್ನು ನೀಡಲಿ ಒಬ್ಬ ಪ ಪಂ ಅಧ್ಯಕ್ಷನಾಗಿ ಕೇಳುತ್ತಿದ್ದೇನೆ ಕೊಡಲಿ,ಯಾವುದೇ ನಕ್ಷೆ,ಗಡಿ ಗುರುತು ಇಲ್ಲದೆ ಇವರಿಗೆ ಮನಬಂದಂತೆ,ಇವರ ಹಿಂಬಾಲಕರ ಬೆದರಿಕೆಗೆ ಹೆದರಿ ಅಂಗಡಿಗಳ ನೆಲಸಮ ಮಾಡಿಸಿ ಈಗ ಕ್ಷುಲ್ಲಕ ಕಾರಣಗಳನ್ನು ನೀಡಿ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ.ಇಷ್ಟೆಲ್ಲ ನಡೆದರೂ ವಾಹನಗಳ ಪಾರ್ಕಿಂಗ್ ಗಾಂಧಿ ಮೈದಾನದಲ್ಲೇ ನಡೆಯುತ್ತಿದ್ದು,ವಾಹನಗಳಿಗೆ ಹೊಳೆ ಕರಾಬು ಆದೇಶ ಅನ್ವಯವಾಗುತ್ತಿಲ್ಲ,ಶಾಸಕರಾಗಿ ಏಳು ವರ್ಷ ಕಳೆದರೂ ಶಾಸಕರು ಪಟ್ಟಣ ಪಂಚಾಯ್ತಿಗೆ ಯಾವುದೇ ಅನುದಾನ ನೀಡಿಲ್ಲ ಇದರಿಂದ ಪಟ್ಟದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಇದಕ್ಕೆಲ್ಲ ನೇರ ಕಾರಣ ಕ್ಷೇತ್ರದ ಶಾಸಕರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್ ಎಸ್ ವೇಣುಗೋಪಾಲ್,ಉಪಾಧ್ಯಕ್ಷ ಪ್ರಕಾಶ್ ಎಂ ಎಲ್,ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹರೀಶ್ ವಿ ಶೆಟ್ಟಿ,ಸದಸ್ಯರಾದ ರತ್ನಾಕರ ಶೆಟ್ಟಿ,ರಾಧಿಕ,ವಿದ್ಯಾರವರುಗಳು ಉಪಸ್ಥಿತರಿದ್ದರು








