ಹಾಸನಾoಬೆ ದರ್ಶನಕ್ಕೆ 20 ಲಕ್ಷ ಜನ!
– ದೇಶದಲ್ಲೇ ಯಶಸ್ವಿ ಯಶಸ್ವಿ ಉತ್ಸವ: ಜಿಲ್ಲಾಡಳಿತ ಹರ್ಷ
– ೨೦ ಲಕ್ಷ ಭಕ್ತರಿಂದ ದರ್ಶನ: ೨೦ ಕೋಟಿ ಆದಾಯ
– ಅ. 22ರಂದು ಕೊನೆ ದಿನ: ಎಲ್ಲರ ಕಾಪಾಡು ಹಾಸನಾoಬೆ
– ಗುರುವಾರ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ
ನಮ್ಮೂರ್ ಎಕ್ಸ್ಪ್ರೆಸ್ ಹಾಸನ
ಹಾಸನ: ಹಾಸನಾಂಬೆ ದೇವಿ ದರ್ಶನಕ್ಕೆ ಕೇವಲ ಒಂದು ದಿನ ಬಾಕಿ ಇದ್ದು, ಗುರುವಾರ ಮಧ್ಯಾಹ್ನ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ೨ಲಕ್ಷ ಜನರು ದರ್ಶನ ಪಡೆದಿದ್ದಾರೆ. ಪ್ರಸ್ತುತ ವರ್ಷ ಇಲ್ಲಿಯವರೆಗೆ ೨೩ ಲಕ್ಷ ಜನರು ಜನರು ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ವರ್ಷ ೩೦೦/೧೦೦೦ ಟಿಕೆಟ್ ಸಾಲಿನಲ್ಲಿ ೩,೪೦,೨೬೦ ಜನರು ದರ್ಶನ ಪಡೆದಿದ್ದಾರೆ ಎಂದರು.
ಇಂದು ರಾತ್ರಿ ೯ ಗಂಟೆಗೆ ಬಾಗಿಲು ಮುಚ್ಚಲಿದೆ. ಮಧ್ಯರಾತ್ರಿ ೧೨ ಗಂಟೆವರೆಗೆ ದರ್ಶನ ಇರಲಿದೆ ಎಂದಿದ್ದಾರೆ. ಬುಧವಾರ ಬೆಳಿಗ್ಗೆ ೫ ರಿಂದ ದರ್ಶನ ಆರಂಭವಾಗಿ ಸಂಜೆ ೭ ಗಂಟೆವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಸಾರ್ವಜನಿಕ ದರ್ಶನ ಸಂಜೆ ೭ ಗಂಟೆಗೆ ಮುಗಿಯುತ್ತದೆ. ನಂತರ ಸಾರ್ವಜನಿಕ ದರ್ಶನ ಇರುವುದಿಲ್ಲ ಎಂದಿದ್ದಾರೆ. ಬಾಗಿಲು ಮುಚ್ಚುವ ಗುರುವಾರ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಇದುವರೆಗೂ ೨೩ ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ೧೦೦೦, ೩೦೦ ರೂ. ಲಾಡು ಪ್ರಸಾದ ಮಾರಾಟದಿಂದ ೨೦ ಕೋಟಿ ಆದಾಯ ಬಂದಿದೆ ಎಂದಿದ್ದಾರೆ.
ಇಂದು ಬೆಳಿಗ್ಗೆಯಿಂದ ಭಕ್ತರ ಸಂಖ್ಯೆ ಕಡಿಮೆ ಇತ್ತು. ಇಲ್ಲಿಯವರೆಗೂ ೬೮ ಸಾವಿರಕ್ಕೂ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರಿಂದ ನಿನ್ನೆಯೇ ಪ್ರೋಟೋಕಾಲ್ ಬಂದ್ ಮಾಡಿದ್ದೇವೆ ಎಂದರು.
ಪ್ರೋಟೋಕಾಲ್ ಮುಗಿದ ಮೇಲೂ ಕೆಲವು ಗಣ್ಯರು ಸ್ವಾಮೀಜಿಗಳು ಬರುತ್ತಿದ್ದಾರೆ. ಅವರನ್ನು ಪಾಸ್, ಸಾವಿರ ರೂ ಟಿಕೆಟ್ ಮೂಲಕ ಕರೆ ತಂದು ದೇವಿ ದರ್ಶನ ಮಾಡಿಸುತ್ತಿದ್ದೇವೆ ಎಂದರು.
ನಾಳೆ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ, ರಥೋತ್ಸವ ಇರುತ್ತದೆ. ನಾಳೆ ರಾತ್ರಿ ೧೨ ಗಂಟೆಯಿಂದ ಗುರುವಾರ ಬೆಳಿಗ್ಗೆ ೫ ಗಂಟೆವರೆಗೆ ದೇವಾಲಯದ ಸುತ್ತಲೂ ಇರುವವರಿಗೆ ಹಾಗೂ ಸಾರ್ವಜನಿಕರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ
ಗುರುವಾರ ಬೆಳಿಗ್ಗೆ ೫ ಗಂಟೆಯಿಂದ ಸಾರ್ವಜನಿಕ ದರ್ಶನ ಇರುವುದಿಲ್ಲ ಎಂದು ಹೇಳಿದರು.
ಈ ಬಾರಿಯ ಜಾತ್ರಾ ಮಹೋತ್ಸವ ಯಶಸ್ವಿಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಕೆಳವರ್ಗದ ಕಾರ್ಮಿಕರು ದುಡಿದಿದ್ದಾರೆ. ಇದರಿಂದಾಗಿ ಉತ್ಸವ ಅದ್ಧೂರಿಯಾಗಿ ನಡೆದಿದೆ ಎಂದರು.
ಇಂದು ಬೆಳಗ್ಗೆ ಭಕ್ತರ ಸಂಖ್ಯೆ ತುಸು ಕಡಿಮೆ ಇತ್ತು. ಧರ್ಮ ದರ್ಶನ ಸಾಲು ಖಾಲಿ ಖಾಲಿ ಇದ್ದವು. ೧೦೦೦, ೩೦೦ ಟಿಕೆಟ್ ಸಾಲು ಸಹ ಭಣಗುಡುತ್ತಿದ್ದವು.
ಶಾಸಕರಿಗೆ ಅಡೆ-ತಡೆ: ಇಂದು ದೇವಿ ದರ್ಶನಕ್ಕೆ ಆಗಮಿಸಿದ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ೧೦೦೦ ರೂ.ಟೆಕೆಟ್ ಪಡೆದು ಮಗ ಹಾಗೂ ಸ್ನೇಹಿತರ ಜೊತೆ ಬಂದರು.
ದೇವಾಸ್ಥನದ ಬಳಿ ಬರುತ್ತಿದ್ದಂತೆ ಬ್ಯಾರಿಕೇಡ್ನಿಂದ ಹೊರಗೆ ಬಂದು ಮುಖ್ಯದ್ವಾರದಿಂದ ತೆರಳಲು ಮುಂದಾದಾಗ ಗೇಟ್ ಬಳಿಯೇ ಬೇಲೂರು ತಹಸೀಲ್ದಾರ್ ಶ್ರೀಧರ್ ಶಾಸಕರನ್ನು ತಡೆದರು.
ಗೇಟ್ ಮೂಲಕ ಬಿಡದೆ ೧೦೦೦ ರೂ ಕ್ಯೂನಲ್ಲಿ ಹೋಗುವಂತೆ ಮನವಿ ಮಾಡಿದರು. ಅದೇ ವೇಳೆ ದೇವಾಲಯದ ಒಳಗೆ ಇದ್ದ ಸಂಸದ ಶ್ರೇಯಸ್ಪಟೇಲ್ಗೆ ಪುಟ್ಟರಂಗಶೆಟ್ಟಿ ಕರೆ ಮಾಡಿದರು.
ಆದರೂ ಮುಖ್ಯದ್ವಾರದಲ್ಲಿ ಅಧಿಕಾರಿಗಳು ಬಿಡಲಿಲ್ಲ.
ವಾಪಸ್ ೧೦೦೦ ರೂ.ಸಾಲಿಗೆ ಸೇರಿಕೊಂಡು ಶಾಸಕರು ಬಳಿ ಬಂದು ದೇವಿ ದರ್ಶನ ಪಡೆದರು








