ಗೀಸರ್ ಬಳಕೆ ಹುಷಾರ್…ಹುಷಾರ್…!
– ಹೆಚ್ಚುತ್ತಿರುವ ಗ್ಯಾಸ್ ಗೀಸರ್ ದುರಂತ
– ಮೈಸೂರಲ್ಲಿ ಇತ್ತೀಚಿಗೆ ಮಕ್ಕಳು ಇಬ್ಬರು ಸಾವು
NAMMUR EXPRESS NEWS
ರಾಜ್ಯದಲ್ಲಿ ಗ್ಯಾಸ್ ಗೀಸರ್ ದುರಂತ ದಿನೇ ದಿನೇ ಹೆಚ್ಚಾಗುತ್ತಿದೆ. ಗ್ಯಾಸ್ ಗೀಸರ್ ಸೋರಿಕೆಯಾಗಿ ಅನೇಕರು ಜೀವ ಬಿಟ್ಟಿದ್ದಾರೆ. ಈ ನಡುವೆ ಅನೇಕ ಘಟನೆಯಲ್ಲಿ ಅನೇಕರ ಸಾವಿಗೆ ಗೀಸರ್ ಕಾರಣ ಆಗಿದೆ.
ಇದಕ್ಕೆ ಇತ್ತೀಚಿಗೆ ನಡೆದ ಅನೇಕ ಪ್ರಕರಣಗಳು ಪುಷ್ಟಿ ನೀಡಿವೆ.
ಸ್ನಾನದ ಕೋಣೆಯಲ್ಲಿದ್ದ ಗ್ಯಾಸ್ ಗೀಸರ್ ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಅಕ್ಕ-ತಂಗಿ ಸಾವನ್ನಪ್ಪಿದ ದುರಂತ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.
ಗ್ಯಾಸ್ ಗೀಸರ್ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ದುರಂತ ಸಂಭವಿಸಿದೆ. ಗುಲ್ಫರ್ಮ್ ತಾಜ್ (23), ಸಿಮ್ರಾನ್ ತಾಜ್ (20) ಮೃತ ದುರ್ದೈವಿಗಳು.ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಸ್ನಾನದ ಕೋಣೆಗೆ ಹೋದಾಗ ಘಟನೆ ನಡೆದಿದೆ.
ಸ್ನಾನದ ಕೋಣೆಗೆ ಹೋದವರು ಬಹಳ ಸಮಯವಾದರೂ ಹೊರಗೆ ಬಂದಿಲ್ಲ. ಅನುಮಾನಗೊಂಡ ತಂದೆ ಅಲ್ತಾಫ್ ಬಾಗಿಲು ಬಡಿದಿದ್ದಾರೆ.ಆಗಲೂ ಬಾಗಿಲು ತೆಗೆದಿಲ್ಲ ತೆರೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿರೋದು ಗೊತ್ತಾಗಿದೆ.ತಕ್ಷಣ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಕೋಣೆಯಲ್ಲಿ ಕಿಟಕಿ ಇರಲಿಲ್ಲ.
ಬಾತ್ ರೂಮಲ್ಲಿ ಬಿದ್ದು ಯುವತಿ ಸಾವು
ಸ್ನೇಹಿತೆಯ ಎಂಗೇಜ್ಮೆಂಟ್ಗೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಯುವತಿ, ನಿಶ್ಚಿತಾರ್ಥದ ಮುನ್ನವೇ ಹೋಂಸ್ಟೇ ಬಾತ್ರೂಮ್ನಲ್ಲಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದ್ದು , ಮೃತ ಯುವತಿ ರಂಜಿತಾ (27) , ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿಯಾಗಿದ್ದಾಳೆ. ಈ ಘಟನೆಯು ಅಕ್ಟೋಬರ್ 25ರಂದು ನಡೆದಿದ್ದು, ರಂಜಿತಾ ಅವರು ಎಂಎಸ್ಸಿ ಪದವೀಧರರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ರಂಜಿತಾ, ಸ್ನೇಹಿತೆಯ ನಿಶ್ಚಿತಾರ್ಥಕ್ಕಾಗಿ ತನ್ನ ಸ್ನೇಹಿತೆ ರೇಖಾ ಅವರೊಂದಿಗೆ ಚಿಕ್ಕಮಗಳೂರಿಗೆ ಬಂದಿದ್ದರು. ನಿಶ್ಚಿತಾರ್ಥದ ಕಾರ್ಯಕ್ರಮವಿದ್ದ ಕಾರಣ, ಅವರು ಹಾಂದಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದರು. ಆದರೆ, ಇಂದು ಬೆಳಗ್ಗೆ ಸ್ನಾನಕ್ಕೆ ಹೋದಾಗ ಬಾತ್ರೂಮ್ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ರೇಖಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯ ಹಿಂದೆ ಹಲವು ಅನುಮಾನ ವ್ಯಕ್ತವಾಗಿದ್ದು, ಬಾತ್ರೂಮ್ನಲ್ಲಿ ಗೀಸರ್ನಿಂದ ಅನಿಲ ಸೋರಿಕೆಯಾಗಿ ರಂಜಿತಾ ಅವರು ಸಾವನ್ನಪ್ಪಿರುವ ಶಂಕೆಯಿದೆ. ಅನಿಲ ಸೋರಿಕೆಯಿಂದಾಗಿ ಉಸಿರುಗಟ್ಟಿ ಸಾವು ಸಂಭವಿಸುವ ಸಾಧ್ಯತೆಯನ್ನು ಪೊಲೀಸರು ಪರಿಗಣಿಸಿದ್ದಾರೆ. ಇನ್ನು ಅನೇಕ ಕಡೆ ಗೀಸರ್ ಸ್ಫೋಟಗೊಂಡು ಅನಾಹುತ ನಡೆದಿದೆ. ಇನ್ನಾದ್ರೂ ಜನರೇ ಎಚ್ಚರ. ಏಕೆಂದರೆ ನಿಮ್ಮ ಜೀವ ನಿಮ್ಮ ಜವಾಬ್ದಾರಿ…!







