ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣಕ್ಕೆ ಸಜ್ಜು!?
– ನವೆಂಬರ್ ಕ್ರಾಂತಿ ಆಗುತ್ತಾ…?…ಹಲವು ಕುತೂಹಲ
– ಡಿಕೆಶಿಗೆ ನಾಲ್ಕು ದಿನ ಶುಭ ದಿನಾಂಕ ಕೊಟ್ಟ ಗುರೂಜಿ
NAMMUR EXPRESS NEWS
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣಕ್ಕೆ ಸಜ್ಜು..ನವೆಂಬರ್ ಕ್ರಾಂತಿ ಆಗುತ್ತಾ…..ಹಲವು ಕುತೂಹಲ..ಡಿಕೆಶಿಗೆ ನಾಲ್ಕು ದಿನ ಶುಭ ದಿನಾಂಕ ಕೊಟ್ಟ ಗುರೂಜಿ…!
ಹೀಗೊಂದು ಚರ್ಚೆ ರಾಜಕಾರಣದಲ್ಲಿ ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಆಪ್ತ ಸಚಿವರು ಎಷ್ಟೇ ಅಪಸ್ವರ ಎತ್ತಿದರೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ನ.21 ಇಲ್ಲವೇ 26ಕ್ಕೆ ಅಧಿಕಾರ ವಹಿಸಿ ಕೊಳ್ಳುವ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.
ನಿರ್ದಿಷ್ಟ ದಿನ ಮತ್ತು ಶುಭ ಗಳಿಗೆಯ ಮಾಹಿತಿಯನ್ನು ಶಿವಕುಮಾರ್, ಭಕ್ತಿ- ಭಾವದಿಂದ ನಂಬಿರುವ ತುಮಕೂರು ಜಿಲ್ಲೆಯ ಮಠದ ಗುರುಗಳು, 21 ಹಾಗೂ 26 ಸೇರಿದಂತೆ ನಾಲ್ಕು ದಿನಗಳ ಶುಭ ಗಳಿಗೆಯ ಮುಹೂರ್ತ ದಿನಗಳ ನಿಗದಿಪಡಿಸಿದ್ದಾರೆ.
ಬರುವ ನವೆಂಬರ್ 20ಕ್ಕೆ ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಅವಧಿ ಪೂರ್ಣಗೊಳ್ಳಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಳ್ಳುವುದಕ್ಕೂ ಮುನ್ನ ವರಿಷ್ಠರ ಸಮ್ಮುಖದಲ್ಲಿ ತಲಾ ಎರಡೂವರೆ ವರ್ಷಗಳ ಅಧಿಕಾರಾವಧಿ ಸೂತ್ರ ರೂಪಿಸಲಾಗಿತ್ತು. ಅವರ ಅಧಿಕಾರಾವಧಿ ಪೂರ್ಣಗೊಳ್ಳುವ ರಾಜ್ಯದ 34ನೇ ಮುಖ್ಯಮಂತ್ರಿ ಪದಗ್ರಹಣಕ್ಕೆ ಮುಹೂರ್ತ ನಿಗದಿ. ನ.11ಕ್ಕೆ ದೆಹಲಿಗೆ ಡಿಸಿಎಂ ಡಿಕೆಶಿ ಭೇಟಿ; ಈಗಾಗಲೇ ವರಿಷ್ಠರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಸಮಯ ಹತ್ತಿರವಾಗುತ್ತಿದ್ದಂತೆ ಶಿವಕುಮಾರ್, ಕಳೆದ ಎರಡು ತಿಂಗಳಿನಲ್ಲಿ ಎರಡು- ಮೂರು ಬಾರಿ ಖಾಸಗಿ ಕಾರ್ಯಕ್ರಮ ಹೆಸರಿನಲ್ಲಿ ದೆಹಲಿಗೆ ತೆರಳಿ ವರಿಷ್ಠರನ್ನು ತೆರೆಮರೆಯಲ್ಲಿ ಭೇಟಿ ಮಾಡಿದ್ದರು.
ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಹಿರಿಯ ಮುಖಂಡ ರು ನೀಡಿರುವ ಭರವಸೆಯಂತೆ ಶಿವಕುಮಾರ್ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು-ಮೂರು ದಿನಗಳ ಹಿಂದೆ ಹಠಾತ್ತನೆ ದೆಹಲಿಗೆ ತೆರಳಿದ್ದ ಶಿವ ಕುಮಾರ್ ಕೆಲವು ನಾಯಕರನ್ನು ಭೇಟಿ ಮಾಡಿದ್ದರು, ಇದರ ನಂತರ ಮುಖ್ಯಮಂತ್ರಿ ಗಾದಿಗೇರುವುದು ಖಾತ್ರಿಯಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯದ 34ನೇ ಮುಖ್ಯಮಂತ್ರಿ ಯಾಗಿ ಶಿವಕುಮಾರ್ ಅಧಿಕಾರ ಸ್ವೀಕರಿಸಲು ಅಣಿಯಾಗಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಗೆ ಪುಷ್ಟಿ ಎಂಬಂತೆ ಶಿವಕುಮಾರ್ ಅವರ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಒಂದು ಹಾಕಿದ್ದು, ಅದರಲ್ಲಿ ಸಂಕ್ಷಿಪ್ತವಾಗಿ ವ್ಯಕ್ತಿ ಪರಿಚಯವನ್ನು ಇಂಗ್ಲೀಷ್ನಲ್ಲಿ ನೀಡಲಾಗಿದೆ.
ಬಿಹಾರ ವಿಧಾನಸಭಾ ಚುನಾ ವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆ ಯುವ ನ.11 ರಂದು ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಚುನಾವಣಾ ಪ್ರಚಾರ ಮುಗಿದು ಎಲ್ಲ ಮಷ್ಠ ನಾಯಕರು ದೆಹಲಿಗೆ ಹಿಂದಿರು ಗಿರುತ್ತಾರೆ. ಇದೇ ಸಮಯದಲ್ಲೇ ಅಧಿಕಾರ ಹಸ್ತಾಂತರ ಹಾಗೂ ಅಧಿಕಾರ ಸ್ವೀಕಾರ ಸಮಯ ಸೇರಿದಂತೆ ಎಲ್ಲವೂ ನಿಗದಿ ಯಾಗಲಿದೆ ಎಂದು ಮೂಲಗಳು ತಿಳಿಸಿವೆ.







