ಬಂಗಾರಪ್ಪ ಜನ್ಮ ದಿನೋತ್ಸವಕ್ಕೆ ಹುಟ್ಟೂರು ಸಜ್ಜು!
– ಅ. 26 ರಂದು ಬಂಗಾರಪ್ಪ -93 ಜನ್ಮ ದಿನೋತ್ಸವ ಕಾರ್ಯಕ್ರಮ
– ಬಂಗಾರಪ್ಪನವರ ಚಿಂತನೆಗಳು ಹಾಗೂ ಸುಸ್ಥಿರ ಬದುಕು ಪ್ರಸ್ತುತತೆಯ ವಿಷಯದ ಬಗ್ಗೆ ಚರ್ಚೆ
– ಬಂಗಾರ ಪ್ರಶಸ್ತಿ ಪ್ರದಾನ ಸಮಾರಂಭ: ಸರ್ವರಿಗೂ ಸ್ವಾಗತ
NAMMUR EXPRESS NEWS
ಎಸ್ ಬಂಗಾರಪ್ಪ ಫೌಂಡೇಶನ್ ಎಸ್ ಬಂಗಾರಪ್ಪ ವಿಚಾರ ವೇದಿಕೆ ಸಮಾಜವಾದಿ ಚಿಂತಕ, ಅಭಿವೃದ್ಧಿಯ ಹರಿಕಾರ ಬಡವರ ಬಂಧು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪ -93 ಜನ್ಮ ದಿನೋತ್ಸವ ನಮನ ಚಿಂತನ ಸನ್ಮಾನ ಕಾರ್ಯಕ್ರಮ ಅಕ್ಟೋಬರ್ 26ರ ಭಾನುವಾರ ಸಂಜೆ 5:00ಯಿಂದ ಈ ಕಾರ್ಯಕ್ರಮ ಬಂಗಾರಧಾಮ ಸೊರಬದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಚಾರ ಸಂಕೀರ್ಣ ಕಾರ್ಯಕ್ರಮ ಅಕ್ಟೋಬರ್ 26 ಭಾನುವಾರದಂದು ಬೆಳೆಗ್ಗೆ 10:30 ಕ್ಕೆ ಡಾ.ರಾಜಕುಮಾರ್ ರಂಗಮಂದಿರ ಸೊರಬದಲ್ಲಿ ಬಂಗಾರಪ್ಪನವರ ಚಿಂತನೆಗಳು ಹಾಗೂ ಸುಸ್ಥಿರ ಬದುಕು ಪ್ರಸ್ತುತತೆಯ ವಿಷಯದ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಜಿ ಸಿದ್ದರಾಮಯ್ಯ ಅವರು ನಡೆಸಿ ಕೊಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳೇಗೌಡ ನಾಗವಾರ ಮೈಸೂರು ಇವರು ನಡೆಸಿಕೊಡಲಿದ್ದಾರೆ. ವಿಚಾರ ಮಂಡನೆಯನ್ನು ಹೆಚ್ ಎಲ್ ಪುಷ್ಪ ಅವರ ಹಾಗೂ ಮಂಜುನಾಥ್ ಅವರು ನಡೆಸಿಕೊಳ್ಳಲಿದ್ದಾರೆ.
ಬಂಗಾರ ಪ್ರಶಸ್ತಿ ಪುರಸ್ಕೃತ ಸಾಹಿತ್ಯ ಬಂಗಾರ ಕಾಳೇಗೌಡ ನಾಗವಾರ ಪ್ರಸಿದ್ಧ ಸಾಹಿತಿಗಳು, ಮೈಸೂರು, ಧರ್ಮ ಬಂಗಾರ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ ಬೆಂಗಳೂರು ಇದರ ಪರವಾಗಿ ಎಲ್ ರೇವಣ್ಣ ಸಿದ್ದಯ್ಯ ನಿವೃತ್ತ ಪೋಲಿಸ್ ಮಹಾನಿರ್ದೇಶಕರು, ಜಾನಪದ ಕ್ಷೇತ್ರದಿಂದ ಬಂಗಾರ ರಾಧಾಬಾಯಿ ಮಾದರ್, ಕಲಾ ಕ್ಷೇತ್ರದಿಂದ ಬಂಗಾರ ರಾಜಣ್ಣ ರಂಗಭೂಮಿಯಿಂದ ಕಲಾವಿದರು ಗುಲ್ಬರ್ಗ ಇವರಿಗೆ ಬಂಗಾರ ಪ್ರಶಸ್ತಿ ಪುರಸ್ಕೃತ ನೀಡಲಾಗುತ್ತದೆ.
ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಕೆ. ಎಚ್ ಮುನಿಯಪ್ಪನವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆರ್ ವಿ ದೇಶಪಾಂಡೆ ಹಾಗೂ ಸಂತೋಷ್ ಲಾಡ್, ಬೇಳೂರು ಗೋಪಾಲಕೃಷ್ಣ, ಕೆ. ಎನ್ ತಿಲಕ್ ಕುಮಾರ್, ವೇಣುಗೋಪಾಲ್ ನಾಯಕ್, ನಾಗರಾಜ್ ಮೂರ್ತಿಯವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧು ಬಂಗಾರಪ್ಪ ನಡೆಸಿಕೊಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ವಿವಿಧ ಮೂಲೆಗಳಿಂದ ಬಂಗಾರಪ್ಪ ಅಭಿಮಾನಿಗಳು ಆಗಮಿಸಲಿದ್ದಾರೆ
ಆಯೋಜಕರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.








