ಕರ್ನಾಟಕ ಟಾಪ್ 3 ನ್ಯೂಸ್
ಆರ್ ಎಸ್ ಎಸ್ ನಿಷೇಧವೆ ಹೇರಿಲ್ಲ ಎಂದ ಸಿಎಂ!
– ಬಿಜೆಪಿ ಸರ್ಕಾರ ಮಾಡಿದ ಆದೇಶವನ್ನು ನಾವು ಮಾಡಿದ್ದೇವೆ
ದೀಪಾವಳಿಗೆ 3 ಆಕಾಶಕಾಯ ಗೋಚರ.!
– 1,350 ವರ್ಷಗಳಿಗೊಮ್ಮೆ ಲೆಮೆನ್ ಧೂಮಕೇತು ದರ್ಶನ
ಸಕ್ರೆಬೈಲು ಆನೆ ಬಿಡರಾದಲ್ಲಿನ ಆನೆಗಳಿಗೆ ಅನಾರೋಗ್ಯ
– ಶಿವಮೊಗ್ಗ ದಸರಾದಲ್ಲಿ ಪಾಲ್ಗೊಂಡ ಎರಡು ಆನೆಗೆ ಅನಾರೋಗ್ಯ
NAMMUR EXPRESS NEWS
ಪುತ್ತೂರು: ನಾವು ಆರ್ ಎಸ್ ಎಸ್ ನಿಷೇಧವೆ ಹೇರಿಲ್ಲ, ಅದರ ಉಲ್ಲೇಖವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ RSS ಚಟುವಟಿಕೆ ನಿಷೇಧ ಕುರಿತಂತೆ, ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ.ಯಾವುದೇ ಸಂಘ, ಸಂಸ್ಥೆಗಳು ಶಾಲಾ, ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ಜಗದೀಶ್ ಶೆಟ್ಟರ್ ನೇತೃತ್ವದ ಹಿಂದಿನ ಸರ್ಕಾರದಲ್ಲಿ ನಿಷೇಧಿಸಲಾಗಿತ್ತು. ಬಿಜೆಪಿ ಸರ್ಕಾರದ ಆದೇಶ ಮಾಡಿದ್ದನ್ನೇ ನಾವೂ ಪುನರುಚ್ಚರಿಸಿದ್ದೇವೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಸಂಘ, ಸಂಸ್ಥೆಗಳ ಕಾರ್ಯಕ್ರಮ, ಚಟುವಟಿಕೆಗಳಿಗೆ ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ಆರ್ಎಸ್ಎಸ್ ಎಂದು ಎಲ್ಲೂ ನಿರ್ದಿಷ್ಟ ಉಲ್ಲೇಖ ಮಾಡಿಲ್ಲ. ಬಿಜೆಪಿಯವರು ಮಾಡಿದ್ದ ಆದೇಶವನ್ನೇ ನಾವೂ ಮಾಡಿದ್ದೇವೆ. ಅವರು ಮಾಡಬಹುದು, ನಾವು ಮಾಡಬಾರದೇ ಎಂದು ಪ್ರಶ್ನಿಸಿದರು.
ದೀಪಾವಳಿಗೆ 3 ಆಕಾಶಕಾಯ ಗೋಚರ.!
ಅಕ್ಟೋಬರ್ ತಿಂಗಳ ಮೂರನೇ ವಾರದ ಕೊನೆ ಹಾಗೂ ಅಕ್ಟೋಬರ್ ಅಂತ್ಯಕ್ಕೆ ಲೆಮೆನ್, ಸ್ವಾನ್, ಅಟ್ಲಸ್ ಎಂಬ ಮೂರು ಧೂಮಕೇತುಗಳು ದೀರ್ಘವೃತ್ತದಲ್ಲಿ ಸೂರ್ಯನನ್ನು ಸುತ್ತು ಹೊಡೆಯುತ್ತಿರುವುದು ಗೋಚರಿಸಲಿವೆ. ಅವುಗಳಲ್ಲಿ ಲೆಮೆನ್ ಧೂಮಕೇತು ಮಾತ್ರ ಬರಿಗಣ್ಣಿಗೆ ಕಾಣಿಸುತ್ತಿದೆ ಎಂದು ಭೌತಶಾಸ್ತ್ರಜ್ಞ ಡಾ.ಎ.ಪಿ.ಭಟ್ ಮಾಹಿತಿ ನೀಡಿದ್ದಾರೆ. ಅ.21ರಂದು ಭೂಮಿಗೆ ಸುಮಾರು 90 ಮಿಲಿಯನ್ ಕಿ.ಮೀ. ಸಮೀಪ ಬಂದು ಸಂಜೆಯ ಕೆಲ ಸಮಯ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತಋಷಿ ಆಕಾಶಪುಂಜದ ಬಾಲದಲ್ಲಿರುವ ಮರೀಚಿ ನಕ್ಷತ್ರದ ಪಕ್ಕ ಹಾದು, ಸ್ವಾತಿ ನಕ್ಷತ್ರದ ಸಮೀಪದಲ್ಲಿ ಲೆಮೆನ್ ಧೂಮಕೇತು ಕಾಣಿಸಲಿದೆ. ನ.8ರಂದು ಸೂರ್ಯನ ಸಮೀಪ ತಲುಪಿ ಹಿಂತಿರುಗುತ್ತದೆ. 1,350 ವರ್ಷಗಳಿಗೊಮ್ಮೆ ಈ ಲೆಮೆನ್ ಧೂಮಕೇತು ಸೂರ್ಯನ ಸಮೀಪ ಬಂದು ಹೋಗುತ್ತದೆ. ಉಳಿದ ಎರಡು ಧೂಮಕೇತುಗಳಲ್ಲಿ ಅಟ್ಲಸ್ ಭಾರಿ ವಿಶೇಷ. ಅದು ಲೆಮನ್ ಹಾಗೂ ಸ್ವಾನ್ ಧೂಮಕೇತುಗಳಂತೆ ಸೌರವ್ಯೂಹದ ಊರ್ಸ್ ಕ್ಲಡ್ನಿಂದ ಬಂದುದಲ್ಲ. ಸೌರವ್ಯೂಹದ ಹೊರಗಿನಿಂದ ಅನಂತ ಆಕಾಶದಿಂದ ಬಂದಿದೆ ಎನ್ನಲಾಗುತ್ತದೆ. ಹೀಗಾಗಿ ಅದರ ಅಧ್ಯಯನ ಹೊಸ ವಿಚಾರಗಳನ್ನು ಒದಗಿಸುತ್ತಿದೆ. ಅದರಲ್ಲಿರುವ ಖನಿಜಗಳು ವಿಶ್ವ ಸೃಷ್ಟಿಯ ಅಧ್ಯಯನಕ್ಕೂ ಹೊಸ ಆಯಾಮ ಕೊಡುತ್ತಿವೆ ಎಂದು ತಿಳಿಸಿದ್ದಾರೆ.
– ಶಿವಮೊಗ್ಗ ದಸರಾದಲ್ಲಿ ಪಾಲ್ಗೊಂಡ ಎರಡು ಆನೆಗೆ ಅನಾರೋಗ್ಯ
ಶಿವಮೊಗ್ಗ : ಸಮೀಪದ ಸಕ್ರೆಬೈಲು ಆನೆ ಬಿಡರಾದಲ್ಲಿನ ಆನೆಗಳು ಅನಾರೋಗ್ಯಕ್ಕೆ ಒಳಗಾಗಿದ್ದು, ಈ ಪೈಕಿ ಪ್ರಸಿದ್ದ ನಾಡಹಬ್ಬ ಶಿವಮೊಗ್ಗ ದಸರಾ ಅಚರಣೆಯಲ್ಲಿ ಅಂಬಾರಿ ಹೊರುವುದಕ್ಕೆ ನಗರಕ್ಕೆ ಕರೆತರಲಾಗಿದ್ದ ಆನೆ ಬಾಲಣ್ಣನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇದು ಭಾರೀ ಆತಂಕ ಸೃಷ್ಟಿಸಿದೆ.
ಸಕ್ರೆಬೈಲು ಆನೆ ಬಿಡಾರದಲ್ಲೀಗ ಒಟ್ಡು ನಾಲ್ಕು ಆನೆಗಳು ಅನಾರೋಗ್ಯಕ್ಕೆ ಒಳಗಾಗಿವೆ. ಶಿವಮೊಗ್ಗ ದಸರಾ ಆಚರಣೆ ವೇಳೆ ಜಂಬೂ ಸವಾರಿ ಮೆರವಣಿಗೆಗೆ ಸಕ್ರೆಬೈಲು ಆನೆ ಬಿಡಾರದಿಂದ ಕರೆತಲಾಗಿದ್ದ ಬಾಲಣ್ಣ, ಸಾಗರ್, ಬಹದ್ದೂರ್ ಹೆಸರಿನ ಮೂರು ಆನೆಗಳ ಪೈಕಿ ಬಾಲಣ್ಣ ಹಾಗೂ ಸಾಗರ್ ಅನಾರೋಗ್ಯಕ್ಕೆ ಒಳಗಾಗಿವೆ. ಅದರ ಜೊತೆಗೆ ಆನೆಬಿಡಾರದಲ್ಲಿನ ವಿಕ್ರಾಂತ್ ಹಾಗೂ ಅಡಕ ಪಡಕ ಎನ್ನುವ ಅನೆಗಳು ಕೂಡ ಅನಾರೋಗ್ಯಕ್ಕೆ ಒಳಗಾಗಿವೆ. ಇದಕ್ಕೆ ಆನೆ ಬಿಡಾರದ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.
ಅಂಬಾರಿ ಹೊತ್ತಿದ್ದ ಬಾಲಣ್ಣನ ಕಿವಿಯ ಭಾಗದಲ್ಲಿ ಗಾಯವಾಗಿ ಹುಳುಗಳ ಬೀಳುತ್ತಿವೆ. ದಸರಾ ಅಂಬಾರಿಗೆ ಬಾಲಣ್ಣ ಹೋಗುವಂತಿರಲಿಲ್ಲ ಬಾಲಣ್ಣನಿಗೆ ಕಾಲು ನೋವಿತ್ತು ಅರ್ಜುನ ಹೋಗಬೇಕಾಗಿತ್ತು ಆದರೆ ಕೊನೆ ಗಳಿಗೆಯಲ್ಲಿ ಅರ್ಜುನನ ಬದಲಾಗಿ ಕಾಲು ನೋವಿದ್ದ ಬಾಲಣ್ಣನನ್ನು ದಸರಾ ಅಂಬಾರಿ ತಯಾರಿಗೆ ಕಳುಹಿಸಲಾಯಿತು. ಮೊದಲೇ ಕಾಲು ನೋವು ಹೇಳುವುದು ಯಾರ ಹತ್ತಿರ ಮೂಕ ಜೀವಿ ಅಂಬಾರಿಗೆ ಹೋಗಿ ಆಯ್ತು ಆದರೆ ಕಾಲು ನೋವು ಹೆಚ್ಚಾದಾಗ ಬಾಲಣ್ಣನಿಗೆ ಕಿವಿಗೆ ಇಂಜೆಕ್ಷನ್ ನೀಡಲಾಯಿತು ಇಬ್ಬರು ವೈದ್ಯರು ಎರಡು ಇಂಜೆಕ್ಷನ್ ಅನ್ನು ನೀಡಿದ್ದಾರೆ.
ಅದು ರಿಯಾಕ್ಷನ್ ಆಗಿ ಬಾಲಣ್ಣನ ಕಿವಿ ಈಗ ಕೊಳೆತು ಹೋಗಿದೆ ಹೊರಗಿನಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದು ಅದು ಫಲಕಾರಿಯಾಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.
ಅದೇ ರೀತಿ ಸಾಗರನಿಗೆ ಹೊಟ್ಟೆ ನೋವು ಎಂದು ಕೊಟ್ಟ ಇಂಜೆಕ್ಷನ್ನಿಂದ ಆದ ಗಾಯ ದೊಡ್ಡದಾಗಿದೆ. ಉಳಿದಂತೆ ವಿಕ್ರಾಂತ್ ಆನೆಯ ಕಾಲು ಕೊಳೆತು ಹೋಗಿದೆ. ಆಡ್ಕ ಬಡ್ಕಾ ಎನ್ನುವ ಕುಂದಾಪುರದ ಹಾಲಾಡಿ ಹತ್ತಿರ ಹಿಡಿದು ತಂದ ಆನೆ ಪರಿಸ್ಥಿತಿ ಕೂಡ ಸರಿ ಇಲ್ಲ ಎಂದು ಹೇಳಲಾಗಿದೆ. ಇಷ್ಟಾದರೂ ಸಕ್ರೆಬೈಲಿನಲ್ಲಿ ಆನೆಗಳ ಚಿಕಿತ್ಸೆಗಾಗಿ ಆಸ್ಪತ್ರೆ ಇಲ್ಲದಿರುವುದು ಸೋಜಿಗವಾಗಿದೆ. ಹಲವು ವರ್ಷಗಳಿಂದ ಇಲ್ಲಿ ಆನೆಬಿಡಾರವಿದೆ, ಆನೆಗಳೂ ಇವೆ. ಹೋಗಲಿ ಆನೆಗಳ ಆರೋಗ್ಯದ ಬಗ್ಗೆ ಮಾಹಿತಿ ಕೇಳೋಣವೆಂದರೆ ಯಾವ ಅಧಿಕಾರಿಗಳು ಮಾತಿಗೆ ಪ್ರತಿಕ್ರಿಯಿಸುತ್ತಿಲ್ಲ. ಅಲ್ಲಿಗೆ ಹೋದರೂ ಕೂಡ ಪ್ರವೇಶ ನೀಡುತ್ತಿಲ್ಲ. ಇವೆಲ್ಲವೂ ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ







