ದಾಖಲೆ ಬರೆದ ಅಡಿಕೆ ದರ:1 ಲಕ್ಷ ಗಡಿ ದಾಟಿದ ಸರಕು!
– ರೈತರಿಗೆ ಬಂಪರ್ ಬೆಲೆ: ಆದ್ರೆ ಅಡಿಕೆ ಸುಲಿತಕ್ಕೆ ಮಳೆ ಅಡ್ಡಿ
– ಬಯಲು ಸೀಮೆಯಲ್ಲಿ ಅಡಿಕೆ ಬೆಳೆಗಾರಿಗೆ ಬಂಗಾರದ ಬೆಲೆ
NAMMUR EXPRESS NEWS
ಅಡಿಕೆಗೆ ಈಗ ಚಿನ್ನದ ಬೆಲೆ, 1 ಲಕ್ಷ ಗಡಿ ದಾಟಿದ ಸರಕು ದರ ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ಏರಿಕೆಯಾಗಿದ್ದು, ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿದೆ. ಶಿವಮೊಗ್ಗದಲ್ಲಿ ಸರಕು ದರ ಒಂದು ಲಕ್ಷ ಗಡಿ ದಾಟಿದ್ದು, ಮಾರುಕಟ್ಟೆಯಲ್ಲಿ ಅಡಿಕೆ ಪೂರೈಕೆ ಸಂಪೂರ್ಣವಾಗಿ ಕುಸಿತ ಕಂಡುಬಂದಿರುವುದರಿಂದ ಈ ದರ ಏರಿಕೆ ಆಗಿರುವುದನ್ನು ನಾವು ಗಮನಿಸಬಹುದಾಗಿದೆ.
ರೈತರಿಗೆ ಬಂಪರ್ ಎಂದೇ ಹೇಳಬಹುದು. ಮಲೆನಾಡಿನ ಅಡಿಕೆ ಫಸಲು ಕೊಳೆ ರೋಗ ಮತ್ತು ಎಲೆ ಚುಕ್ಕಿ ರೋಗದಿಂದ ತೀವ್ರವಾಗಿ ಕಡಿಮೆಯಾಗಿದ್ದು, ಒಟ್ಟಾರೆ ಪೂರೈಕೆ ಕಡಿಮೆ ಉಂಟಾಗಿದೆ. ಆದರೆ ಈ ಬಾರಿ ಸಂಪೂರ್ಣವಾಗಿ ಅಡಿಕೆ ಫಸಲು ಕಡಿಮೆಯಾಗಿರುವುದರಿಂದ ದರ ಮಾತ್ರ ಏರಿಕೆಯಲ್ಲಿ ಸಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ.
ಅಡಿಕೆ ಸುಲಿತಕ್ಕೆ ಮಳೆ ಅಡ್ಡಿ
ಸತತವಾಗಿ ಸುರಿಯುತ್ತಿರುವ ಮಳೆ ಕಾರಣ ಮಲೆನಾಡಲ್ಲಿ ಅಡಿಕೆ ಸುಲಿತ ಮಾಡಲು ತೊಂದರೆ ಆಗಿದೆ. ಅಡಿಕೆ ಬೆಲೆಇದ್ದರೂ ಅಡಿಕೆಸುಲಿತ ಮಾಡಲಾಗುತ್ತಿಲ್ಲ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಬಯಲು ಸೀಮೆಯಲ್ಲಿ ಈಗಾಗಲೇ ಅಡಿಕೆ ಸುಲಿತ ಮಾಡುತ್ತಿರುವವರಿಗೆ ಅಡಿಕೆ ಬೆಳೆಗಾರಿಗೆ ಬಂಗಾರದ ಬೆಲೆ ಸಿಗುತ್ತಿದೆ.
ಅ. 24ರ ಶಿವಮೊಗ್ಗ ಮಾರುಕಟ್ಟೆ ದರ
ಸರಕು – 100007 – 85210
ಬೆಟ್ಟೆ – 76900 – 76600
ರಾಶಿ ಇಡಿ – 66501 – 64509
ಗೊರಬಲು – 46399 – 40099








