ತಿಮ್ಮಕ್ಕ ಇನ್ನಿಲ್ಲ
* ಮರಗಳನ್ನೇ ಮಕ್ಕಳಂತೆ ಸಾಕಿದ ಸಾಲುಮರದ ತಿಮ್ಮಕ್ಕ ವಿಧಿವಶ
* ಹಲವು ಗೌರವಕ್ಕೆ ಭಾಜನರಾಗಿದ್ದ ತಿಮ್ಮಕ್ಕ,ಅನಾರೋಗ್ಯದಿಂದ ನಿಧನ
NAMMMUR EXPRESS NEWS
ಬೆಂಗಳೂರು: ಮರಗಳನ್ನೇ ತನ್ನ ಸ್ವಂತ ಮಕ್ಕಳೆಂದು ಪ್ರೀತಿಸಿ,ಪೋಷಿಸಿ,ಬೆಳೆಸಿದ ಕರ್ನಾಟಕ ರಾಜ್ಯದ ಹೆಮ್ಮೆ 114 ವರ್ಷದ ಸಾಲುಮರದ ತಿಮ್ಮಕ್ಕ ನಿಧನರಾಗಿದ್ದಾರೆ.
ದೀರ್ಘ ಕಾಲದ ಒನಾರೋಗ್ಯದಿಂದ ಬಳಲುತ್ತಿದ್ದ ವೃಕ್ಷ ಮಾತೆ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಇಂದು ಕೊನೆಯುಸಿರೆಳೆದಿದ್ದಾರೆ.
* ರಾಜ್ಯ,ರಾಷ್ಟ್ರ ಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕ
ಜೂನ್ 30 1911 ರಲ್ಲಿ ಜನಿಸಿ ಮರಗಳನ್ನೆ ತನ್ನ ಮಕ್ಕಳೆಂದು ಭಾವಿಸಿ ಬೆಳೆಸಿದ ಸಾಲುಮರದ ತಿಮ್ಮಕ್ಕನವರಿಗೆ ನಾಡೋಜ,ಪರಿಸರ ರತ್ನ ಸೇರಿ ನೂರಾರು ಗೌರವ ಲಭಿಸಿದ್ದು,2021 ರಲ್ಲಿ ಪರಿಸರ ಸಂರಕ್ಷಣೆಗಾಗಿ ಗೌರವ ಡಾಕ್ಟರೇಟ್ ಲಭಿಸಿತ್ತು, 2019 ರಲ್ಲಿ ಬಿಬಿಸಿ ಪ್ರಕಟಿಸಿದ್ದ ವಿಶ್ವದ 100 ಜನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕರವರರ ಹೆಸರು ಉಲ್ಲೇಖವಾಗಿತ್ತು.CBSE,ರಾಜ್ಯ ಪುಸ್ತಕದಲ್ಲಿ ತಿಮ್ಮಕ್ಕನ ಪರಿಸರ ಪ್ರೇಮ ಪಠ್ಯ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ,ಇಂದಿರಾ ರತ್ನ ಪ್ರಶಸ್ತಿ,ದಿ ಗ್ರೀನ್ ಮದರ್ ಅವಾರ್ಡ್,ಮದರ್ ಆಫ್ ಟ್ರೀ ಅವಾರ್ಡ್,ವುಮೇನ್ ಎಂಪವರ್ಮೆಂಟ್ ಅವಾರ್ಡ್,ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಮಹಿಳಾ ಸಾಧನ ಪ್ರಶಸ್ತಿ,JSW ಚೆನ್ನೈ ಪ್ರಶಸ್ತಿ, ಪದ್ಮಶ್ರೀ ಗೌರವಗಳು ಸೇರಿದಂತೆ ನೂರಾರು ಪ್ರಶಸ್ತಿಗಳು ಲಭಿಸಿದ್ದವು.








